Mysore
22
broken clouds
Light
Dark

ಚುನಾವಣಾ ಪ್ರಚಾರಕ್ಕೆ ಯಶ್‌ ಗೈರು: ಸ್ಪಷ್ಟನೆ ನೀಡಿದ ಸಂಸದೆ ಸುಮಲತಾ

ಮಂಡ್ಯ: ಕಳೆದ ಬಾರಿಯ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸಂಸದೆ ಸುಮಲತಾ ಅಂಬರೀಶ್‌ ಅಚ್ಚರಿಯಂಬಂತೆ ಚುನಾವಣೆ ಗೆದ್ದು ಪಾರ್ಲಿಮೆಂಟ್‌ಗೆ ಎಂಟ್ರಿ ಕೊಟ್ಟಿದ್ದರು.

ಇನ್ನು ಈ ಚುನಾವಣೆ ಗೆಲ್ಲುವುದಕ್ಕೆ ಪ್ರಮುಖ ಕಾರಣವಾಗಿದ್ದವರು ಜೋಡೆತ್ತುಗಳು. ಕನ್ನಡ ಚಿತ್ರರಂಗದ ನಟರಾದ ದರ್ಶನ್‌ ಹಾಗೂ ಯಶ್‌ ಅವರು ಕಳೆದ ಚುನಾವಣೆಯಲ್ಲಿ ಸುಮಲತಾ ಪರ ಭರ್ಜರಿ ಕ್ಯಾಂಪೆನ್‌ ಮಾಡಿದ್ದು, ಸುಮಲತಾ ಅವರ ಗೆಲುವಲ್ಲಿ ಜೋಡೆತ್ತುಗಳು ಮುಖ್ಯ ಪಾತ್ರ ವಹಿಸಿದ್ದರು.

ಆದರೆ ಈ ಬಾರಿಯ ಲೋಕ ಚುನಾವಣೆಯಲ್ಲಿ ಪ್ರಚಾರಕ್ಕೆ ನಟ ದರ್ಶನ್‌ ಭಾಗವಹಿಸುವುದಾಗಿ ಹೇಳಿದರೆ, ಇತ್ತ ಯಶ್‌ ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಎಲ್ಲಾ ವಿಚಾರಗಳ ಬಗ್ಗೆ ಸಂಸದೆ ಸುಮಲತಾ ಅಂಬರೀಶ್‌ ಸ್ಪಷ್ಟನೆ ನೀಡಿದ್ದಾರೆ.

ರಾಕಿಂಗ್‌ ಸ್ಟಾರ್‌ ಯಶ್‌ ಅವರು ಚುನಾವಣಾ ಪ್ರಚಾರಕ್ಕೆ ಬರುವುದಿಲ್ಲ ಎಂದು ಈಗ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಆದರೆ ಈ ಬಗ್ಗೆ ಮೊದಲೇ ನನ್ನ ಜೊತೆ ಚರ್ಚೆ ಮಾಡಿದ್ದರು. 2018 ರ ಚುನಾವಣೆ ವೇಳೆ ಎಚ್‌ಡಿಕೆ ಅವರು ಸೇರಿದಂತೆ ಹಲವಾರು ರಾಜಕೀಯ ನಾಯಕರಿಂದ ಅಹಿತಕರ ಮಾತುಗಳನ್ನು ಕೇಳಬೇಕಾಯಿತು. ಇದು ನನ್ನ ಮನಸ್ಸಿಗೆ ನೋವುಂಟು ಮಾಡಿತ್ತು ಎಂದು ಯಶ್‌ ಹೇಳಿಕೊಂಡಿದ್ದಾರೆ.

ಈಗ ಅವರೊಬ್ಬ ಪ್ಯಾನ್‌ ಇಂಡಿಯಾ ಸ್ಟಾರ್‌, ಬ್ಯುಸಿ ಶೆಡುಲ್ಡ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಚುನಾವಣಾ ಪ್ರಚಾರಕ್ಕೆ ಬನ್ನಿ ಎಂದು ಕರೆಯಲು ಮನಸ್ಸಾಗುತ್ತಿಲ್ಲ ಎಂದು ಸಂಸದೆ ಹೇಳಿದ್ದಾರೆ.

ಕಳೆದ ಬಾರಿಯ ಚುನಾವಣಾ ಪ್ರಚಾರದ ವೇಳೆ ಅಂಬರೀಶ್‌ ಅವರ ಮೇಲಿನ ಅಭಿಮಾನದಿಂದ ಪ್ರಚಾರದಲ್ಲಿ ಭಾಗಿಯಾಗಿದ್ದರು, ನಾನು ಅವರನ್ನು ಪ್ರಚಾರಕ್ಕೆ ಕರೆದಿಲ್ಲ. ಈ ಸಲ ಯಶ್‌ ಚುನಾವಣಾ ಪ್ರಚಾರಕ್ಕೆ ಬರುವುದಾದರೇ ನನಗಿಂತ ಖುಷಿ ಪಡುವ ವ್ಯಕ್ತಿ ಇನ್ನೊಬ್ಬರಿಲ್ಲ. ಬರಲಿಲ್ಲ ಎಂದರೆ ಯಾವುದೇ ಬೇಸರವೂ ಇಲ್ಲ ಎನ್ನುವ ಮೂಲಕ ಎಲ್ಲಾ ಉಹಾಪೋಹಗಳಿಗೆ ಸಂಸದೆ ಸುಮಲತಾ ಅಂಬರೀಶ್‌ ತೆರೆ ಎಳೆದಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