ಚೆನ್ನೈ ( ತಮಿಳುನಾಡು) : ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರು ನಾಯಕ ನಟನಾಗಿ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ಜೈಲರ್ ತನ್ನ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ರಜನಿಕಾಂತ್ ಅವರ ಈ ಹೊಸ ಲುಕ್ಕಿಗಂ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದ ಪೋಸ್ಟರ್ ಹೇಳುವಂತೆ ಪಕ್ಕ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ.
ರಜನಿಕಾಂತ್ ಅವರ 169ನೇ ಚಿತ್ರ ಇದಾಗಿತ್ತು ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಸನ್ ಪಿಚ್ಚರ್ ಸಂಸ್ಥೆಯು ವಹಿಸಿಕೊಂಡಿದೆ. ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಅವರು ಆಕ್ಷನ್ ಕಟ್ ಹೇಳದ್ದು, ಚಿತ್ರೀಕರಣವು ಇಂದಿನಿಂದ ಆರಂಭಗೊಂಡಿದೆ.
ಈ ಚಿತ್ರದಲ್ಲಿ ನಟಿ ತಮ್ಮಣ್ಣ ಭಾಟಿಯಾ, ರಮ್ಯಾ ಕೃಷ್ಣ ಸೇರಿದಂತೆ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರು ಕೂಡ ನಟಿಸಲಿದ್ದಾರೆ ಎನ್ನುವುದು ಬಹು ವಿಶೇಷ. ಹೀಗಾಗಿ ಈ ಚಿತ್ರವು ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.