Mysore
20
mist

Social Media

ಬುಧವಾರ, 31 ಡಿಸೆಂಬರ್ 2025
Light
Dark

ಹುಲ್ಲಹಳ್ಳಿ ನಾಲೆಯಲ್ಲಿ ೨ ದಿನದಲ್ಲಿ ಹರಿದ ನೀರು

ನಂಜನಗೂಡು: ಕಬಿನಿ ಬಲದಂಡೆ ನಾಲೆಯ ಉಪನಾಲೆ ಕುಸಿದು ಬಿದ್ದ ಪರಿಣಾಮ ಹುಲ್ಲಹಳ್ಳಿ ನಾಲೆಯ ನೀರು ಮುಂದಕ್ಕೆ ಹರಿಯಲಾಗದೆ ಬಿಳಿಗೆರೆ ಹೋಬಳಿಯ ೭,೨೦೦ ಎಕರೆ ಪ್ರದೇಶಕ್ಕೆ ನೀರಿಲ್ಲದೆ ತೊಂದರೆಯಾ ಗಿದ್ದ ಕುರಿತು ‘ಆಂದೋಲನ’ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದನ್ನು ಗಮನಿಸಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಾಲೆ ದುರಸ್ತಿಪಡಿಸಿ ನೀರು ಹರಿಯಲು ವ್ಯವಸ್ಥೆ ಮಾಡಿದ್ದಾರೆ.

ಕಬಿನಿ ಜಲಾಶಯದ ಇಂಜಿನಿಯರುಗಳಾದ ಹಾಲಪ್ಪ ಹಾಗೂ ದರ್ಶನ್ ಅವರು ಸ್ಥಳಕ್ಕೆ ಆಗಮಿಸಿ ಕುಸಿದು ಬಿದ್ದಿದ್ದ ಕಿರುನಾಲೆಯ ಅವಶೇಷಗಳನ್ನು ತೆರವುಗೊಳಿಸಿ ಹೊರಸಾಗಿಸಿದ್ದರಿಂದ ಗುರುವಾರ ಮಧ್ಯಾಹ್ನದಿಂದಲೇ ಹುಲ್ಲಹಳ್ಳಿ ನಾಲೆಯಲ್ಲಿ ನೀರು ಹರಿಯತೊಡಗಿದ್ದು ನಾಲೆಯ ಅಚ್ಚುಕಟ್ಟು ಭಾಗದ ರೈತರ ನೆಮ್ಮದಿಗೆ ಕಾರಣವಾಗಿದ್ದಾರೆ

Tags:
error: Content is protected !!