Mysore
29
clear sky

Social Media

ಗುರುವಾರ, 12 ಫೆಬ್ರವರಿ 2026
Light
Dark

ನಾನು ಸಾಯುತ್ತೇನೆ ಜೀವಂತವಾಗಿರಲ್ಲ : ಹೀಗಂದಿದ್ದೇಕೆ ಆಲಿಯಾ ಭಟ್ ?

ನಾವು ಶಾಶ್ವತವಲ್ಲ, ಇಲ್ಲಿನ ಜೀವನ ತುಂಬಾ ಕಡಿಮೆ ಅವಧಿಯದ್ದು ಎಂಬುದು ನನಗೆ ಅರ್ಥವಾಗಿದೆ. ಈ ಸಾರ್ವಕಾಲಿಕ ಸತ್ಯವನ್ನು ಅರ್ಥ ಮಾಡಿಕೊಳ್ಳಲು ನನ್ನ ಸಿನಿಮಾ ಪ್ಲಾಪ್ ಆಗಬೇಕಾಯಿತು ಎಂದು ಬಾಲಿವುಡ್ ನ ಖ್ಯಾತ ನಟಿ ಆಲಿಯಾ ಭಟ್ ಹೇಳಿದ್ದಾರೆ.

ನಾನು ಚಿತ್ರರಂಗಕ್ಕೆ ಬಂದ ಹೊಸದರಲ್ಲೆ ಸಕ್ಸಸ್ ಸಿಕ್ಕಿದೆ. ಜೀವನ ಎಂದರೆ ಯಾವಾಗಲೂ ಸಕ್ಸಸ್, ಜನ ಯಾವಾಗಲೂ ನಮ್ಮ ಸುತ್ತಲೂ ಸುತ್ತುತ್ತಲೇ ಇರುತ್ತಾರೆ. ಎಂಬ ಭ್ರಮೆ ಹುಟ್ಟಿಸಿ ಬಿಟ್ಟಿತು. ಜನರು ಯಾವಾಗಲೂ ನನ್ನ ಹೆಗಲಿನ ಮೇಲೆ ಕೈ ಹಾಕಿ ನನ್ನ ಯಶಸ್ಸಿನ ಗುಣಗಾನ ಮಾಡುತ್ತಲೇ ಇರುತ್ತಾರೆ. ಜೀವನ ಯಾವಾಗಲೂ ಹೀಗೆ ಇರುತ್ತದೆ. ಯಶಸ್ಸು ಕೀರ್ತಿ ಎಲ್ಲವೂ ಶಾಶ್ವತ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದೆ.

ಆದರೆ ನನ್ನ ಒಂದು ಸಿನಿಮಾ ಸೋತು ಹೋಯಿತು. ಆಗಲೇ ನನಗೆ ಜೀವನ ಎಂದರೆ ಏನು ಎಂಬುದು ಅರ್ಥವಾಗಿದ್ದು. ಜನರು ಯಾವಾಗಲೂ ನಮ್ಮ ಸುತ್ತ ಸುತ್ತುತ್ತಲೇ ಇರುವುದಿಲ್ಲ. ಜೀವನವೇ ಶಾಶ್ವತವಲ್ಲ ಎಂಬುದು ನನಗೆ ಅರ್ಥವಾಯಿತು. ಅಷ್ಟಕ್ಕೂ ಜೀವನ ಶಾಶ್ವತವಲ್ಲ ನಾನೂ ಸಾಯುತ್ತೇನೆ ಎಂದು ನನಗೆ ಅರಿವಾಗಿದೆ ಎಂದು ನಟಿ ಆಲಿಯಾ ಭಟ್ ಹೇಳಿಕೊಂಡಿದ್ದಾರೆ.

