Mysore
21
overcast clouds

Social Media

ಭಾನುವಾರ, 22 ಫೆಬ್ರವರಿ 2026
Light
Dark

ಅವಕಾಶ ವಂಚಿತ ಚೆನ್ನೈ ಮಕ್ಕಳಿಗೆ ಪ್ರವಾಸ ಭಾಗ್ಯ

ಕೆ.ಎಸ್.ಚಂದ್ರಶೇಖರ್ ಮೂರ್ತಿ

ಮೈಸೂರು: ಪ್ರತಿಯೊಂದು ಮಗುವಿಗೂ ಎಲ್ಲಾ ರೀತಿಯ ಅನುಭವ ಬೇಕು. ಆದರೆ ಎಲ್ಲ ಮಕ್ಕಳಿಗೂ ಅಂತಹ ಅವಕಾಶ ಒದಗಿ ಬರುವುದಿಲ್ಲ. ಕೆಲವು ಮಕ್ಕಳಿಗೆ ಕಾರಿನಲ್ಲಿ ಕುಳಿತು ಸಂಚರಿಸಬೇಕು, ರೈಲು, ವಿಮಾನದಲ್ಲಿ ಓಡಾಡಬೇಕು ಎಂಬ ಆಸೆ ಇರುತ್ತದೆ. ಆದರೆ ಅವರವರ ಆರ್ಥಿಕ ಪರಿಸ್ಥಿತಿ ಅವರ ಆಸೆಗಳನ್ನು ಆಸೆಗಳನ್ನಾಗಿಯೇ ಇರಿಸಿ ಬಿಡುತ್ತದೆ.

ಇಂತಹ ಅವಕಾಶ ವಂಚಿತ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ವಿಶೇಷ ಅನುಭವ ನೀಡಲು ಅಮಿಟಿ ರೌಂಡ್ ಟೇಬಲ್ ೧೫೬, ರೌಂಡ್ ಟೇಬಲ್ ೧೦೦ ಚೆನ್ನೈ ಮತ್ತು ಲೇಡಿಸ್ ಸರ್ಕಲ್ ಇಂಡಿಯಾ ಮೈಸೂರು ೧೦೯ ತಂಡ ಫ್ಲೈಟ್ ಆಫ್ ಫ್ಯಾಂಟಸಿ ಪರಿಕಲ್ಪನೆಯಡಿ ಮಕ್ಕಳನ್ನು ವಿಮಾನದಲ್ಲಿ ಪ್ರಯಾಣ ಮಾಡಿಸುವ ಮೂಲಕ ಅವರ ಜೀವನದಲ್ಲಿ ಈ ಅನುಭವ ವಿಶೇಷವಾಗಿ ಉಳಿದುಕೊಳ್ಳುವಂತೆ ಮಾಡುತ್ತಿದೆ.

ಚೆನ್ನೈನಲ್ಲಿ ಇರುವ ಸೌಲಭ್ಯವಂಚಿತ ಸರ್ಕಾರಿ ಶಾಲೆಯ ಪ್ರತಿಭಾವಂತ ಹದಿನೈದು ವಿದ್ಯಾರ್ಥಿನಿಯರನ್ನು ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರವಾಸಕ್ಕೆಂದು ಕರೆದುಕೊಂಡು ಬಂದಿದ್ದಾರೆ. ಶನಿವಾರ ಚೆನ್ನೈನಿಂದ ಎ.ಸಿ.ಕೋಚ್ ರೈಲಿನಲ್ಲಿ ಮೈಸೂರಿಗೆ ಬಂದಿಳಿದಿದ ಮಕ್ಕಳು ಮೈಸೂರಿನಲ್ಲಿ ಅರಮನೆ, ಗಣಪತಿ ಸಚ್ಚಿದಾನಂದ ಆಶ್ರಮ, ಶುಖವನ, ಬೋನ್ಸಾಯ್ ಗಾರ್ಡನ್ ಮತ್ತು ಕೆಆರ್‌ಎಸ್ (ಬೃಂದಾವನ ಗಾರ್ಡನ್) ಗೆ ಭೇಟಿ ನೀಡಿದ್ದಾರೆ. ಭಾನುವಾರ ಚಾಮುಂಡಿ ಬೆಟ್ಟ, ಮೈಸೂರು ಮೃಗಾಲಯ, ಕಾರಂಜಿ ಕೆರೆ, ಸ್ಯಾಂಡ್ ಮ್ಯೂಸಿಯಂಗೆ ಭೇಟಿ ನೀಡಲಿದ್ದಾರೆ. ಈ ಮೈಸೂರು ಪ್ರವಾಸದಲ್ಲಿ ಹದಿನೈದು ವಿದ್ಯಾರ್ಥಾನಿಯರ ಜೊತೆಗೆ ಮೂವರು ಶಿಕ್ಷಕರು ಕೂಡ ಇದ್ದಾರೆ.

ಚೆನ್ನೈಯಿಂದ ಮೈಸೂರಿಗೆ ಎಸಿ ಕೋಚ್ ರೈಲಿನ ಮೂಲಕ ಬಂದಿದ್ದು, ಹಿಂತಿರುಗುವಾಗ ವಿಮಾನದ ಮೂಲಕ ತೆರಳಲಿದ್ದಾರೆ. ಈ ಮೂಲಕ ಮಕ್ಕಳು ವಿಶೇಷ ಅನುಭವ ಹೊಂದಲಿದ್ದಾರೆ. ವರಿಷ್ಠರೊಂದಿಗೆ ಸತೀಶ್ ಮಾತುಕತೆ ಶುಕ್ರವಾರ ದಿಲ್ಲಿಗೆ ಆಗಮಿಸಿದ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ವರಿಷ್ಠರ ಜೊತೆ ಮಾತುಕತೆನಡೆಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಿದರೆ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಉಳಿಗಾಲವಿಲ್ಲ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸುವ ಪ್ರಯತ್ನಗಳಾಗಿವೆ.

