ಕೆ. ಬಿ. ರಮೇಶನಾಯಕ
ಮೈಸೂರು: ಕಳೆದ ನಾಲ್ಕು ವರ್ಷಗಳಿಂದ ಜನಪ್ರತಿ ನಿಧಿಗಳಿಲ್ಲದೆ ಆಡಳಿತಾಧಿಕಾರಿಗಳ ದರ್ಬಾರು ನಡೆಯುತ್ತಿ ರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿಗಳಿಗೆ ಕ್ಷೇತ್ರವಾರು ನಿಗದಿಯಾಗುವ ಮೀಸಲಾತಿಯತ್ತ ಆಕಾಂಕ್ಷಿಗಳ ಚಿತ್ತ ನೆಟ್ಟಿದ್ದು, ತಮ್ಮ ಸ್ಪರ್ಧೆಗೆ ಅನುಕೂಲವಾಗುವಂತೆ ಮೀಸಲು ನಿಗದಿಪಡಿಸುವ ಕುರಿತು ಸಚಿವರು, ಶಾಸಕರ ಬೆನ್ನು ಹತ್ತಿದ್ದಾರೆ.
ಜೂನ್ ತಿಂಗಳೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸು ವುದಾಗಿ ಒಪ್ಪಿಕೊಂಡಿರುವ ರಾಜ್ಯ ಸರ್ಕಾರ, ವಿಧಾನ ಮಂಡಲ ಅಧಿವೇಶನದ ಸಂದರ್ಭ ದಲ್ಲಿ ಶಾಸ ಕರು, ಸಚಿವರು ನೀಡುವ ಪಟ್ಟಿ ಯನ್ನು ಆಧರಿಸಿ ಮೀಸ ಲಾತಿ ನಿಗದಿಪಡಿಸುವುದು ಬಹುತೇಕ ಖಚಿತವಾಗಿ ರುವ ಕಾರಣ ಬೆಂಗಳೂರಿನತ್ತ ದೌಡಾಯಿಸಿರುವ ಮುಖಂ ಡರು, ಆಕಾಂಕ್ಷಿಗಳು ನಾಯಕರ ಮನವೊಲಿಕೆಯಲ್ಲಿ ತೊಡಗಿ ದ್ದಾರೆ. ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಮುಂದಿನ ಅವಧಿಗೆ ವಿಧಾನ ಸಭಾ ಚುನಾ ವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಬಹುತೇಕ ಹೊಸ ಮುಖ ಗಳಿಗೇ ಮಣೆ ಹಾಕಿ, ಹಳಬರನ್ನು ದೂರ ಇಡಲು ಅನುಕೂಲ ವಾಗುವಂತೆ ಶಾಸಕರು ಮೀಸಲಾತಿ ನಿಗದಿ ಪಡಿಸುವುದಕ್ಕೆ ಒಳಗೊಳಗೆ ಕರಾಮತ್ತು ನಡೆಸುತ್ತಿರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಅನೇಕ ಮುಖಂಡರು ಸಚಿವರು, ಸಿಎಂ ಅವರ ಮೊರೆ ಹೋಗಿರುವುದು ಗಮನಾರ್ಹವಾಗಿದೆ.
ಕಳೆದ ಬಾರಿ ಏನಾಗಿತ್ತು? : ೨೦೧೬ರಲ್ಲಿ ಜಿಪಂ ಚುನಾವಣೆ ನಡೆದಿತ್ತು. ೪೯ ಸದಸ್ಯ ಬಲದ ಜಿ. ಪಂ. ನಲ್ಲಿ ಕಾಂಗ್ರೆಸ್‌ನಿಂದ ೨೨, ಜಾ. ದಳದ ೧೮, ಬಿಜೆಪಿಯ ೮ ಹಾಗೂ ಪಕ್ಷೇತರ ಸದಸ್ಯರೊಬ್ಬರು ಆಯ್ಕೆಯಾಗಿದ್ದರು. ಕಾಂಗ್ರೆಸ್ ದೊಡ್ಡ ಪಕ್ಷವಾದರೂ ಸ್ವತಂತ್ರವಾಗಿ ಅಧಿಕಾರಕ್ಕೇ ರುವಷ್ಟು ಸಂಖ್ಯಾಬಲ ಇಲ್ಲದ ಕಾರಣ ಅಧಿಕಾರದಿಂದ ದೂರ ಉಳಿಯಿತು.
