Mysore
29
few clouds

Social Media

ಶುಕ್ರವಾರ, 30 ಜನವರಿ 2026
Light
Dark

ಡೈರೆಕ್ಷನ್‌ ಮಾಡಲು ರೆಡಿಯಾದ ಲೇಡಿ ಸೂಪರ್‌ ಸ್ಟಾರ್‌

ಸೌತ್‌ ಸಿನಿ ರಂಗದ ಲೇಡಿ ಸೂಪರ್‌ ಸ್ಟಾರ್‌ ನಯನ ತಾರಾ ನಟನೆಯಿಂದ ನಿರ್ದೇಶದೆಡೆಗೆ ಜಾರಲು ಚಿಂತನೆ ನಡೆಸಿದ್ದಾರೆ.

ನಿರ್ದೇಶನ ಮಾಡುವುದು ತನ್ನ ಕನಸು ಎಂದು ಹೇಳಿಕೊಂಡಿರುವ ನಟಿ ಇದೀಗ ತಮ್ಮ ಕನಸನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಇಡುತ್ತಿದ್ದಾರೆ.

ತಾವು ನಿರ್ದೇಶನ ಮಾಡುತ್ತಿರುವ ಸಿನಿಮಾ ಯಾವುದು.? ಅದರ ಕಥೆ ಏನು.? ಎಂಬುದರ ಕುರಿತು ನಯನ ತಾರಾ ಅವರು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಲೇಡಿ ಸೂಪರ್‌ ಸ್ಟಾರ್‌ ನಿರ್ದೇಶನ ಮಾಡಲಿರುವ ಸಿನಿಮಾ ಬಗೆಗಿನ ಅಪ್ಡೇಟ್ಸ್‌ ತಿಳಿಯಬೇಕಿದೆ.

ಇತ್ತೀಚೆಗೆಲೇಡಿ ಸೂಪರ್‌ ಸ್ಟಾರ್‌ ಸೊಶಿಯಲ್‌ ಮೀಡಿಯಾದಲ್ಲಿ ಹಾಕಿದ್ದ ಫೋಟೊದಿಂದ ನಯನ ತಾರಾ ನಿರ್ದೇಶನದತ್ತ ಮುಖ ಮಾಡಲಿದ್ದಾರೆ ಎನ್ನುವ ಮಾತು ಜೋರಾಗಿದೆ. ಈ ಫೋಟೋದಲ್ಲಿ ನಯನ ತಾರಾ ಅವರು ಕ್ಯಾಮೆರಾ ಹಿಂದೆ ನಿಂತಿದ್ದಾರೆ. ನಟಿ ಹಂಚಿಕೊಂಡಿರುವ ಈ ಒಂದು ಫೋಟೊದಿಂದ ಅಭಿಮಾನಿಗಳಲ್ಲಿ ಹಲವಾರು ಪ್ರಶ್ನೆಗಳು ಮೂಡಿವೆ.

ನಯನ ತಾರ ಅವರು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ. ತ್ರಿಶಾ, ಅನುಷ್ಕಾ ಶೆಟ್ಟಿ, ಸಮಂತಾ ಸೇರಿದಂತೆ ಇನ್ನೂ ಹಲವು ಜನ ಪ್ರಿಯ ನಟಿಯರಿಗೂ ಕೂಡ ನಯನ ತಾರ ಅವರು ಪಡೆಯುವ ಸಂಭಾವನೆಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ.

ನಯನ ತಾರ ಅವರು ಮಣಿರತ್ನಂ ಅವರ ಸಿನಿಮಾದಲ್ಲಿ ನಟಿಸುತ್ತಾರೆ. ಎಂಬ ಸುದ್ದಿ ಹರಿದಾಡಿತ್ತು. ಆ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 12 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದರು ಎನ್ನಲಾಗಿದೆ.

ನಿರ್ಮಾಣ ಸಂಸ್ಥೆಯು ಅಷ್ಟೊಂದು ಸಂಭಾವನೆ ನೀಡಲು ಒಪ್ಪದೇ ಇದ್ದುದ್ದರಿಂದ ನಟಿ ಮಣಿರತ್ನಂ ಅವರ ಸಿನಿಮಾದಿಂದ ಹಿಂದೆ ಸರಿದರು ಎಂಬ ಸುದ್ದಿ ತಮಿಳು ಚಿತ್ರರಂಗದಲ್ಲಿ ಹರಿದಾಡುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!