ಒಂದು ವೇಳೆ ಬದಲಾವಣೆ ಮಾಡುವುದಾದರೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬುದು ಸಿದ್ದರಾಮಯ್ಯ ಬೆಂಬಲಿಗರಪ್ರತಿಪಾದನೆಯಾಗಿದೆ. ರಾಜಣ್ಣ ಮತ್ತು ಸತೀಶ್ ಜಾರಕಿಹೊಳಿ ಅವರ ಜಂಟಿ ದಿಲ್ಲಿ ಯಾತ್ರೆ ಕುರಿತು ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟಾಗಿದೆ.

” ಮಕ್ಕಳಿಗೆ ಸುಖ ದುಃಖ ಹೀಗೆ ಎಲ್ಲಾ ರೀತಿಯ ಅನುಭವ ಆಗಬೇಕು. ಸೌಲಭ್ಯ ವಂಚಿತ ಬಡ ಮಕ್ಕಳಿಗೆ ಪ್ರವಾಸದ ಅನುಭವ ನೀಡಬೇಕು. ಅನುಕೂಲ ಇರದ ಶಾಲಾ ಮಕ್ಕಳಿಗೆ ವಿಮಾನದ ಮೂಲಕ ಪ್ರಯಾಣ ಮಾಡಿಸುವುದರ ಮೂಲಕ ಅವರಿಗೆ ವಿಶೇಷ ಅನುಭವ ನೀಡಬೇಕು ಎಂಬ ಉದ್ದೇಶದಿಂದ ಈ ಫ್ಲೈಟ್ ಆಫ್ ಫ್ಯಾಂಟಸಿ ಪರಿಕಲ್ಪನೆಯಡಿ ಈ ಯೋಜನೆ ಹಾಕಿಕೊಂಡಿದ್ದೇವೆ.”

ನಿಶಾ ಜಿ. ಲೇಡಿಸ್ ಸರ್ಕಲ್ ಇಂಡಿಯಾ

” ಈ ಪ್ರಯಾಣ ನಮಗೆ ಅದ್ಭುತವಾದ ಅನುಭವವಾಗಿತ್ತು. ಈ ಪ್ರವಾಸದಿಂದ ನಾವು ತುಂಬಾ ವಿಷಯಗಳನ್ನು ತಿಳಿದುಕೊಂಡಿದ್ದೇವೆ. ನನ್ನನ್ನು ಈ ಪ್ರವಾಸಕ್ಕೆ ಆಯ್ಕೆ ಮಾಡಿದ್ದಕ್ಕಾಗಿ ಹೃದಯ ಪೂರ್ವಕ ಧನ್ಯವಾದ ತಿಳಿಸುತ್ತೇನೆ. ಎಲ್ಲರೂ ತುಂಬ ಸಹನೆಯಿಂದ ಸ್ನೇಹ ಭಾವನೆಯಿಂದ ನಡೆದುಕೊಂಡರು. ಇದು ನಮಗೆ ತುಂಬಾ ಇಷ್ಟವಾಯಿತು ಮತ್ತು ನಾವು ಅವರೊಂದಿಗೆ ತುಂಬಾ ಆರಾಮದಾಯಕವಾಗಿ ಇದ್ದೇವೆ.”

ಸಹದಾ ಬಾನು, ವಿದ್ಯಾರ್ಥಿನಿ

” ಈ ಪ್ರಯಾಣ ತುಂಬ ಚೆನ್ನಾಗಿತ್ತು. ಇದೇ ಮೊದಲ ಬಾರಿಗೆ ಎ ಸಿ ಕೋಚ್ ರೈಲು ಪ್ರಯಾಣ ಮಾಡಿದ್ದೇನೆ. ಇದು ನನಗೆ ಅದ್ಭುತ ಅನುಭವ ನೀಡಿದೆ. ರೈಲಿನಲ್ಲಿ ನಮಗೆ ಚಾಕಲೇಟ್ ಹಾಗೂ ತಿಂಡಿ ಕೊಟ್ಟು ಚೆನ್ನಾಗಿ ನೋಡಿಕೊಂಡರು. ರೌಂಡ್ ಟೇಬಲ್ ಅವರಿಗೆ ಧನ್ಯವಾದಗಳು.”

ಲೆನ್ನಿಸ್ ಮೆರಿಯಮ್, ವಿದ್ಯಾರ್ಥಿನಿ, ಸಾಲಿಗ್ರಾಮಂ, ಚೆನ್ನೈ

” ಫ್ಲೈಟ್ ಆಫ್ ಫ್ಯಾಂಟಸಿ ಎಂಬುದು ಜೀವನದಲ್ಲಿ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡುವುದರ ಮೂಲಕ ವಿಶೇಷ ಅನುಭವವನ್ನು ಪಡೆಯುವುದಾಗಿದೆ. ಈ ಬಾರಿ ವಿಶೇಷ ಅಂದರೆ ಸರ್ಕಾರಿ ಶಾಲೆಯಲ್ಲಿ ಶೈಕ್ಷಣಿಕವಾಗಿ ಮುಂದಿರುವ ಪ್ರತಿಭಾವಂತ ಹದಿನೈದು ವಿದ್ಯಾರ್ಥಿಯರನ್ನು ಮೈಸೂರು ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದೇವೆ.”

-ಪ್ರದೀಪ್ ಕಶ್ಯಪ್, ಚೇರ್ಮನ್, ಮೈಸೂರು ಅಮಿಟಿ ರೌಂಡ್ ಟೇಬಲ್ ೧೫೬

Tags:
error: Content is protected !!