Mysore
24
overcast clouds

Social Media

ಗುರುವಾರ, 02 ಜುಲೈ 2026
Light
Dark

ಖ್ಯಾತ ಗಾಯಕ ಸೋನು ನಿಗಮ್ ಮೇಲೆ ಹಲ್ಲೆ: ದೂರು ದಾಖಲು

ನವದೆಹಲಿ: ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಮೇಲೆ ಹಲ್ಲೆಯಾದ ‍ಘಟನೆ ನಿನ್ನೆ ನಡೆದಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನ ಚೆಂಬೂರಿನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲೇ ಉದ್ದವ್ ಠಾಕ್ರೆ ಬಣದ ಶಾಸಕ ಪ್ರಕಾಶ್ ಫತೇರ್ ಪೇಕರ್ ಅವರ ಪುತ್ರ ಕೂಡ ಪಾಲ್ಗೊಂಡಿದ್ದರು. ಸೆಲ್ಫಿ ತಗೆಯುವ ವಿಚಾರವಾಗಿ ಗಲಾಟೆ ನಡೆದಿದೆ.

ಸೋನು ನಿಗಮ್ ಜೊತೆ ಸೆಲ್ಫಿಗಾಗಿ ಬಂದ ಶಾಸಕನ ಮಗನನ್ನು ಸೋನು ಅಂಗರಕ್ಷಕರು ತಳ್ಳಿದ್ದಾರೆ. ಈ ತಳ್ಳಾಟದಲ್ಲಿ ಶಾಸಕನ ಮಗನು ವೇದಿಕೆಯಿಂದ ಕೆಳಗೆ ಬಿದ್ದ ಎಂದು ಹೇಳಲಾಗುತ್ತಿದೆ. ರೊಚ್ಚಿಗೆದ್ದ ಹುಡುಗನು ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದ ಸೋನು ನಿಗಮ್ ಅವರನ್ನು ಹಿಡಿದೆಳೆದಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಕುರಿತು ಸೋನು ನಿಗಮ್ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. 

ಸೋನು ಬರೆದ ದೂರಿನಲ್ಲಿ ‘ನಾವು ಕಾರ್ಯಕ್ರಮ ಮುಗಿಸಿಕೊಂಡು ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದೆವು. ಮೊದಲು ಆ ಹುಡುಗ ನನ್ನ ತಂಡದೊಂದಿಗೆ ಗಲಾಟೆಗೆ ಇಳಿದ. ತಳ್ಳಾಟ ಶುರುವಾಯಿತು. ನನ್ನನ್ನು ಆ ಹುಡುಗ ಕೋಪದಿಂದ ತಳ್ಳಿದ. ನಾನು ವೇದಿಕೆಯ ಮೆಟ್ಟಿಲುಗಳಿಂದ ಜಾರಿದೆ’ ಎಂದು ಬರೆದಿದ್ದಾರೆ.  ಸದ್ಯ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!