ಆಲಿಯಾ ಭಟ್ ತಮ್ಮ ಸಿನಿ ಜರ್ನಿ ಶುರುವಾಗಿನಿಂದಲೇ ತಾವೊಬ್ಬರು ಪ್ರಭುದ್ಧ ನಟಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಹಿಂದಿ ಚಿತ್ರರಂಗದ ನಿರ್ಮಾಪಕ ಹಾಗೂ ನಿರ್ದೇಶಕರ ಮಗಳಾಗಿರುವ ಆಲಿಯಾಗೆ ಸಹಜವಾಗಿ ಚಿತ್ರರಂಗದ ನಂಟಿತ್ತು. ಹೀಗಾಗಿಯೇ ಚಿತ್ರರಂಗದಲ್ಲಿ ವೃತ ಜೀವನ ಆರಂಭಿಸಬೇಕು ಎಂದು ನಿರ್ಧಾರ ಮಾಡಿದ ಅವರು ತಮ್ಮ ಶಿಕ್ಷಣವನ್ನು ಮುಗಿಸಿ ನಟನೆಗೆ ಬೇಕಾದ ತರಬೇತಿಯನ್ನು ಪಡೆದುಕೊಂಡು ಬಾಲಿವುಡ್ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು. ಇದೀಗ ಆಲಿಯಾ ಭಟ್‌, ಯಶಸ್ಸು ಹಾಗೂ ಕೀರ್ತಿ ಶಾಶ್ವತವಲ್ಲ, ಇಲ್ಲಿನ ಜೀವನ ತುಂಬಾ ಕಡಿಮೆ ಅವಧಿಯದ್ದು ಎಂಬುದು ನನಗೆ ಅರ್ಥವಾಗಿದೆ. ಈ ಸಾರ್ವಕಾಲಿಕ ಸತ್ಯವನ್ನು ಅರ್ಥ ಮಾಡಿಕೊಳ್ಳಲು ನನ್ನ ಸಿನಿಮಾ ಪ್ಲಾಪ್ ಆಗಬೇಕಾಯಿತು ಎಂದು ಹೇಳಿದ್ದಾರೆ.

ನಾನು ಚಿತ್ರರಂಗಕ್ಕೆ ಬಂದ ಹೊಸದರಲ್ಲೆ ಸಕ್ಸಸ್ ಸಿಕ್ಕಿದೆ. ಜೀವನ ಎಂದರೆ ಯಾವಾಗಲೂ ಸಕ್ಸಸ್, ಜನ ಯಾವಾಗಲೂ ನಮ್ಮ ಸುತ್ತಲೂ ಸುತ್ತುತ್ತಲೇ ಇರುತ್ತಾರೆ. ಎಂಬ ಭ್ರಮೆ ಹುಟ್ಟಿಸಿ ಬಿಟ್ಟಿತು. ಜನರು ಯಾವಾಗಲೂ ನನ್ನ ಹೆಗಲಿನ ಮೇಲೆ ಕೈ ಹಾಕಿ ನನ್ನ ಯಶಸ್ಸಿನ ಗುಣಗಾನ ಮಾಡುತ್ತಲೇ ಇರುತ್ತಾರೆ. ಜೀವನ ಯಾವಾಗಲೂ ಹೀಗೆ ಇರುತ್ತದೆ. ಯಶಸ್ಸು ಕೀರ್ತಿ ಎಲ್ಲವೂ ಶಾಶ್ವತ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದೆ.

ಆದರೆ ನನ್ನ ಒಂದು ಸಿನಿಮಾ ಸೋತು ಹೋಯಿತು.ಆಗಲೇ ನನಗೆ ಜೀವನ ಎಂದರೆ ಏನು ಎಂಬುದು ಅರ್ಥವಾಗಿದ್ದು. ಜನರು ಯಾವಾಗಲೂ ನಮ್ಮ ಸುತ್ತ ಸುತ್ತುತ್ತಲೇ ಇರುವುದಿಲ್ಲ. ಜೀವನವೇ ಶಾಶ್ವತವಲ್ಲ ಎಂಬುದು ನನಗೆ ಅರ್ಥವಾಯಿತು. ಅಷ್ಟಕ್ಕೂ ಜೀವನ ಶಾಶ್ವತವಲ್ಲ ನಾವು ಸಾಯುತ್ತೇವೆ ಎಂದು ನನಗೆ ಅರಿವಾಗಿದೆ ಎಂದು ನಟಿ ಆಲಿಯಾ ಭಟ್ ಹೇಳಿಕೊಂಡಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!