ಹಳೆಯ ವರ್ಷದ ಅಂಚಿನಲ್ಲಿ ನಿಂತು ಹೊಸ ವರ್ಷವನ್ನು ಸ್ವಾಗತಿಸಲು ಜನರು ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ೨೦೨೪ನೇ ವರ್ಷ ಅಂತ್ಯಗೊಳ್ಳಲು ಕೆಲವೇ ದಿನಗಳು ಬಾಕಿ ಇವೆ.
ಈ ವರ್ಷ ರಾಜ್ಯ, ದೇಶದಲ್ಲಿ ಸಂಭವಿಸಿದ ಪ್ರಮುಖ ದುರಂತಗಳ ಕುರಿತು ಪಕ್ಷಿನೋಟ ಇಲ್ಲಿದೆ.
ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆ- ಸೋಟ, ಮಂಡ್ಯದಲ್ಲಿ ಇಬ್ಬರು ಮಹಿಳೆಯರನ್ನು ಕೊಂದು ದೇಹಗಳನ್ನು ತುಂಡು ಮಾಡಿದ್ದುದು,
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ, ಉತ್ತರ ಪ್ರದೇಶದ ಕಾಲ್ತುಳಿತದಲ್ಲಿ ನೂರಾರು ಮಂದಿ ಸಾವಿಗೀಡಾಗಿದ್ದು… ಹೀಗೆ ಈ ವರ್ಷ ಹಲವಾರು ದುರಂತಗಳಿಂದ ದೇಶ ನಲುಗಿದೆ.
ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಮಾ.೧- ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ದಿ ರಾಮೇಶ್ವರಂ ಕೆ-ಗೆ ಮಾ.೧ರಂದು ಗ್ರಾಹಕನ ಸೋಗಿನಲ್ಲಿ ಬಂದ ಶಂಕಿತ ಉಗ್ರ ಐಇಡಿ ಬಾಂಬ್ ಇಟ್ಟು ಸೋಟಿಸಿದ ಘಟನೆ ಆತಂಕ ಸೃಷ್ಟಿಸಿತ್ತು. ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯ ಪ್ರಯಾಣಿಕನಂತೆ ಬಂದು ಗ್ರಾಹಕನ ಸೋಗಿನಲ್ಲಿ ಹೋಟೆಲ್‌ಗೆ ತೆರಳಿ ಬಾಂಬ್ ಸೋಟಿಸಿದ ವಿಡಿಯೋ ವೈರಲ್ ಆಗಿತ್ತು. ಘಟನೆಯಲ್ಲಿ ೯ ಮಂದಿ ಗಾಯಗೊಂಡಿದ್ದರು.
ದೇಹ ತುಂಡರಿಸಿ ಕೆರೆಗೆ ಎಸೆದ ಕಟುಕ: ಮಾ.೧೯ – ಮಂಡ್ಯ ಜಿಲ್ಲೆಯಲ್ಲಿ ಮಹಿಳೆ ಮತ್ತು ಆಕೆಯ ಮೊಮ್ಮಗಳನ್ನು ಕೊಲೆ ಮಾಡಿ, ಇಬ್ಬರ ಮೃತದೇಹಗಳನ್ನೂ ತುಂಡರಿಸಿ ಬೆಳ್ಳೂರು ಕೆರೆಗೆ ಎಸೆದಿದ್ದ ಘಟನೆ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು.
ಹೋರ್ಡಿಂಗ್ ಕುಸಿದು ೧೭ ಮಂದಿ ಸಾವು: ಮೇ ೩- ಮುಂಬೈನ ಘಾಟ್ಕೋಪರ್ ಉಪ ನಗರದಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ಬೃಹತ್ ಜಾಹೀರಾತು -ಫಲಕ (ಹೋರ್ಡಿಂಗ್) ಕುಸಿದು ಬಿದ್ದು ೧೭ ಮಂದಿ ಸಾವನ್ನಪ್ಪಿ, ೭೪ ಮಂದಿಗೆ ಗಾಯಗಳಾಗಿದ್ದವು.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ: ಜೂ.೯- ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಇಡೀ ರಾಜ್ಯವನ್ನು ತಲ್ಲಣಗೊಳಿಸಿತ್ತು. ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಹಲವರನ್ನು ಬಂಧಿಸಿ ಆರು ತಿಂಗಳುಗಳ ಕಾಲ ಜೈಲಿನಲ್ಲಿಡಲಾಗಿತ್ತು. ಇತ್ತೀಚೆಗಷ್ಟೆ ಎಲ್ಲರಿಗೂ ಜಾಮೀನು ದೊರೆತು ಬಿಡುಗಡೆಯಾಗಿದ್ದಾರೆ.
