Mysore
23
broken clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಸಂಘಿ ವಿವಾದ: ಮಗಳ ಹೇಳಿಕೆ ಸಮರ್ಥಿಸಿಕೊಂಡ ಸೂಪರ್‌ ಸ್ಟಾರ್‌!

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್ ಅವರು ಪುತ್ರಿ ಐಶ್ವರ್ಯ ಅವರ ವಿವಾದಾತ್ಮಕ ‘ಸಂಘ’ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. “ಐಶ್ವರ್ಯ ಈ ಬಗ್ಗೆ ತೀರ್ಪು ನೀಡುವ ಸ್ಥಾನದಲ್ಲಿಲ್ಲ; ತನ್ನ ತಂದೆಯನ್ನು ತಪ್ಪಾಗಿ ಲೇಬಲ್ ಮಾಡಲಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ’ ಎಂದು ರಜಿನಿಕಾಂತ್ ಹೇಳಿಕೆ ನೀಡಿದ್ದಾರೆ.

“ಸಂಘಿ ಎನ್ನುವುದು ಕೆಟ್ಟ ಪದ ಎಂದು ಐಶ್ವರ್ಯ ಎಲ್ಲೂ ಹೇಳಿಲ್ಲ. ನಾನು ಆಧ್ಯಾತ್ಮಿಕ ವ್ಯಕ್ತಿ ಎನ್ನುವುದು ಆಕೆಯ ಅಭಿಮತ. ನಾನು ಎಲ್ಲ ಧರ್ಮಗಳನ್ನು ಪ್ರೀತಿಸುತ್ತೇನೆ. ಆದರೂ ಜನ ನನ್ನನ್ನು ಸಂಘಿ ಎಂದು ಕರೆಯುತ್ತಾರೆ” ಎಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಟ ರಜನಿಕಾಂತ್‌ ಸ್ಪಷ್ಟನೆ ನೀಡಿದ್ದಾರೆ.

ಐಶ್ವರ್ಯ ನಿರ್ದೇಶನದ ಲಾಲ್ ಸಲಾಮ್ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭದ ವೇಳೆ ಜನವರಿ 26ರಂದು, “ನನ್ನ ತಂದೆಯನ್ನು ಸಂಘ ಎಂದು ಜನ ಕರೆಯುವುದು ನೋವು ತಂದಿದೆ” ಎಂದು ಹೇಳಿದ್ದರು. “ಅವರು ಸಂಘಿ ಆಗಿದ್ದರೆ, ಅವರು ಲಾಲ್ಸಲಾಂ ಚಿತ್ರದಲ್ಲಿ ನಟಿಸುತ್ತಿರಲಿಲ್ಲ’ ಎಂದಿದ್ದರು.

ರಜಿನಿಕಾಂತ್ ಅವರ ಟೀಕಾಕಾರರು ಐಶ್ವರ್ಯ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪಾದಸ್ಪರ್ಶ ಮಾಡಿರುವ ಚಿತ್ರಗಳನ್ನು ಹಾಗೂ ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!