Mysore
16
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

69ನೇ ಫಿಲ್ಮ್​ಫೇರ್​ ಅವಾರ್ಡ್: ಅತ್ಯುತ್ತಮ ನಟ ರಣಬೀರ್‌ ಕಪೂರ್‌; ʼ12th ಫೇಲ್’ ಅತ್ಯುತ್ತಮ ಸಿನಿಮಾ

ಗುಜರಾತ್‌: ಇಲ್ಲಿನ ಗಾಂಧಿ ನಗರದಲ್ಲಿ ಇದೇ ಜನವರಿ 28 ರಂದು 2024ನೇ ಸಾಲಿನ ಫಿಲ್ಮ್​ಫೇರ್​ ಅವಾರ್ಡ್​ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಇದು 69ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಗಿದ್ದು, ಕರಣ್ ಜೋಹರ್ ಕಾರ್ಯಕ್ರಮ ನಡೆಸಿಕೊಟ್ಟರು.

ಕರೀನಾ ಕಪೂರ್, ಕರಿಷ್ಮಾ ಕಪೂರ್, ವರುಣ್ ಧವನ್, ಕಾರ್ತಿಕ್ ಆರ್ಯನ್ ಸೇರಿ ಅನೇಕ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇತ್ತೀಚೆಗೆ ರಲೀಸ್‌ ಆದ ‘12 ಫೇಲ್ ಸಿನಿಮಾ’ ಫಿಲ್ಮ್‌ಪೇರ್‌ ಅವಾರ್ಡ್‌ನಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

‘ಜವಾನ್’, ‘ಪಠಾಣ್’ ಹಾಗೂ ಡಂಕಿ ಸಿನಿಮಾಗಳು ಹಲವು ವಿಭಾಗಗಳಲ್ಲಿ ಆಯ್ಕೆ ಆಗಿತ್ತು. ಆದರೆ, ಗೆಲುವು ಸಿಕ್ಕಿದ್ದು ಕಡಿಮೆ. ‘ಅನಿಮಲ್’ ಸಿನಿಮಾ ಬರೋಬ್ಬರಿ 19 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು. ಇವೆಲ್ಲವನ್ನು ಮೀರಿದ ‘12 ಫೇಲ್ ಸಿನಿಮಾ’ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಯಾವ ಸಿನಿಮಾ ಯಾವ ವಿಭಾಗದಲ್ಲಿ ಗೆದ್ದಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಅತ್ಯುತ್ತಮ ಸಿನಿಮಾ (ಪಾಪ್ಯುಲರ್):‘12th ಫೇಲ್’

ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್): ಜೋರಮ್

ಅತ್ಯುತ್ತಮ ನಿರ್ದೇಶಕ: ವಿಧು ವಿನೋದ್ ಚೋಪ್ರಾ (12th ಫೇಲ್)

ಅತ್ಯುತ್ತಮ ನಟ: ರಣಬೀರ್ ಕಪೂರ್ (ಅನಿಮಲ್)

ಅತ್ಯುತ್ತಮ ನಟ (ಕ್ರಿಟಿಕ್ಸ್): ವಿಕ್ರಾಂತ್ ಮಾಸ್ಸಿ (12th ಫೇಲ್)

ಅತ್ಯುತ್ತಮ ನಟಿ: ಆಲಿಯಾ ಭಟ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಅತ್ಯುತ್ತಮ ನಟಿ (ಕ್ರಿಟಿಕ್ಸ್): ರಾಣಿ ಮುಖರ್ಜಿ (ಮಿಸಸ್ ಚಟರ್ಜಿ Vs ನಾರ್​ವೇ)

ಅತ್ಯುತ್ತಮ ಪೋಷಕ ನಟ: ವಿಕ್ಕಿ ಕೌಶಲ್ (ಡಂಕಿ)

ಅತ್ಯುತ್ತಮ ಪೋಷಕ ನಟಿ: ಶಬಾನ್ ಆಜ್ಮಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಅತ್ಯುತ್ತಮ ಸಾಹಿತ್ಯ: ಅಮಿತಾಭ್ ಭಟ್ಟಾಚಾರ್ಯ (ತೆರೆ ವಾಸ್ತೆ-ಜರ ಹಟ್ಕೆ ಜರ ಬಚ್ಕೆ)

ಅತ್ಯತ್ತಮ ಕಥೆ: ಅಮಿತ್ ರೈ (ಒಎಂಜಿ 2)

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!