Mysore
26
haze

Social Media

ಮಂಗಳವಾರ, 18 ನವೆಂಬರ್ 2025
Light
Dark

‘ಯೆಂಟಮ್ಮ’ ಹಾಡಿನಲ್ಲಿ ಪಂಚೆಯುಟ್ಟು ಕುಣಿದ ಸಲ್ಲು–ರಾಮ್‌ ಚರಣ್‌– ವೆಂಕಟೇಶ್‌

ಮುಂಬೈ: ಬಾಲಿವುಡ್‌ ‘ಬಾಯಿ ಜಾನ್‌’ ಸಲ್ಮಾನ್‌ ಖಾನ್‌ ನಟನೆಯ ‘ಕಿಸಿಕಾ ಬಾಯ್‌ ಕಿಸಿ ಕಿ ಜಾನ್‌’ ಚಿತ್ರದ ‘ಯೆಂಟಮ್ಮ’ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಸಲ್ಮಾನ್‌ ಖಾನ್‌ ಪಕ್ಕಾ ಸೌತ್‌ ಸ್ಟೈಲ್‌ನಲ್ಲಿ ಪಂಚೆಯುಟ್ಟು ನೃತ್ಯ ಮಾಡಿರುವುದನ್ನು ಕಂಡು ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಸಲ್ಮಾನ್‌ ಖಾನ್‌ ಜೊತೆಗೆ ‘ಆರ್‌ಆರ್‌ಆರ್‌’ ಖ್ಯಾತಿಯ ನಟ ರಾಮ್‌ ಚರಣ್‌ ಹಾಗೂ ವಿಕ್ಟರಿ ವೆಂಕಟೇಶ್‌ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಮೂವರು ಬಿಳಿ ಪಂಚೆ, ಹಳದಿ ಶರ್ಟ್‌ ಧರಿಸಿದ್ದು, ಪಕ್ಕಾ ಸೌತ್‌ ಸ್ಟೈಲ್‌ನಲ್ಲಿ ಮಿಂಚಿದ್ದಾರೆ.

ತೆಲುಗು ಮತ್ತು ಹಿಂದಿ ಸಾಹಿತ್ಯವನ್ನು ಬೆರೆಸಿ ‘ಯೆಂಟಮ್ಮ’ ಹಾಡನ್ನು ರಚಿಸಲಾಗಿದೆ. ಈ ಹಾಡಿನ ಸಂಯೋಜನೆಯನ್ನು ಪಾಯಲ್‌ ದೇವ್‌ ಮಾಡಿದ್ದಾರೆ. ಈ ಹಾಡಿಗೆ ಸಾಹಿತ್ಯವನ್ನು ಶಬ್ಬೀರ್‌ ಅಹಮ್ಮದ್‌ ರಚನೆ ಮಾಡಿದ್ದು, ವಿಶಾಲ್ ದದ್ಲಾನಿ ಮತ್ತು ಪಾಯಲ್ ದೇವ್ ಹಾಡಿದ್ದಾರೆ. ಜಾನಿ ಮಾಸ್ಟರ್‌ ನೃತ್ಯ ನಿರ್ದೇಶನ ಮಾಡಿದ್ದಾರೆ.

ಈ ಹಾಡಿನಲ್ಲಿ ಪೂಜಾ ಹೆಗ್ಡೆ ಅವರು ಹಳ್ಳಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಎಪ್ರಿಲ್‌ 21ಕ್ಕೆ ಬಿಡುಗಡೆಗೊಳ್ಳಲಿದ್ದು, ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ.

ಪಂಚೆಯಟ್ಟುಕೊಂಡು ಮೂವರು ನಟರು ಪೋಸ್‌ ನೀಡಿದ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರಾಮ್‌ ಚರಣ್‌, ‘ಪರದೆಯ ಮೇಲೆ ಕಾಣಸಿಕೊಂಡ ಅತ್ಯಂತ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ. ಲವ್‌ ಯು ಬಾಯ್‌‘ ಎಂದು ಬರೆದುಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!