ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅವರು ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ಮನೋರಂಜನ್ ಅವರು ಸಂಗೀತಾ ದೀಪಕ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು ಸ್ಯಾಂಡಲ್‌ವುಡ್ ನಲ್ಲಿ ಸಂತಸಮನೆ ಮಾಡಿದೆ.

ಎರಡು ಕುಟುಂಬದ ಸದಸ್ಯೆರೆಲ್ಲರೂ ಭಾಗವಹಿಸಿದ್ದು ಇಂದು ಮಾಂಗಲ್ಯಧಾರಣೆಯಾಗಿದೆ. ಚಿತ್ರರಂಗದ ಕೆಲ ಪ್ರಮುಖ ವ್ಯಕ್ತಿಗಳು ಇಂದು ಭಾಗವಹಿಸಿದ್ದು, ಚಿತ್ರರಂಗದವರಿಗೊಸ್ಕರ ನಟ ರವಿಚಂದ್ರನ್ ಅವರು ಆರತಕ್ಷತೆ ಕಾರ್ಯಕ್ರಮವನ್ನು ಕೂಡ ಆಯೋಜಿಸಿದ್ದಾರೆ.

ಇದು ಅರೆಂಜ್ ಮ್ಯಾರೇಜ್
‘ಇದೊಂದು ಅರೆಂಜ್ ಮ್ಯಾರೇಜ್ ಆಗಿದೆ. ನಾನು ಮದುವೆ ಆಗಲಿರುವ ಹುಡುಗಿ ಸಂಗೀತಾ ನಮಗೆ ದೂರದ ಸಂಬಂಧಿ ಆಗಬೇಕು. ನನಗೆ ಈಗ 34 ವರ್ಷ. ಹಾಗೇ ನೋಡಿದ್ರೆ, ನಮ್ಮ ಕುಟುಂಬದಲ್ಲಿ ಹುಡುಗ ಮತ್ತು ಹುಡುಗಿಯರ ಮದುವೆ 27ರ ಒಳಗೆಯೇ ನಡೆಯುತ್ತದೆ. ನಾನು ಮಾತ್ರ ಇಷ್ಟು ತಡವಾಗಿ ಮದುವೆ ಆಗುತ್ತಿದ್ದೇನೆ’ ಎಂದು ಮನೋರಂಜನ್ ಹೇಳಿದ್ದರು.

ಅಂದಹಾಗೆ, ಮನುಗೆ ಮದುವೆ ಮಾಡಲು ತಾಯಿ ಸುಮತಿ ರವಿಚಂದ್ರನ್ ಅವರು ವಧುವಿನ ಹುಡುಕಾಟದಲ್ಲಿದ್ದರು. ಆಗ ಸಂಗೀತಾ ಅವರ ಪ್ರಪೋಸಲ್ ಬಂದಿತ್ತು. ಇದೀಗ ಎರಡು ಕುಟುಂಬಗಳು ಒಪ್ಪಿ ಮದುಮೆ ಸಂಭ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.