ನವದೆಹಲಿ : ಬಿ ಟೌನ್ ಜೋಡಿಗಳಾದ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ಅಭಿಮಾನಿಗಳಿಗೆ ಈ ವರ್ಷದ ಕ್ರಿಸ್ಮಸ್ ತುಂಬ ಸ್ಪೆಷಲ್ ಆಗಿದೆ. ಇದೇ ಮೊದಲ ಬಾರಿಗೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಮಗಳ ಮುಖವನ್ನು ಜಗತ್ತಿಗೆ ಪರಿಚಯಿಸಿದ್ದಾರೆ.
ಈ ದಂಪತಿಗಳು ಪುತ್ರಿಗೆ ರಹಾ ಎಂದು ಹೆಸರಿಟ್ಟಿದ್ದು, ಇದೇ ಮೊದಲ ಬಾರಿಗೆ ಮಾಧ್ಯಮಗಳ ಕ್ಯಾಮೆರಾ ಎದುರು ಮಗಳ ಜೊತೆ ಪೋಸ್ ನೀಡಿದ್ದಾರೆ. ಇದೀಗ ಈ ಫೋಟೋ ಸಕತ್ ವೈರಲ್ ಆಗಿದ್ದು, ಮುದ್ದಾಗಿರುವ ʼರಹಾʼ ಳನ್ನು ಕಂಡು ಅಭಿಮಾನಿಗಳು ಖುಷ್ ಆಗಿದ್ದಾರೆ.
ಈ ವರ್ಷದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮುಂಬೈನ ಜುಹೂನಲ್ಲಿ ಕಪೂರ್ ಕುಟುಂಬದವರು ಔತಣ ಕೂಟ ಆಯೋಜಿಸಿದ್ದಾರೆ. ಇದರಲ್ಲಿ ಭಾಗಿಯಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಮಗಳನ್ನು ಕೂಡ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಅವರು ಪುತ್ರಿಯ ಮುಖವನ್ನು ತೋರಿಸಿದ್ದಾರೆ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಪ್ರೀತಿಸಿ, 2022ರ ಏಪ್ರಿಲ್ 14ರಂದು ಮದುವೆಯಾದರು. ಅದೇ ವರ್ಷ ನವೆಂಬರ್ 6ರಂದು ಹೆಣ್ಣು ಮಗುವಿಗೆ ಆಲಿಯಾ ಭಟ್ ಜನ್ಮ ನೀಡಿದರು.
ಅವರು ಮನೆಯಲ್ಲಿ ಮಗಳನ್ನು ಹಲವು ಹೆಸರುಗಳಿಂದ ಕರೆಯುತ್ತಿದ್ದಾರೆ. ರಹು, ರಾರಾ, ಲಾಲಿಪಾಪ್ ಅಂತ ಮಗಳನ್ನು ಮುದ್ದಾಗಿ ಕರೆಯುತ್ತೇವೆ ಎಂದು ಇತ್ತೀಚಿಗೆ ಆಲಿಯಾ ಭಟ್ ಹೇಳಿದ್ದರು.