Mysore
20
few clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಬಿಗ್ ಬಾಸ್ ನನ್ನ ಎರಡನೇ ಮನೆ : ಕಿಚ್ಚ ಸುದೀಪ್

ಬಹುಭಾಷಾ ಚಿತ್ರ ಮ್ಯಾಕ್ಸ್ ಚಿತ್ರೀಕರಣದಲ್ಲಿ ನಿರತರಾಗಿರುವ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡದ 10ನೇ ಸೀಸನ್‌ನ ನಿರೂಪಕರಾಗಲು ಸಿದ್ಧರಾಗಿದ್ದಾರೆ ಮತ್ತು ಇದು ಅವರ ಕಿರುತೆರೆ ವೃತ್ತಿಜೀವನದ ಮಹತ್ವದ ಮೈಲಿಗಲ್ಲು.

ಅಕ್ಟೋಬರ್ 8 ರಿಂದ ಪ್ರಾರಂಭವಾಗುವ ಈ ಸೀಸನ್ ಹ್ಯಾಪಿ ಬಿಗ್ ಬಾಸ್ ಎಂಬ ಆಕರ್ಷಕ ಥೀಮ್ ಅನ್ನು ಹೊಂದಿದೆ.

ತಮ್ಮ ಬಿಗ್ ಬಾಸ್ ಪಯಣದ ಬಗ್ಗೆ ಮತನಾಡಿರುವ ನಟ ಸುದೀಪ್ ಅವರು, ನಾನು ಬಿಗ್ ಬಾಸ್ ಕನ್ನಡ ಸೀಸನ್ 1ರಿಂದ ನನ್ನ ಪ್ರಯಾಣ ಆರಂಭವಾಯಿತು ಮತ್ತು ಈಗ, ಇದು ಅದ್ಭುತ ದಶಕದ ಸಂಭ್ರಮದಲ್ಲಿದೆ. ಈ ಪ್ರದರ್ಶನವು ನನಗೆ ಕೇವಲ ಒಂದು ಸೈಡ್ ಪ್ರಾಜೆಕ್ಟ್‌ ಅಲ್ಲ. ಇದು ನನ್ನ ಎರಡನೇ ಮನೆ ಹೊಸ ವ್ಯಕ್ತಿಗಳನ್ನು ಭೇಟಿಯಾಗುವುದು ಮತ್ತು ಮನೆಯಲ್ಲಿ ಅವರ ವೈವಿಧ್ಯಮಯ ಪಾತ್ರಗಳನ್ನು ನೋಡುವುದು ನಿಜಕ್ಕೂ ಸಂತೋಷವಾಗುತ್ತದೆ. ಬಿಗ್ ಬಾಸ್ ಮನೆಯು ಎಂದೆಂದಿಗೂ ಅದ್ದೂರಿಯಾಗಿ, ವಿಶಿಷ್ಟವಾದ ಥೀಮ್ ಮತ್ತು ಅತ್ಯಾಕರ್ಷಕ ಸರ್ಪ್ರೈಸಸ್ ಗಳನ್ನು ಹೊಂದಿರುತ್ತದೆ. ಈ ಸೀಸನ್ ಇನ್ನೂ ಹೆಚ್ಚಿನ ಮನರಂಜನೆ ನೀಡಲಿದೆ ಎಂಬ ಭರವಸೆ ಇದೆ ಎಂದಿದ್ದಾರೆ.

ಬಿಗ್ ಬಾಸ್ ಕನ್ನಡದ ಹೊಸ ಸೀಸನ್ ವಿವಿಧ ಹಿನ್ನೆಲೆಯ 16 ವೈವಿಧ್ಯಮಯ ಸ್ಪರ್ಧಿಗಳನ್ನು ಸ್ವಾಗತಿಸುತ್ತಿದೆ. ಈ ಬಾರಿ ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಚಿತ್ರದ ಖ್ಯಾತಿಯ ಚಾರ್ಲಿ ನಾಯಿಯು ಬಿಗ್ ಬಾಸ್ ಮನೆ ಸೇರುತ್ತಿದ್ದು, ಹೆಚ್ಚು ಕುತೂಹಲ ಮೂಡಿಸಿದೆ.

ಸಾಕುಪ್ರಾಣಿಗಳ ಭಾಗವಹಿಸುವಿಕೆಗಾಗಿ ಪ್ರಾಣಿ ಮಂಡಳಿಯಿಂದ ಎಲ್ಲಾ ಅಗತ್ಯ ಅನುಮತಿಗಳೊಂದಿಗೆ ಚಾರ್ಲಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!