ಮೈಸೂರು:ಯಶ್ವಿನ್ ಸಿನಿ ಪ್ರೊಡಕ್ಷನ್ಸ್ ನಿರ್ಮಿಸಿರುವ ‘ಲವ್ ಸ್ಟೋರಿ 1998’ ಚಲನಚಿತ್ರ ನಗರದ ಪ್ರಭಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದು, 25ನೇ ದಿನದ ಯಶಸ್ವಿ ಪ್ರದರ್ಶನ ಪೂರೈಸಿದೆ ಎಂದು ಚಿತ್ರ ನಿರ್ದೇಶಕ ನಾಗರಾಜ್ ತಲಕಾಡು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರ್ಜಾತಿಯ ಪ್ರೇಮವಿವಾಹದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರ ಇದಾಗಿದೆ. ಹೀಗಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ರಾಜ್ಯಾದ್ಯಂತ 40 ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರ ನೋಡಲು ಬಂದವರು ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ತಂಡ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿದ್ದು ಈ ಚಿತ್ರದ ಯಶಸ್ಸಿಗೆ ಕಾರಣವಾಗಿದೆ. ನಮ್ಮ ಮುಂದಿನ ಚಿತ್ರಕ್ಕೆ ನಟ ಮಿಥುನ್ ಅವರೇ ನಾಯಕ ನಟನಾಗಲಿದ್ದಾರೆ ಎಂದರು.