Mysore
29
light rain

Social Media

ಗುರುವಾರ, 01 ಅಕ್ಟೋಬರ್ 2026
Light
Dark

ತೆಲುಗು ನಟ ನಾನಿ ಅಭಿಯನದ ‘ದಸರಾ’ ಸಿನಿಮಾ ಏ.27ರಂದು ಒಟಿಟಿಯಲ್ಲಿ ಬಿಡುಗಡೆ

ಮುಂಬೈ: ತೆಲುಗು ನಟ ನಾನಿ ಅಭಿಯನದ ಪ್ಯಾನ್ ಇಂಡಿಯಾ ಸಿನಿಮಾ ‘ದಸರಾ’ ಏಪ್ರಿಲ್‌ 27ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತು ನೆಟ್‌ಫ್ಲಿಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯನ್ನು ಹಂಚಿಕೊಂಡಿದೆ.

‘ಈಗ ಪಟಾಕಿಗಳ ಸದ್ದು ಕೇಳಿಸುವ ಸಮಯ ಏಕೆಂದರೆ ಈ ವರ್ಷದ ಆರಂಭದಲ್ಲಿ ತೆರೆ ಕಂಡಿದ್ದ ‘ದಸರಾ’ ಚಿತ್ರವು ಇದೀಗ ಇದೇ 27ರಂದು ಒಟಿಟಿಯಲ್ಲಿ ಬರಲಿದೆ ಎಂದು ನೆಟ್‌ಫ್ಲಿಕ್ಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

‘ದಸರಾ’ವನ್ನು ಶ್ರೀಕಾಂತ್ ಒಡೆಲಾ ನಿರ್ದೇಶಿಸಿದ್ದು, ಚಿತ್ರದಲ್ಲಿ ಹಳ್ಳಿಯ ಸೊಗಡನ್ನು ಬಿಂಬಿಸಲಾಗಿದೆ.

ದಸರಾ ಚಿತ್ರವು ಮಾರ್ಚ್ 30ರಂದು ತೆಲುಗು, ತಮಿಳು, ಮಲಯಾಳಂ, ಕನ್ನಡ ಸೇರಿದಂತೆ ಹಿಂದಿ ಭಾಷೆಯಲ್ಲಿ ಬಿಡುಗಡೆಗೊಂಡಿತ್ತು. ಚಿತ್ರವು ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ₹100 ಕೋಟಿ ಗಳಿಕೆ ಕಂಡಿದೆ.

‘ದಸರಾ’ ಚಿತ್ರದಲ್ಲಿ ಕೀರ್ತಿ ಸುರೇಶ್, ದೀಕ್ಷಿತ್ ಶೆಟ್ಟಿ, ಶೈನ್ ಟಾಮ್ ಚಾಕೋ, ಸಮುದ್ರಕನಿ, ಸಾಯಿ ಕುಮಾರ್ ಮತ್ತು ಪೂರ್ಣಾ ಕೂಡ ನಟಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!