ಜಾ. ದಳ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಅಧ್ಯಕ್ಷರಾಗಿ ಜಾ. ದಳದ ನಯೀಮಾ ಸುಲ್ತಾನ, ಉಪಾ ಧ್ಯಕ್ಷರಾಗಿ ಬಿಜೆಪಿಯ ನಟರಾಜ್ ಆಯ್ಕೆಯಾಗಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಯ ಅವಧಿ ೫ ವರ್ಷ ಗಳಾದರೂ ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಒಡಂಬಡಿಕೆ ಯಾಗಿತ್ತು. ಈ ಹಿನ್ನೆಲೆಯಲ್ಲಿ ನಯೀಮಾ ಸುಲ್ತಾನ ಹಾಗೂ ನಟರಾಜ್ ರಾಜೀನಾಮೆ ಸಲ್ಲಿಸಿದ್ದರು.
ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಯೊಂದಿಗೆ ಮೈತ್ರಿಯಿಂದ ದೂರ ಉಳಿದ ಜಾ. ದಳದ ಪ್ರಮುಖರು ಕಾಂಗ್ರೆಸ್‌ನೊಂದಿಗೆ ಮೈತ್ರಿ ಬೆಳೆಸಿದರು. ೨ನೇ ಅವಽಯಲ್ಲಿ ಅಧ್ಯಕ್ಷೆಯಾಗಿ ಜಾ. ದಳದ ಪರಿಮಳಾ ಶ್ಯಾಂ, ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಗೌರಮ್ಮ ಸೋಮ ಶೇಖರ್ ಆಯ್ಕೆಯಾಗಿದ್ದರು. ೨೦೨೧ರಲ್ಲಿ ಅಧಿಕಾರದ ಅವಧಿ ಮುಗಿದರೂ ಈತನಕ ಚುನಾವಣೆ ನಡೆಯದ ಕಾರಣ ಹಿರಿಯ ಐಎಎಸ್ ಅಧಿಕಾರಿಗಳೇ ಜಿಪಂ ಆಡಳಿ ತಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುವಂತಾಗಿದೆ.
ಕಳೆದ ಬಾರಿ ಜಿಲ್ಲಾ ಪಂಚಾಯಿತಿ ೪೯ ಸದಸ್ಯರನ್ನು ಹೊಂದಿತ್ತು. ೨೦೨೧ರಲ್ಲಿ ಕರ್ನಾಟಕ ಪಂಚಾಯತ್‌ರಾಜ್ ಸೀಮಾ ಆಯೋಗ ನಾಲ್ಕು ಹೊಸ ಕ್ಷೇತ್ರಗಳನ್ನು ಸೇರಿಸಿ ಕ್ಷೇತ್ರಗಳ ಸಂಖ್ಯೆಯನ್ನು ೫೩ಕ್ಕೆ ಏರಿಕೆ ಮಾಡಿತ್ತು.ನಂತರ ೨೦೨೩ರಲ್ಲಿ ೫೩ ಕ್ಷೇತ್ರಗಳಿಂದ ೪೬ಕ್ಕೆ ಇಳಿಕೆ ಮಾಡಿ ಆಯೋಗ ಅಽಸೂಚನೆ ಹೊರಡಿಸಿತ್ತು.
ಅನುದಾನಕ್ಕೂ ಕತ್ತರಿ: ಚುನಾಯಿತ ಜನಪ್ರತಿನಿಽಗಳು ಇಲ್ಲದ ಕಾರಣ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿದ್ದ ಅನುದಾನಕ್ಕೂ ಕತ್ತರಿ ಬಿದ್ದಿದೆ. ೧೫ನೇ ಹಣಕಾಸು ಆಯೋಗದಿಂದ ಬಿಡುಗಡೆಯಾಗುತ್ತಿದ್ದ ಅನುದಾನದಲ್ಲಿ ೨೦೨೪-೨೫ನೇ ಸಾಲಿನ ಅನುದಾನ ವಾಪಸ್ ಪಡೆದಿದ್ದರೆ, ಜಲಜೀವನ್ ಮಿಷನ್‌ನಲ್ಲೂ ಕಡಿತ ಮಾಡಲಾಗಿದೆ. ಕೆಲವು ಯೋಜನೆಗಳ ಅನುದಾನವನ್ನು ಗ್ರಾಪಂಗೆ ನೇರವಾಗಿ ಬಿಡುಗಡೆ ಮಾಡಿ ಜಿಪಂಗೆ ನೀಡಿಲ್ಲ. ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ಕ್ರಿಯಾಯೋಜನೆ ರೂಪಿಸಿ ಒಪ್ಪಿಗೆ ಪಡೆದರೆ ಒಂದಿಷ್ಟು ಅನುಕೂಲವಾಗಲಿದೆ. ಒಂದು ವೇಳೆ ಕ್ರಿಯಾಯೋಜನೆ ರೂಪಿಸುವುದು ವಿಳಂಬವಾದರೆ ಮತ್ತಷ್ಟು ಹೊಡೆತ ಬೀಳಲಿದೆ.
ಆಕಾಂಕ್ಷಿಗಳ ಮಾನಸಿಕ ತಯಾರಿ
ಮೈಸೂರು: ಈಗಾಗಲೇ ಸಾಕಷ್ಟು ಆಕಾಂಕ್ಷಿಗಳು ಚುನಾವಣೆಯಲ್ಲಿ ಸ್ಪಽಸಲು ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡಿದ್ದು, ಮೀಸಲಾತಿ ಖಾತ್ರಿಯಾದರೆ ತಮ್ಮ ಅಖಾಡವನ್ನು ಅಂತಿಮಗೊಳಿಸಿಕೊಳ್ಳುತ್ತಾರೆ. ಹಳ್ಳಿಗಳಲ್ಲಿ ನಡೆಯುತ್ತಿರುವ ಗ್ರಾಮದೇವತೆಗಳ ಹಬ್ಬಗಳಲ್ಲಿ ಆಕಾಂಕ್ಷಿಗಳು ಸ್ವಾಗತ ಕೋರುವಂತಹ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಮಹಾಶಿವರಾತ್ರಿ ಹಬ್ಬಕ್ಕೆ ಶುಭ ಕೋರಿದ್ದ -ಕ್ಸ್‌ಗಳಲ್ಲೂ ಪ್ರಚಾರ ಪಡೆದಿದ್ದ ಆಕಾಂಕ್ಷಿಗಳು ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ನಡೆಯುವ ಹಬ್ಬದ ಅಂಗವಾಗಿ ಮುಖ್ಯರಸ್ತೆ, ದೇವ ಸ್ಥಾನಗಳ ಬಳಿ ಗಮನ ಸೆಳೆಯುವ ರೀತಿ -ಕ್ಸ್ ಗಳನ್ನು ಹಾಕಿಸುತ್ತಿದ್ದಾರೆ. ಈ -ಕ್ಸ್‌ಗಳಲ್ಲಿ ಸಚಿವರು, ಶಾಸಕರ ಲ್ಲದೆ ಊರಿನ ಪ್ರಮುಖ ಮುಖಂಡರನ್ನು ಮನವೊಲಿಸುವಂತಹ ರೀತಿಯಲ್ಲಿ -ಟೋಗಳನ್ನು ಹಾಕಿಸಿಕೊಂಡಿರುವುದನ್ನು ಕಾಣಬಹುದಾಗಿದೆ.
ರಾಜಕೀಯ ಮಹತ್ವ ಪಡೆದ ಜಿಪಂ
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ನಂತರ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣವನ್ನು ಪ್ರವೇಶಿಸಿರುವ ಹಲವಾರು ಮಹನೀಯರು ಇದ್ದಾರೆ. ಹೀಗಾಗಿ ಜಿಲ್ಲಾ ಪಂಚಾಯಿತಿ ಚುನಾವಣೆ ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದಿದೆ.





