Mysore
26
scattered clouds

Social Media

ಭಾನುವಾರ, 16 ಮಾರ್ಚ್ 2025
Light
Dark

ಸಂಚಾರಿ ವಿಜಯ್‌ ನೆನಪಾರ್ಥ ಇಂದಿನಿಂದ 5 ದಿನಗಳ ಕಾಲ ನಾಟಕೋತ್ಸವ

ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್‌ ಅವರ ಹೆಸರಿನಲ್ಲಿ ಸಂಚಾರಿ ಥಿಯೇಟರ್‌ ಆಗಸ್ಟ್‌ 5 ರಿಂದ 7ರವರೆಗೂ ನಾಟಕೋತ್ಸವ ಆಯೋಜಿಸಿದೆ. ಮೂರು ದಿನಗಳ ಕಾಲ ಬೆಂಗಳೂರಿನ ಕಲಾಗ್ರಾಮದ ರಂಗಮಂದಿರದಲ್ಲಿ ನಾಟಕೋತ್ಸವ ನಡೆಯಲಿದೆ. ಸಂಚಾರಿ ವಿಜಯ್‌ ಅಭಿನಯಿಸುತ್ತಿದ್ದ ಶ್ರೀದೇವಿ ಮಹಾತ್ಮೆ, ನರಿಗಳಿಗೇಕೆ ಕೋಡಿಲ್ಲ?, ಕಮಲಮಣಿ ಹಾಗೂ ಕಾಮಿಡಿ ಕಲ್ಯಾಣ ನಾಟಕಗಳನ್ನು ಪ್ರದರ್ಶನಗೊಳಿಸಲಾಗುವುದು. ಪ್ರತಿ ದಿನ ಸಂಜೆ 7 ಗಂಟೆಗೆ ನಾಟಕ ಆರಂಭವಾಗಲಿದೆ.

ಇಂದು ಸಂಜೆ (ಆ.5) ರಂಗಭೂಮಿ ನಿರ್ದೇಶಕ ಸುರೇಶ್‌ ಆನಗಳ್ಳಿ, ಕತೆಗಾರ ವಸುಧೇಂದ್ರ ಹಾಗೂ ರಂಗ ಸಂಘಟಕ ಶ್ರೀನಿವಾಸ್‌ ಜಿ ಕಪ್ಪಣ್ಣ ನಾಟಕೋತ್ಸವ ಉದ್ಘಾಟಿಸಲಿದ್ದಾರೆ. 2009ರಲ್ಲಿ ಸಂಚಾರಿ ಥಿಯೇಟರ್‌ಗೆ ಪಾದಾರ್ಪಣೆ ಮಾಡಿದ ವಿಜಯ್‌ ಅವರು ಸಂಚಾರಿ ಥಿಯೇಟರ್‌ನ ಎಲ್ಲ ನಾಟಕಗಳ ಭಾಗವಾಗಿದ್ದರು. ರಂಗಭೂಮಿಯ ಕೆಲಸಗಳ ಬಗ್ಗೆ ಆಸಕ್ತಿ ಇಟ್ಟುಕೊಂಡಿದ್ದ ಅವರು ನಾಟಕಗಳಲ್ಲಿ ನಟಿಸುತ್ತಿದ್ದರು.

ಸಂಚಾರಿ ಥಿಯೇಟರ್‌ನಲ್ಲಿ ನಟನೆ, ನಿರ್ದೇಶನ ಸೇರಿದಂತೆ ರಂಗ ಚಟುವಟಿಕೆಗಳ ಭಾಗವಾಗಿದ್ದ ಸಂಚಾರಿ ವಿಜಯ್‌, 27 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಂದುಕೊಟ್ಟವರು. ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ಅತ್ಯುನ್ನತ ಕೆಲಸಗಳನ್ನು ಮಾಡಿದವರು. ಇಂಥ ನಟನ ನೆನಪಿನಲ್ಲಿ ಸಂಚಾರಿ ಥಿಯೇಟರ್‌ ನಾಟಕೋತ್ಸವ ಆಯೋಜಿಸಿದೆ.

ಸಂಚಾರಿ ವಿಜಯ್‌ ಪುತ್ಥಳಿ ಅನಾವರಣ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್‌ ಅವರ ಪುತ್ಥಳಿ ಅನಾವರಣ ಮಾಡಲಾಗಿದೆ. ಸಂಚಾರಿ ವಿಜಯ್‌ ಅವರ ಹುಟ್ಟೂರಾದ ಪಂಚನಹಳ್ಳಿಯ ಅವರ ತೋಟದಲ್ಲಿ ಪುತ್ಥಳಿಯನ್ನು ಕುಟುಂಬದ ಸದಸ್ಯರು ಅನಾವರಣ ಮಾಡಿದ್ದಾರೆ. ಕಲ್ಲಿನಿಂದ ಕೆತ್ತಲಾಗಿರುವ ವಿ ಅಕ್ಷರದ ಮೇಲೆ ಸಂಚಾರಿ ವಿಜಯ್‌ ಅವರ ಪುತ್ಥಳಿಯನ್ನು ರೂಪಿಸಲಾಗಿದೆ. ಪುಣ್ಯ ತಿಥಿಯ ಜತೆಗೆ ಹೀಗೆ ಪುತ್ಥಳಿಯನ್ನೂ ಸಹ ನಿರ್ಮಿಸುವ ಮೂಲಕ ಮರೆಯಲಾಗದ ನಟನನ್ನು ಅಜರಾಮರವಾಗಿಸಿದ್ದಾರೆ. ಸಂಚಾರಿ ವಿಜಯ್‌ ಅವರ ಈ ವಿಶೇಷ ಪುತ್ಥಳಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಂಚಿಕೊಳ್ಳುವ ಮೂಲಕ ಅವರನ್ನು ನೆನಪಿಸಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