ಮುಂಬೈ : ಬಾಲಿವುಡ್ ನ ಹಿರಿಯ ನಿರ್ಮಾಪಕ ಅಬ್ದುಲ್ ಗಫರ್ ನಾಡಿಯಾಡ್‌ವಾಲಾ ಅವರು (92) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆಂದು ಅವರ ಪುತ್ರ ಫಿರೋಜ್ ನಾಡಿಯಾಡ್‌ವಾಲಾ ಅವರು ತಿಳಿಸಿದ್ದಾರೆ.
ಇವರ ನಿಧನಕ್ಕೆ ಬಾಲಿವುಡ್ ನ ಹಲವರು ಗಣ್ಯರು ಕಂಬನಿ ಮಿಡಿದಿದ್ದಾರೆ. ಅಬ್ದುಲ್ ಗಫರ್ ನಾಡಿಯಾಡ್‌ವಾಲಾ ಅವರು 1953 ರಲ್ಲಿ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದರು. ಬಾಲಿವುಡ್ ನಟ ಅಜಯ್ ದೇವಗನ್ ಅವರು ಇವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.