ಶಿರೂರು ಗುಡ್ಡ ಕುಸಿತ: ಜುಲೈ ೧೬- ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಗುಡ್ಡ ಕುಸಿದು ೧೧ ಮಂದಿ ಮಣ್ಣಿನಲ್ಲಿ ಕೊಚ್ಚಿ ಹೋದ ಘೋರ ದುರಂತ ಜುಲೈ ೧೬ರಂದು ಸಂಭವಿಸಿತ್ತು. ಇನ್ನು ಘಟನೆಯಲ್ಲಿ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ ಮತ್ತು ಜಗನ್ನಾಥ ನಾಯ್ಕೆ ಎಂಬುವರ ಪತ್ತೆಗಾಗಿ ಮಳೆಯ ನಡುವೆಯೂ ನಿರಂತರ ಕಾರ್ಯಾಚರಣೆ ನಡೆಸಲಾಗಿತ್ತು. ೭೨ ದಿನಗಳ ಬಳಿಕ ನದಿಯಲ್ಲಿ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಲಾರಿ ಹಾಗೂ ಚಾಲಕ ಅರ್ಜುನನ ಮೃತದೇಹ ಎರಡು ತುಂಡಾಗಿ ಪತ್ತೆಯಾಗಿತ್ತು.
ಸತ್ಸಂಗದಲ್ಲಿ ಕಾಲ್ತುಳಿತ: ಜುಲೈ ೨- ಉತ್ತರ ಪ್ರದೇಶದ ಹತ್ರಾಸ್‌ನ ರಾತಿ ಭಾನ್‌ಪುರ್ ಗ್ರಾಮದ ಕಿರಿದಾದ ಜಾಗದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಭೆ (ಸತ್ಸಂಗ)ಯಲ್ಲಿ ಸಾವಿರಾರು ಜನರು ಸೇರಿ ಕಾಲ್ತುಳಿತ ಸಂಭವಿಸಿ ೧೨೩ ಜನರು ಸಾವಿಗೀಡಾಗಿದ್ದರು.
ರೈಲು ದುರಂತಗಳು: ೨೦೨೪ರಲ್ಲಿ ದೇಶದಲ್ಲಿ ಹಲವು ರೈಲು ದುರಂತಗಳು ಸಂಭವಿಸಿದ್ದು, ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸತ್ ಕಲಾಪದಲ್ಲಿ ನೀಡಿರುವ ಮಾಹಿತಿಯಂತೆ ನ.೨೬ರವರೆಗೆ ದೇಶದಲ್ಲಿ ಈ ವರ್ಷ ೨೯ ರೈಲು ಅಪಘಾತ ಪ್ರಕರಣಗಳು ಸಂಭವಿಸಿದ್ದು, ೧೭ ಮಂದಿಯ ಜೀವಹಾನಿಯಾಗಿದ್ದು, ೭೧ ಮಂದಿ ಗಾಯಗೊಂಡಿದ್ದಾರೆ.
ಡಾರ್ಜಿಲಿಂಗ್ ರೈಲು ಅಪಘಾತದಲ್ಲಿ ೧೫ ಮಂದಿ ಸಾವು: ಜೂನ್ ೧೭- ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಯಲ್ಲಿ ಸ್ವಯಂ ಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಕೈ ಕೊಟ್ಟ ಪರಿಣಾಮ ಕಾಂಚನಜುಂಗಾ ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ರೈಲು ಅಪಘಾತ ನಡೆಯಿತು. ಈ ಅಪಘಾತದಲ್ಲಿ ೧೫ ಮಂದಿ ಪ್ರಯಾಣಿಕರು ಮೃತಪಟ್ಟು, ೬೦ ಪ್ರಯಾಣಿಕರು ಗಾಯಗೊಂಡರು.
