Mysore
26
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ಸಿನಿಮಾಲ್‌ : ಪ್ರಣಾಮ್ ದೇವರಾಜ್ ‘ವೈರಂ’

ಹಿರಿಯ ನಟ ದೇವರಾಜ್ ಅವರ ಎರಡನೇ ಮಗ ಪ್ರಣಾಮ್ ದೇವರಾಜ್ ಕೂಡಾ, ಅಣ್ಣ ಪ್ರಜ್ವಲ್‌ರಂತೆ ಬೆಳ್ಳಿತೆರೆಗೆ ಕಾಲಿಟ್ಟವರು. ‘ಕುಮಾರಿ 21 ಎಫ್’ ಚಿತ್ರದ ನಂತರ ಅವರು ಅಭಿನಯಿಸುತ್ತಿರುವ ಚಿತ್ರ ‘ವೈರಂ’. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರಣಾಮ್ ಅವರ ತಂದೆ ದೇವರಾಜ್, ತಾಯಿ ಚಂದ್ರಕಲಾ ದೇವರಾಜ್ ಹಾಗೂ ಅತ್ತಿಗೆ ರಾಗಿಣಿ ಪ್ರಜ್ವಲ್ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ‘ಚಿಕ್ಕ ವಯಸಿನಿಂದ ಅಪ್ಪ, ಅಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. ನಾಲ್ಕು ವರ್ಷಗಳ ನಂತರ ಈ ಸ್ಟೇಜ್ ಮೇಲೆ ನಿಂತು ಮಾತನಾಡುತ್ತಿದ್ದೇನೆ. ನಿರ್ದೇಶಕ ಸಾಯಿ ಶಿವನ್ ಅವರಲ್ಲಿ ತುಂಬಾ ಕಾನ್ಛಿಡೆನ್ಸ್ ಇದೆ. ನಿರ್ಮಾಪಕರಾಗಿ ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ತುಂಬಾ ಬೆಂಬಲ ನೀಡಿದ್ದಾರೆ’ ಎನ್ನುವ ಪ್ರಣಾಮ್ ಅವರೊಂದಿಗೆ ಮೋನಾಲ್, ಶಂಕರ್ ಅಶ್ವಥ್, ವೀಣಾ ಸುಂದರ್, ಗರುಡಾರಾಮ್ ಪ್ರಮುಖ ಪಾತ್ರಧಾರಿಗಳು. ಗೋಪಿನಾಥ್ ಛಾಯಾಗ್ರಹಣ ಹಾಗೂ ಮಹತಿ ಸ್ವರಸಾಗರ್‌ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ನಿಶ್ಚಿತ ಕಂಬೈನ್ಸ್‌ಗೆ ಶಿವರಾಜಕುಮಾರ್ ಚಿತ್ರ
ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಮಂಜುಳಾ ಶಿವಾರ್ಜುನ್ ನಿರ್ಮಿಸಲಿರುವ ಹೊಸ ಚಿತ್ರದಲ್ಲಿ ಶಿವರಾಜಕುಮಾರ್ ನಟಿಸಲಿದ್ದಾರೆ. ತಿನ್ ಶಿವಾರ್ಜುನ್ ಸಹನಿರ್ಮಾಣದ ಈ ಚಿತ್ರವನ್ನು ತೇಜಸ್ವಿ ಕೆ.ನಾಗ್‌ನಿರ್ದೇಶಿಸಲಿದ್ದಾರೆ.. ಸೃಜನ ಅವರ ‘ಮಜಾಟಾಕೀಸ್’ ರಿಯಾಲಿಟಿ ಶೋ ಮತ್ತು ‘ಎಲ್ಲಿದ್ದೆ ಇಲ್ಲೀ ತನಕ’ ಚಿತ್ರದ ನಿರ್ದೇಶಕರು ತೇಜಸ್ವಿ. ನಿಶ್ಚಿತ್ ಕಂಬೈನ್ಸ್ ಈ ಹಿಂದೆ ‘ಶಿವಾರ್ಜುನ’ ಚಿತ್ರ ನಿರ್ಮಿಸಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!