Mysore
31
scattered clouds

Social Media

ಶುಕ್ರವಾರ, 04 ಏಪ್ರಿಲ 2025
Light
Dark

ಅಮರಾವತಿ ಪೊಲೀಸ್‌ ಸ್ಟೇಷನ್’ನಲ್ಲಿ ಧರ್ಮ

ಪುನೀತ್ ಅರಸೀಕೆರೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ, ಎರಡು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿರುವ “ಅಮರಾವತಿ ಪೊಲೀಸ್ ಸ್ಟೇಷನ್’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. 800ಕ್ಕೂ ಹೆಚ್ಚು ಚಿತ್ರಗಳಿಗೆ ಪ್ರಚಾರ ಕಾರ್ಯ ನಿರ್ವಹಿಸಿರುವ ಕನ್ನಡ ಚಿತ್ರರಂಗದ ಹಿರಿಯ ಪ್ರಚಾರಕರ್ತರಾದ ನಾಗೇಂದ್ರ ಅವರು ಟೀಸರ್ ಲೋಕಾರ್ಪಣೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ಧರ್ಮ ಕೀರ್ತಿರಾಜ್ ಈ ಚಿತ್ರದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ನಟಿಸಿದ್ದು, ಗುರುರಾಜ್ ಜಗ್ಗೇಶ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೇದ್ವಿಕ ಚಿತ್ರದ ನಾಯಕಿ. ಒಂದು ಊರಲ್ಲಿ ನಿಗೂಢವಾಗಿ ಕಣ್ಮರೆಯಾಗುವವನ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ. ಚಿತ್ರದ ಕುರಿತು ಮಾತನಾಡುವ ಧರ್ಮ, “ಈ ಚಿತ್ರದಲ್ಲಿ ನಾನು ಮಸ್ತಿಯಲ್ಲಿರುವ ಪೊಲೀಸ್ ಪಾತ್ರ ಮಾಡಿದ್ದೇನೆ. ಸಿನಿಮಾದಲ್ಲಿ ಆಕ್ಷನ್ ತುಂಬಾ ವಿಶೇಷವಾಗಿದೆ ಎಂದರು.

ನಿರ್ದೇಶಕ ಪುನೀತ್, ‘ಈಗಾಗಲೇ 36 ದಿನಗಳ ಕಾಲ ನಮ್ಮ ಚಿತ್ರದ ಶೇ.90 ಭಾಗದ ಚಿತ್ರೀಕರಣ ನಡೆಸಲಾಗಿದೆ. ಕೈಮ್ಯಾಕ್ಸ್ ಹಾಗೂ ಹಾಡೊಂದರ ಶೂಟಿಂಗ್ ಮಾತ್ರವೇ ಬಾಕಿಯಿದೆ. ಅದನ್ನು ಗೋವಾ ಹಾಗೂ ಹಿಂದೂಪುರದಲ್ಲಿ ಚಿತ್ರೀಕರಿಸುವ ಯೋಜನೆ ಇದೆ. ಅಲ್ಲದೇ ಮಾರ್ಚ್.17ರಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನ ನಮ್ಮ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡುತ್ತಿದ್ದೇವೆ. ಮಾರ್ಚ್ ಕೊನೆಗೆ ಅಥವಾ ಏಪ್ರಿಲ್ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಯೋಚನೆಯಿದೆ’ ಎಂದರು.

ಪಿ.ಪಿ.ಪವರ್‌ ಪಿಕ್ಚರ್ ಲಾಂಛನದಲ್ಲಿ ಕೆ.ಆರ್.ಪ್ರದೀಪ್‌ ಕಮಲಪುರ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಹಿರಿಯ ನಟಿ ಭವ್ಯ, ಧರ್ಮ, ಸಾಧು ಕೋಕಿಲ, ಕಾಕ್ರೋಚ್ ಸುಧಿ, ನಾಗೇಂದ್ರ ಪ್ರಸಾದ್, ಧರ್ಮಣ್ಣ ಕಡೂರು ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರೋಣದ ಬಕ್ಮೇಶ ಸಂಗೀತ ಸಂಯೋಜನೆ, ಗೌತಮ್ಮಟ್ಟಿ ಛಾಯಾಗ್ರಹಣವಿದೆ.

Tags: