Mysore
25
broken clouds

Social Media

ಬುಧವಾರ, 26 ಮಾರ್ಚ್ 2025
Light
Dark

ಸಿನಿಮಾಲ್‌: ನವರಸಗಳನ್ನು ಆಧರಿಸಿ ‘9ಸುಳ್ಳು ಕಥೆಗಳು’

ರಂಗಭೂಮಿ ಹಿನ್ನೆಲೆಯ ಮಂಜುನಾಥ್ ಮುನಿಯಪ್ಪ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ ‘೯ ಸುಳ್ಳು ಕಥೆಗಳು’. ಇದರ ಟ್ರ್ತ್ಯೈಲರ್ ಮತ್ತು ಆಡಿೋಂ ಬಿಡುಗಡೆಯನ್ನು ಪತ್ರಕರ್ತ, ನಿರ್ದೇಶಕರಾದ ಸದಾಶಿವ ಶೆಣೈ ಮತ್ತು ಇಂದ್ರಜಿತ್ ಲಂಕೇಶ್ ಅವರು ಮಾಡಿದರು. ಶಿವರಾಜಕುಮಾರ್ ಈ ಚಿತ್ರದ ಟ್ರ್ತ್ಯೈಲರ್‌ಗೆ ಧ್ವನಿ ನೀಡಿರುವುದು ವಿಶೇಷ. ‘ಇದೊಂದು ನೈಜ ಘಟನೆ ಆಧಾರಿತ ಚಿತ್ರ. ನವರಸಗಳನ್ನು ಆಧರಿಸಿ ಈ ಚಿತ್ರದ ಕಥೆ ಮಾಡಿದೆ. ನಂತರ ನಿರ್ಮಾಪಕರಿಗೆ ಹುಡುಕಾಡಿದೆ. ಯಾರೂ ಸಿಗಲಿಲ್ಲ. ನನ್ನ ಸ್ನೇಹಿತ ಸೂರ್ಯನಾರಾಯಣ್ ಮೊದಲು ದೊಡ್ಡ ಮೊತ್ತದ ಹಣ ನೀಡಿ ಈ ಚಿತ್ರಕ್ಕೆ ಚಾಲನೆ ನೀಡಿದರು. ನಂತರ ಸಾಕಷ್ಟು ಗೆಳೆಯರು ನನ್ನ ಜೊತೆಯಾದರು’ ಎಂದರು ಮಂಜುನಾಥ ಮುನಿಯಪ್ಪ.

‘ಚಿತ್ರದಲ್ಲಿ ಆರು ಹಾಡುಗಳಿವೆ. ಸಂತ ಶಿಶುನಾಳ ಶರೀಫರ ಗೀತೆೊಂಂದನ್ನು ಬಳಸಿಕೊಂಡಿದ್ದೇವೆ. ವಿಕ್ರಮ್ ವಸಿಷ್ಠ, ಸತೀಶ್ ಬೆಲ್ಲೂರು ಹಾಗೂ ಕಿರಣ್ ವಿಪ್ರ ಹಾಡುಗಳನ್ನು ಬರೆದಿದ್ದಾರೆ. ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ವಾರಿಜಾಶ್ರೀ, ಶಶಿಧರ್ ಕೋಟೆ, ಚಿಂತನ್ ವಿಕಾಸ್ ಸೇರಿದಂತೆ ಪ್ರಸಿದ್ಧ ಗಾಯಕರು ಈ ಹಾಡುಗಳನ್ನು ಹಾಡಿದ್ದಾರೆ. ನಟ, ನಿರ್ದೇಶಕ ರಿಷಭ್ ಶೆಟ್ಟಿ ನಮ್ಮ ಚಿತ್ರದ ಹಾಡೊಂದನ್ನು ಹಾಡಿದ್ದಾರೆ’ ಎಂಬುದು ಸಂಗೀತ ಸಂಯೋಜಕರಾದ ಪ್ರವೀಣ್ ಮತ್ತು ಪ್ರದೀಪ್ ಮಾತು. ಪರಮೇಶ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನದ ಚಿತ್ರ ‘೯ ಸುಳ್ಳು ಕಥೆಗಳು’ ಚಿತ್ರದ ತಾರಾಬಳಗದಲ್ಲಿ ಪ್ರಮೋದ್ ಶೆಟ್ಟಿ, ವಿನಾಯಕ ಜೋಶಿ, ಕೃಷ್ಣ ಹೆಬ್ಬಾಳೆ, ಸುಕೃತ ವಾಗ್ಲೆ, ಕರಿಸುಬ್ಬು, ನಂದಗೋಪಾಲ್, ಲಕ್ಷಿ ್ಮೀ ಚಂದ್ರಶೇಖರ್, ಶ್ರೀನಿವಾಸಪ್ರಭು, ಸುನೇತ್ರ ಪಂಡಿತ್, ಸುಪ್ರೀತಾ ಶೆಟ್ಟಿ, ಸುಂದರ್ ವೀಣಾ, ವೀಳ್ಯಾ ರಾಘವೇಂದ್ರ ಸೇರಿದಂತೆ ನೂರಕ್ಕೂ ಅಧಿಕ ಕಲಾವಿದರು ಇದ್ದಾರಂತೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