Mysore
14
overcast clouds

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಸೂಪರ್‌ ಸ್ಟಾರ್‌ ರಜನಿಕಾಂತ್ ನಟನೆಯ ಜೈಲರ್‌ ಚಿತ್ರ ವೀಕ್ಷಿಸಲು ಚೆನ್ನೈಗೆ ಆಗಮಿಸಿದ ಜಪಾನ್‌ ದಂಪತಿ!

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ಅವರ ಆಕ್ಷನ್ ಥ್ರಿಲ್ಲರ್ ಚಿತ್ರ ‘ಜೈಲರ್’ ಕ್ರೇಜ್ ಯಾವ ಮಟ್ಟಿಗೆ ಇದೆ ಎಂದರೆ ಜಪಾನಿನ ದಂಪತಿ ಚಿತ್ರ ವೀಕ್ಷಣೆಗಾಗಿ ಚೆನ್ನೈಗೆ ಆಗಮಿಸಿದ್ದಾರೆ. ಯಸುದಾ ಎಂದು ಗುರುತಿಸಲಾದ ವ್ಯಕ್ತಿ ರಜನಿಕಾಂತ್ ಅವರ ಅಭಿಮಾನಿ ಎನ್ನಲಾಗಿದ್ದು,  ಅವರು ತಮ್ಮ ಅಭಿಮಾನಿಗಳೊಂದಿಗೆ ರಜನಿ ಚಿತ್ರ ವೀಕ್ಷಿಸಲು ತಮ್ಮ ಪತ್ನಿಯೊಂದಿಗೆ ಚೆನ್ನೈಗೆ ಬಂದಿದ್ದಾರೆ.

Japanese_couple1

ದಂಪತಿಯ ಹಲವಾರು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ರಜನಿಕಾಂತ್  ಚಿತ್ರವಿರುವ ಬಿಳಿ ಟೀ ಶರ್ಟ್‌ಗಳನ್ನು ಧರಿಸಿರುವುದನ್ನು ಕಾಣಬಹುದು. ಈ ಕುರಿತು ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಯಸುದಾ, ‘ಜೈಲರ್’ ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನ  ವೀಕ್ಷಿಸಲು ಜಪಾನ್‌ನಿಂದ ಚೆನ್ನೈಗೆ ಬಂದಿದ್ದೇವೆ.  ನಮ್ಮ ತಲೈವಾ ಚಿತ್ರ ನೋಡಿ ಇಷ್ಟಪಟ್ಟಿರುವುದಾಗಿ ತಿಳಿಸಿದರು. ಅವರು ರಜನಿಕಾಂತ್ ಚಿತ್ರದ ಸಂಭಾಷಣೆಯನ್ನು ತಮಿಳು ಭಾಷೆಯಲ್ಲಿಯೇ ಹೇಳುತ್ತಿದ್ದರು.

ಇನ್ನೂ ಜೈಲರ್ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು,  ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಆಚರಿಸುತ್ತಿರುವುದು ಕಂಡುಬಂದಿತ್ತು. ‘ಕಬಾಲಿ’ ನಟನ ಪೋಸ್ಟರ್‌ಗೆ ಹಲವು ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ.

ಜಾಕಿ ಶ್ರಾಫ್ 36 ವರ್ಷಗಳ ನಂತರ ರಜನಿಕಾಂತ್ ಅವರೊಂದಿಗೆ  ತೆರೆ ಹಂಚಿಕೊಂಡಿದ್ದಾರೆ. ‘ಜೈಲರ್’ ಆಕ್ಷನ್-ಪ್ಯಾಕ್ಡ್ ಎಂಟರ್ಟೈನರ್ ಎಂದು ಹೇಳಲಾಗಿದೆ ಮತ್ತು ಪ್ರಿಯಾಂಕಾ ಮೋಹನ್, ಡಾ. ಶಿವರಾಜ್ ಕುಮಾರ್,  ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್ ಮತ್ತಿತರ ತಾರಾಬಳಗವನ್ನು ಹೊಂದಿದೆ. ಮಲಯಾಳಂ ನಟ ಮೋಹನ್ ಲಾಲ್ ಕೂಡಾ ಅತಿಥಿ ಪಾತ್ರದಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!