Mysore
23
overcast clouds

Social Media

ಸೋಮವಾರ, 11 ಮೇ 2026
Light
Dark

ನನ್ನ ತಾಯಿಗೋಸ್ಕರ ದೇವಸ್ಥಾನ ಕಟ್ಟಿಸುತ್ತೇನೆ: ವಿನೋದ್ ರಾಜ್

ಬೆಂಗಳೂರು : ನನ್ನ ತಾಯಿಯನ್ನು ಪೂಜೆ ಮಾಡಲು ನನಗೆ ತುಂಬಾ ಇಷ್ಟ, ಅವರು ತಮ್ಮ ಜೀವನವನ್ನು ಸವೆಸಿದ ಸೋಲದೇವನಹಳ್ಳಿಯಲ್ಲಿ ಅವರ ನೆನಪಿಗಾಗಿ ಪುಟ್ಟ ದೇವಾಲಯವನ್ನು ನಿರ್ಮಿಸಿ, ಪ್ರತಿದಿನವೂ ಅಮ್ಮನನ್ನು ಪೂಜಿಸಿ ಭಕ್ತಿಯಿಂದ ನಮಸ್ಕರಿಸುತ್ತೇನೆ. ದಿನಾ ಅವರ ದರ್ಶನ ಪಡೆಯುವ ಮೂಲಕ ನನ್ನ ಜೀವನವನ್ನು ಕಳೆಯುತ್ತೇನೆ ಎಂದು ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್‌ ರಾಜ್‌ ತಾಯಿಯ ಪ್ರೀಯಿಯನ್ನು ನೆನದಿದ್ದು ಹೀಗೆ.

ಅಮ್ಮನ ಜೊತೆ ಇಷ್ಟು ವರ್ಷಗಳ ಕಾಲ ಒಡನಾಟ, ಬಾಂಧವ್ಯ ಇದ್ದುದರಿಂದಲೇ ಬಡವರು, ಕಷ್ಟದಲ್ಲಿರುವವರು, ಪ್ರಾಣಿಗಳ ಬಗ್ಗೆ ಕರುಣೆ ಉಂಟಾಗಿರುವುದು. ಅನುಕಂಪ, ಪ್ರೀತಿ ಅಮ್ಮ ನನಗೆ ಹೇಳಿಕೊಟ್ಟ ಪಾಠ, ನನ್ನ ತಾಯಿಯವರು ನನ್ನನ್ನು ನಿಮಗೆ ಒಪ್ಪಿಸಿ ಹೋಗಿದ್ದಾರೆ, ನಿಮ್ಮ ಜೊತೆಯಲ್ಲಿ ಅವರಿದ್ದಾರೆ, ಅಭಿಮಾನಿಗಳಲ್ಲಿ ಅವರನ್ನು ಕಾಣುತ್ತೇನೆ, ನನ್ನ ಜನ್ಮ ಸಾರ್ಥಕ ಎನಿಸುತ್ತದೆ ಎಂದರು.

ನಟಿ ಲೀಲಾವತಿಯವರು ವಯೋಸಹಜ ಕಾಯಿಲೆಯಿಂದ ತಮ್ಮ 85ನೇ ವರ್ಷದಲ್ಲಿ ನಿಧನರಾಗಿದ್ದು ಇಂದಿಗೆ ಮೂರು ದಿನವಾಗಿದೆ. ಈ ತೀರಿಕೊಂಡು ಮೂರು ದಿನವಾದ ಹಿನ್ನೆಲೆಯಲ್ಲಿ ಇಂದು ಕುಟುಂಬಸ್ಥರು ಹಾಲು-ತುಪ್ಪ ಕಾರ್ಯ ನೆರವೇರಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!