Mysore
29
overcast clouds

Social Media

ಗುರುವಾರ, 30 ಜುಲೈ 2026
Light
Dark

‘ಹಾಟ್ ಶೂಟ್‌‘: ದುಬೈನಲ್ಲಿ ಉರ್ಫಿ ಪೊಲೀಸ್ ವಶಕ್ಕೆ

ದುಬೈ: ಸಾರ್ವಜನಿಕ ಸ್ಥಳದಲ್ಲಿ ‘ಅಂಗಾಂಗ ಪ್ರದರ್ಶನ ಮಾಡುವ’ ಬಟ್ಟೆ ಧರಿಸಿ ಚಿತ್ರೀಕರಣ ಮಾಡಿದ ನಟಿ ಉರ್ಫಿ ಜಾವೇದ್‌ರನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ತಮ್ಮ ಮುಂಬರುವ ಪ್ರಾಜೆಕ್ಟ್‌ಗಳ ಚಿತ್ರೀಕರಣಕ್ಕಾಗಿ ಉರ್ಫಿ ಅವರು ಯುಎಇಗೆ ತೆರಳಿದ್ದರು. ಕಳೆದೊಂದು ವಾರದಿಂದ ಅಲ್ಲಿೆಯೇ ಇರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದರು. ತೆರೆದ ಸ್ಥಳದಲ್ಲಿ, ಸಾರ್ವಜನಿಕ ಪ್ರದೇಶದಲ್ಲಿ ಧರಿಸಲು ಅವಕಾಶ ಇಲ್ಲದಿರುವ ಬಟ್ಟೆಯನ್ನು ಧರಿಸಿ ಚಿತ್ರೀಕರಣ ಮಾಡುತ್ತಿದ್ದರು. ಹೀಗಾಗಿ ವಿಚಾರಣೆ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರವಿಚಿತ್ರ ಉಡುಪುಗಳನ್ನು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಉರ್ಫಿ ಜಾವೇದ್ ಸದಾ ಸುದ್ದಿಯಲ್ಲಿರುತ್ತಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!