ಕಳೆದ ವರ್ಷ ಇಂದ್ರಜಿತ್ ಲಂಕೇಶ್ ತಮ್ಮ ಮಗ ಸಮರ್ಜಿತ್‌ನನ್ನು ಕನ್ನಡ ಚಿತ್ರರಂಗಕ್ಕೆ ನಾಯಕನನ್ನಾಗಿ ಪರಿಚಯಿಸಿದ್ದರು. ಸಮರ್ಜಿತ್ ಅಭಿನಯದ ‘ಗೌರಿ’ ಚಿತ್ರವು, ದೊಡ್ಡ ಯಶಸ್ಸು ಕಾಣದಿದ್ದರೂ, ಸಮರ್ಜಿತ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದವು. ಈಗ ಯಾಕೆ ಈ ವಿಷಯ ಎಂದರೆ, ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಕಲಾವಿದರು ಮತ್ತು ತಂತ್ರಜ್ಞರು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವುದು, ಅವರ ಮೊದಲ ಚಿತ್ರಗಳನ್ನು ತಾವೇ ನಿರ್ಮಿಸಿ-ನಿರ್ದೇಶಿಸುವುದು ಹೊಸ ವಿಷಯವೇನಿಲ್ಲ. ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ಟ್ರೆಂಡ್ ಹೆಚ್ಚಾಗುತ್ತಿರುವುದನ್ನು ನೋಡಬಹುದು.
ಇದೀಗ ಬಂದಿರುವ ಸುದ್ದಿಯ ಪ್ರಕಾರ, ಹಿರಿಯ ನಟ ಚರಣ್‌ರಾಜ್ ಬಹಳ ದಿನಗಳ ನಂತರ ಕನ್ನಡಕ್ಕೆ ವಾಪಸ್ಸಾಗಿದ್ದಾರೆ. ಈ ಬಾರಿ ಅವರು ನಟನೆ ಮಾತ್ರವಲ್ಲ, ನಿರ್ದೇಶನದಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ಚರಣ್‌ರಾಜ್ ನಿರ್ದೇಶಿಸಲಿರುವ ಹೊಸ ಚಿತ್ರವೊಂದು ಮಾರ್ಚ್ ಅಂತ್ಯದಲ್ಲಿ ಆರಂಭವಾಗಲಿದ್ದು, ಕನ್ನಡ, ತಮಿಳು, ತೆಲುಗು ಮೂರೂ ಭಾಷೆಗಳಲ್ಲಿ ಈ ಚಿತ್ರ ತಯಾರಾಗಲಿದೆ. ವಿಶೇಷವೆಂದರೆ, ಅವರ ದ್ವಿತೀಯ ಪುತ್ರ ದೇವ್ ಚರಣ್‌ರಾಜ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮಗನ ಮೊದಲ ಚಿತ್ರವನ್ನು ನಿರ್ದೇಶಿಸುವ ಮೂಲಕ ಚರಣ್‌ರಾಜ್ ನಿರ್ದೇಶಕರಾಗುತ್ತಿದ್ದಾರೆ.
ಈ ಮಧ್ಯೆ, ‘ದುನಿಯಾ’ ವಿಜಯ್ ತಮ್ಮ ಎರಡನೇ ಮಗಳು ಮೊನಿಷಾಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ವಿಜಯ್ ಮೊದಲ ಮಗಳು ರಿತನ್ಯಾ, ಕಳೆದ ವರ್ಷ ಪ್ರಾರಂಭವಾದ ಜಡೇಶ್ ಹಂಪಿ ನಿರ್ದೇಶನದ ‘ಲ್ಯಾಂಡ್ ಲಾರ್ಡ್’ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಈಗ ‘ಸಿಟಿ ಲೈಟ್ಸ್’ ಚಿತ್ರದ ಮೂಲಕ ವಿಜಯ್ ತಮ್ಮ ಎರಡನೇ ಮಗಳನ್ನು ಪರಿಚಯಿಸುತ್ತಿದ್ದು, ಈ ಚಿತ್ರವನ್ನು ಅವರೇ ನಿರ್ದೇಶಿಸುತ್ತಿದ್ದಾರೆ.
ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ನಾಯಕನಾಗಿ ಅಭಿನಯಿ ಸುತ್ತಿದ್ದು, ಈ ಚಿತ್ರದ ಮುಹೂರ್ತ ಇತ್ತೀಚೆಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿದೆ.
