Mysore
24
overcast clouds

Social Media

ಭಾನುವಾರ, 05 ಏಪ್ರಿಲ 2026
Light
Dark

ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೆ ಗೌರವ ಡಾಕ್ಟರೇಟ್‌

ಹಿರಿಯ ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಅವರಿಗೆ ಗೌರವ ಡಾಕ್ಟರೇಟ್‌ ಲಭಿಸಿದೆ. ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಹೈದರಾಬಾದ್‌ನ ಯುನೈಟೆಡ್‌ ಥಿಯೊಲಜಿಕಲ್‌ ರಿಸರ್ಚ್‌ ಇನ್ಸ್ಟಿಟ್ಯೂಟ್‌ ಸುಮಲತಾ ಅಂಬರೀಶ್‌ಗೆ ಡಾಕ್ಟರೇಟ್‌ ನೀಡಿ ಗೌರವಿಸಿದೆ.

ಸಮಾಜಸೇವೆ, ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿನ ಸೇವೆಗಾಗಿ ಸುಮಲತಾರಿಗೆ ಈ ಗೌರವ ಲಭಿಸಿದ್ದು, ನಟಿ ಡಾಕ್ಟರೇಟ್‌ ಸ್ವೀಕರಿಸಿದ ಕಾರ್ಯಕ್ರಮದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ. ಡಾಕ್ಟರೇಟ್‌ ಲಭಿಸಿರುವುದು ತನಗೆ ಇನ್ನೂ ಹೆಚ್ಚಿನ ಸ್ಪೂರ್ತಿ ತುಂಬಿದ್ದು, ಈ ಗೌರವವನ್ನು ಪತಿ ಅಂಬರೀಶ್, ಹೆತ್ತವರು, ಹಿತೈಷಿಗಳು, ರಾಜಕೀಯ ಹಾಗೂ ಸಿನಿಮಾ ಉದ್ಯಮದ ಬೆಂಬಲಿಗರಿಗೆ ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!