ಕನ್ನಡ ಚಿತ್ರರಂಗದ ಹೆಸರಾಂತ ನಟ, ನಿರ್ದೇಶಕ ನಾಗಾಭರಣ ಅವರು ತುಮಕೂರು ವಿವಿಯ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ಆಗಸ್ಟ್ 7ರಂದು ನಡೆಯಲಿರುವ ವಿವಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು.
ನಿರ್ದೇಶಕ ನಾಗಾಭರಣ ಹಾಗೂ ಸಮಾಜ ಸೇವಕ ಆರ್.ಎಲ್ ರಮೇಶ್‌ಬಾಬು ಅವರು ತುಮಕೂರು ವಿವಿಯ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ಆಗಸ್ಟ್ 7ರಂದು ನಡೆಯಲಿರುವ ವಿವಿ ಘಟಿಕೋತ್ಸವದಲ್ಲಿ ಇವರಿಬ್ಬರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಕನ್ನಡ ಸಿನಿಮಾ, ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡಿರುವ ಟಿ. ಎಸ್. ನಾಗಾಭರಣ ಅವರು 35ಕ್ಕಿಂತ ಹೆಚ್ಚು ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ.
ಸಂತ ಶಿಶುನಾಳ ಶರೀಫ, ಚಿನ್ನಾರಿ ಮುತ್ತ, ನಾಗಮಂಡಲ, ಸಿಂಗಾರೆವ್ವ, ಕಲ್ಲರಳಿ ಹೂವಾಗಿ, ಅಲ್ಲಮ ಮುಂತಾದ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ನಾಗಾಭರಣ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ.
ಹಾಗೆಯೇ ಗೌರವ ಡಾಕ್ಟರೇಟ್‌ಗೆ ಭಾಜನರಾಗುತ್ತಿರುವ ತುಮಕೂರು ಮೂಲದ ರಮೇಶ್‌ಬಾಬು ಸಮಾಜ ಸೇವಕರು ಹಾಗೂ ಕೈಗಾರಿಕೋದ್ಯಮಿಗಳು. ತಮ್ಮ ಕಠಿಣ ಪರಿಶ್ರಮ ಮತ್ತು ಸಂಕಲ್ಪದಿಂದ ಭಗವಾನ್ ರೈಸ್ ಮಿಲ್, ಭಗವತಿ ಭಗವಾನ್ ರೈಸ್ ಮಿಲ್ ಮತ್ತು ರಾಜಲಕ್ಷಿ ಆಗ್ರೊ ಫುಡ್ಸ್ ಹೆಮ್ಮೆಯ ಮಾಲೀಕರಾದರು. ಈ ಮೂಲಕ 150ಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗವನ್ನು ಕಲ್ಪಿಸಿದ್ದಾರೆ.
ತುಮಕೂರು ವಿವಿ ವತಿಯಿಂದ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲು ನೇಮಿಸಿದ್ದ ಸಮಿತಿಯ ಶಿಫಾರಸಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಆಗಸ್ಟ್ 7ರಂದು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವ ನಡೆಯಲಿದ್ದು, ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ ಎಂದು ಕುಲಪತಿ ಪ್ರೊ. ವೆಂಕಟೇಶ್ವರಲು ತಿಳಿಸಿದ್ದಾರೆ.