ಹಿರಿಯನಿರ್ಮಾಪಕ ಕೆ. ಮಂಜು ಅವರ ಮಗ ಶ್ರೇಯಸ್ ಮಂಜು, ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಗುರುತಿಸಿಕೊಂಡಿದ್ದಾಗಿದೆ. ಅಷ್ಟೇ ಅಲ್ಲ, ಎರಡು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದೂ ಆಗಿದೆ. ಈಗ ಶ್ರೇಯಸ್ ಅಭಿನಯದ ಮೂರನೆಯ ಚಿತ್ರವನ್ನು ಕೆ.ಮಂಜು ನಿರ್ಮಿಸಿದ್ದಾರೆ. ‘ವಿಷ್ಣುಪ್ರಿಯಾ’ ಎಂಬ ಈ ಚಿತ್ರವನ್ನು ಮಲಯಾಳಂನ ಜನಪ್ರಿಯ ನಿರ್ದೇಶಕ ವಿ.ಕೆ.ಪ್ರಕಾಶ್ ನಿರ್ದೇಶಿಸುತ್ತಿದ್ದು, ಇದು ಮುಂದಿನ ವಾರ, ಫೆ. ೨೧ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ ಇತ್ತೀಚೆಗೆ ನಡೆದಿದ್ದು, ಅಪ್ಪನ ಹುಟ್ಟು ಹಬ್ಬವನ್ನು ಶ್ರೇಯಸ್ ಆಚರಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ‘ಆರ್ಮುಗ’ ರವಿಶಂಕರ್ ಎಂದೇ ಗುರುತಿಸಿ ಕೊಂಡಿರುವ ಸಾಯಿ ಕುಮಾರ್ ಸಹೋದರ ರವಿಶಂಕರ್, ಇದೀಗ ‘ಸುಬ್ರಹ್ಮಣ್ಯ’ ಎಂಬ ಚಿತ್ರದ ಮೂಲಕ ತಮ್ಮ ಮಗ ಅದ್ವೈನನ್ನು ನಾಯಕನನ್ನಾಗಿ ಪರಿಚಯಿಸುತ್ತಿದ್ದಾರೆ. ಕಳೆದ ವರ್ಷ ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಸುಬ್ರಹ್ಮಣ್ಯ’ನ ಮೊದಲ ತುಣುಕನ್ನು ಬಿಡುಗಡೆ ಮಾಡಲಾಗಿದೆ. ಇದೊಂದು ಪ್ಯಾನ್‌ಇಂಡಿಯಾ ಚಿತ್ರವಾಗಿದ್ದು, ಎಸ್.ಜಿ. ಮೂವೀ ಮೇಕರ್ಸ್ ಸಂಸ್ಥೆಯ ಮೂಲಕ ತಿರುಮಲ ರೆಡ್ಡಿ ಹಾಗೂ ಅನಿಲ್ ಕಡಿಯಾಲ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಕೆದಕುತ್ತಾ ಹೋದರೆ, ಇನ್ನಷ್ಟು ಚಿತ್ರಗಳು ಉದಾಹರಣೆಯಾಗಿ ಸಿಗುತ್ತವೆ. ತಮ್ಮ ಮಕ್ಕಳು ಕೂಡ ಚಿತ್ರರಂಗದಲ್ಲಿ ತಮ್ಮ ತರಹವೇ ಹೆಸರು ಮಾಡಬೇಕು, ಜನಪ್ರಿಯತೆ ಪಡೆಯಬೇಕು ಎಂಬ ಆಸೆ ಪ್ರತಿಯೊಬ್ಬ ಕಲಾವಿದರು ಹಾಗೂ ತಂತ್ರಜ್ಞರಿಗೂ ಇದ್ದೇ ಇರುತ್ತದೆ. ಅದಕ್ಕೆ ಪೂರಕವಾಗಿ, ಬೇರೆಯವರು ಮುಂದೆ ಬರದಿದ್ದರೆ, ತಾವೇ ಪರಿಚಯಿಸುವುದಕ್ಕೆ, ಅವರ ವೃತ್ತಿ ಬದುಕಿಗೊಂದು ಬ್ರೇಕ್ಕೊ ಡುವುದಕ್ಕೆ ಮುಂದಾಗುತ್ತಿದ್ದಾರೆ. ಮಕ್ಕಳನ್ನು ಪರಿಚಯಿಸಬಹುದು, ಅವರ ಮೊದಲ ಚಿತ್ರಗಳನ್ನು ನಿರ್ಮಿಸಿ- ನಿರ್ದೇಶಿಸಬಹುದು. ಆದರೆ, ಮಕ್ಕಳು ನೆಲೆಯೂರಬೇಕೆಂದರೆ ಪ್ರತಿಭೆ, ಅವಕಾಶ, ಅದೃಷ್ಟ ಎಲ್ಲವೂ ಇರಬೇಕು. ಇದ್ದಾಗ ಮಾತ್ರ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವುದಕ್ಕೆ ಸಾಧ್ಯ. ಹೀಗೆ ಪರಿಚಿತರಾಗುತ್ತಿರುವ ಹೊಸ ಯುವಕ-ಯುವತಿಯರ ಪೈಕಿ ಎಷ್ಟು ಜನ ನೆಲೆಯೂರುತ್ತಾರೆಂದು ಕಾದು ನೋಡಬೇಕಿದೆ.
ಈ ಮಧ್ಯೆ, ‘ದುನಿಯಾ’ ವಿಜಯ್ ತಮ್ಮ ಎರಡನೇ ಮಗಳು ಮೊನಿಷಾಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ವಿಜಯ್ ಮೊದಲ ಮಗಳು ರಿತನ್ಯಾ, ಕಳೆದ ವರ್ಷ ಪ್ರಾರಂಭವಾದ ಜಡೇಶ್ ಹಂಪಿ ನಿರ್ದೇಶನದ ‘ಲ್ಯಾಂಡ್ ಲಾರ್ಡ್’ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಈಗ ‘ಸಿಟಿ ಲೈಟ್ಸ್’ ಚಿತ್ರದ ಮೂಲಕ ವಿಜಯ್ ತಮ್ಮ ಎರಡನೇ ಮಗಳನ್ನು ಪರಿಚಯಿಸುತ್ತಿದ್ದು, ಈ ಚಿತ್ರವನ್ನು ಅವರೇ ನಿರ್ದೇಶಿಸುತ್ತಿದ್ದಾರೆ.