Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟ ನಟಿ ಗಾಯತ್ರಿ ರಘುರಾಮ್

ಕನ್ನಡದಲ್ಲಿ ಮನಸ್ಸೆಲ್ಲಾ ನೀನೇ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ನಟಿ ಗಾಯತ್ರಿ ರಘುರಾಮ್, ಈವರೆಗೂ ಸಲ್ಲದ ಕಾರಣಕ್ಕಾಗಿ ಸುದ್ದಿಯಾಗುತ್ತಿದ್ದರು. ಈ ಬಾರಿ ಅವರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ, ಮುಡಿ ಕೊಡುವ ಮೂಲಕ ಸುದ್ದಿಯಾಗಿದ್ದಾರೆ. ತಿಮ್ಮಪ್ಪನಿಗೆ ಮುಡಿ ಕೊಡಬೇಕು ಎನ್ನುವುದು 10 ವರ್ಷಗಳ ಪ್ರಾರ್ಥನೆ ಆಗಿತ್ತಂತೆ. ಈಗ ಅದು ಈಡೇರಿದೆ. ವಾರದ ಹಿಂದೆಯಷ್ಟೇ ಉದ್ದನೆಯ ಜಡೆಯ ಫೋಟೋ ಹಾಕಿದ್ದ ಗಾಯತ್ರಿ ಇದೀಗ ಮುಡಿಕೊಟ್ಟ ಫೋಟೋ ಶೇರ್ ಮಾಡಿದ್ದಾರೆ.

ತಮಿಳು ಚಿತ್ರೋದ್ಯಮದಲ್ಲಿ ಸ್ಟಾರ್ ನಟಿ ಎಂದೇ ಗುರುತಿಸಿಕೊಂಡಿದ್ದ ಗಾಯತ್ರಿ ಕನ್ನಡ, ತೆಲುಗು ಹಾಗೂ ಮಲಯಾಳಂ ಚಿತ್ರಗಳಿಗೂ ಬಣ್ಣ ಹಚ್ಚಿದ್ದಾರೆ. ಹಲವಾರು ಯಶಸ್ವಿ ಸಿನಿಮಾಗಳಿಗೆ ನಾಯಕಿಯಾಗಿದ್ದಾರೆ. ಕೇವಲ ನಟಿ ಮಾತ್ರವಲ್ಲ, ನಿರ್ಮಾಪಕಿ, ಕೊರಿಗೋಗ್ರಾಫರ್, ನಿರ್ದೇಶಕಿಯಾಗಿಯೂ ಚಿತ್ರೋದ್ಯಮಕ್ಕೆ ಸೇವೆ ಸಲ್ಲಿಸಿದ್ದಾರೆ.

2006ರಲ್ಲಿ ದೀಪಕ್ ಚಂದ್ರಶೇಖರ್ ಜೊತೆ ಹೊಸ ಬದುಕಿಗೆ ಕಾಲಿಟ್ಟವರು ಅಲ್ಲಿಯೂ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾದ ಕೇವಲ ನಾಲ್ಕೇ ನಾಲ್ಕು ವರ್ಷಕ್ಕೆ ಅವರಿಂದ ದೂರವಾದರು. ಎರಡು ವರ್ಷಗಳ ಹಿಂದೆಯಷ್ಟೇ ಚಿತ್ರೋದ್ಯಮಕ್ಕೆ ಗುಡ್ ಬೈ ಹೇಳಿದ್ದರು. ನಂತರ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದರು.

ಆನಂತರ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡು, ಪಕ್ಷ ಕಟ್ಟಲು ಮುಂದಾದರು. ಪಕ್ಷದ ಕಲೆ ಮತ್ತು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. ನಂತರ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮೇಲೆ ಆರೋಪ ಮಾಡಿ ರಾಜೀನಾಮೆ ಕೂಡ ನೀಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