Mysore
19
mist

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ದಾದಾ ಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ

ಬೆಂಗಳೂರು: ಕನ್ನಡ ಚಿತ್ರರಂಗದ ನಟ ರಿಷಬ್ ಶೆಟ್ಟಿ ಅವರಿಗೆ ಇತ್ತೀಚೆಗೆ ‘ದಾದಾ ಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ’ ಘೋಷಣೆ ಆಗಿತ್ತು. ಅವರಿಗೆ ‘ಅತ್ಯಂತ ಭರವಸೆಯ ನಟ’ ಅವಾರ್ಡ್​ ಸಿಕ್ಕಿತ್ತು. ಫೆ.20ರಂದು ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಇದರ ಫೋಟೋಗಳು ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಗೌರವ ಸ್ವೀಕರಿಸಿದ ರಿಷಬ್​ಗೆ ಅಭಿಮಾನಿಗಳು, ಆಪ್ತರು ಹಾಗೂ ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ. ರಿಷಬ್ ಮಾತ್ರವಲ್ಲದೆ ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ರಿಷಬ್ ಶೆಟ್ಟಿ ಅವರು ಕಪ್ಪು ಬಣ್ಣದ ಶರ್ಟ್ ಹಾಗೂ ಬಿಳಿ ಬಣ್ಣದ ಪಂಚೆ ಧರಿಸಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತೆರಳಿದ್ದು ವಿಶೇಷವಾಗಿತ್ತು. ಈ ಮೊದಲು ಅನೇಕ ಕಾರ್ಯಕ್ರಮಗಳಿಗೆ ಅವರು ಇದೇ ರೀತಿ ಟ್ರೆಡಿಷನಲ್ ಲುಕ್​​ನಲ್ಲಿ ತೆರಳಿದ್ದರು. ಅವರು ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ನೀಡಿದರು. ನಮ್ಮ ಸಂಸ್ಕೃತಿಯನ್ನು ಎಲ್ಲ ಕಡೆಗಳಲ್ಲಿ ಪಸರಿಸುವ ಕೆಲಸ ಮಾಡುತ್ತಿರುವ ರಿಷಬ್​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಪ್ರಶಸ್ತಿಯನ್ನು ಅವರು ದೈವ ನರ್ತಕರು, ನಮ್ಮನ್ನು ಅಗಲಿದ ಪುನೀತ್ ರಾಜ್​ಕುಮಾರ್ ಹಾಗೂ ಎಸ್​​.ಕೆ ಭಗವಾನ್ ಅವರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.

ಅನುಪಮ್ ಖೇರ್ ಹಾಗೂ ವರುಣ್ ಧವನ್ ಅವರು ರೆಡ್ ಕಾರ್ಪೆಟ್​ ಮೇಲೆ ಮುಖಾಮುಖಿ ಆದರು. ಪರಸ್ಪರ ಅಪ್ಪಿಕೊಂಡು ವಿಶ್ ತಿಳಿಸಿದರು. ದುಲ್ಖರ್ ಸಲ್ಮಾನ್ ಕೂಡ ಎಲ್ಲರ ಗಮನ ಸೆಳೆದರು. ರೇಖಾ, ಆಲಿಯಾ ಭಟ್ ಸೇರಿ ಇನ್ನೂ ಅನೇಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆಲಿಯಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!