ವಯನಾಡಿನಲ್ಲಿ ಭೂ ಕುಸಿತ: ಜುಲೈ.೩೦- ಕೇರಳದ ವಯನಾಡು ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿ, ಭೂ ಕುಸಿತದ ಪರಿಣಾಮ ಹಳ್ಳಿ ಹಳ್ಳಿಗಳನ್ನೇ ಆಪೋಶನ ತೆಗೆದುಕೊಂಡಿತ್ತು. ಇದರ ಪರಿಣಾಮ ೨೩೧ ಮಂದಿ ಸಾವನ್ನಪ್ಪಿ, ೩೯೭ ಮಂದಿ ಗಾಯಗೊಂಡಿದ್ದರು. ಕೆಸರ ರಾಶಿಯಲ್ಲಿ ನೂರಾರು ಮನೆಗಳು ಸಿಲುಕಿ ವಾಸ ಯೋಗ್ಯವಲ್ಲದ ಸ್ಥಿತಿಗೆ ತಲುಪಿದ್ದರೆ, ಇನ್ನೂ ನೂರಾರು ಮನೆಗಳು ಧರಾಶಾಯಿಯಾಗಿವೆ. ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಯುವತಿಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ: ಸೆ.೨೧- ಬೆಂಗಳೂರಿನ ವಯ್ಯಾಲಿ ಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.೨೧ರಂದು ಒಂಟಿ ಮಹಿಳೆ ಮಹಾಲಕ್ಷ್ಮಿ ಬರ್ಬರ ಹತ್ಯೆ ಪ್ರಕರಣ ರಾಜಧಾನಿಯನ್ನು ಬೆಚ್ಚಿ ಬೀಳಿಸಿತ್ತು. ಮದುವೆಯಾಗಲು ನಿರಾಕರಿಸಿದ ಕಾರಣ ಆರೋಪಿ ಮುಕ್ತಿ ರಂಜನ್ ರಾಯ್ – ಮಹಾಲಕ್ಷ್ಮಿ ನಡುವೆ ವೈಮನಸ್ಯ ತಲ್ಲಣಗೊಳಿಸಿತ್ತು. ಇದರಿಂದ ಆಕ್ರೋಶಗೊಂಡ ರಾಯ್ ಆಕೆಯ ಮನೆಯಲ್ಲೇ ಹತ್ಯೆ ಮಾಡಿ, ಆಕ್ಸಲ್ ಬ್ಲೇಡ್‌ನಿಂದ ಆಕೆಯ ದೇಹವನ್ನು ೫೯ ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ತುಂಬಿ, ರಕ್ತದ ಕಲೆಯನ್ನು ಆಸಿಡ್ ನಿಂದ ಸ್ವಚ್ಛಗೊಳಿಸಿ ಸಾಕ್ಷ್ಯ ನಾಶಮಾಡಿದ್ದ. ಆರೋಪಿ ತನ್ನ ಸ್ವಗ್ರಾಮ ಒಡಿಶಾಗೆ ಹೋಗಿ ಬಂಧನ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ.
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತ: ಆ.೬-ಗೋವಾಕ್ಕೆ ಸಂಪರ್ಕ ಕಲ್ಪಿಸಲು ಕಾರವಾರ ನಗರದ ಕೋಡಿಭಾಗ್ ಬಳಿ ೧೯೮೩ರಲ್ಲಿ ಕಾಳಿ ನದಿಗೆ ಕಟ್ಟಲಾಗಿದ್ದ ಸೇತುವೆ ಆ.೬ರಂದು ಮಧ್ಯರಾತ್ರಿ ಕುಸಿದು ಕಂಬಗಳ ನಡುವೆ ಸೇತುವೆ ಮೂರ‍್ನಾಲ್ಕು ಕಡೆ ತುಂಡಾಗಿ ನದಿಗೆ ಬಿದ್ದಿತ್ತು. ಆ ಸಂದರ್ಭದಲ್ಲಿ ಕಾರವಾರದ ಮೂಲಕ ಗೋವಾಕ್ಕೆ ಸಾಗುತ್ತಿದ್ದ ಲಾರಿಯೊಂದು ನದಿಗೆ ಬಿದ್ದಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಲಾರಿ ಚಾಲಕನನ್ನು ರಕ್ಷಿಸಿದ್ದರು.
ತಮಿಳುನಾಡಿನಲಿ ಸರಕು ಸಾಗಣೆ ರೈಲು ಡಿಕ್ಕಿ: ಅ.೧೧- ತಮಿಳುನಾಡಿನ ಕವರೈಪೆಟ್ಟೆ ರೈಲು ನಿಲ್ದಾಣದಲ್ಲಿ ಮೈಸೂರು-ಧರ್ಬಾಂಗ್ ಭಾಗ್ಮತಿ ಎಕ್ಸ್‌ಪ್ರೆಸ್ ರೈಲು, ನಿಂತಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ೧೯ ಮಂದಿ ಗಾಯಾಳುಗಳಾಗಿದ್ದು, ಹಳಿ ದುರಸ್ತಿಯವರೆಗೆ ಬೆಂಗಳೂರು ನಗರದಿಂದ ಈ ಮಾರ್ಗದ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ನಿಲ್ದಾಣದಲ್ಲಿಯೇ ದಿನ ಕಳೆಯಬೇಕಾಯಿತು.
ಸಿಲಿಂಡರ್ ಸ್ಫೋಟದಿಂದ ನಾಲ್ವರು ಸಾವು: ಡಿ.೨೨- ಹಳೇ ಹುಬ್ಬಳ್ಳಿಯ ಸಾಯಿ ನಗರದ ಈಶ್ವರ ದೇವಸ್ಥಾನದ ಬಳಿ ಅಯ್ಯಪ್ಪ ಮಾಲಾಧಾರಿಗಳು ಭಜನೆ ನಂತರ ಪ್ರಸಾದ ಸಿದ್ಧಪಡಿಸುವಾಗ ಸಿಲಿಂಡರ್ ಸ್ಪೋಟಗೊಂಡು ೯ ಜನ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. ಈ ಪೈಕಿ ಚಿಕಿತ್ಸೆ ಫಲಕಾರಿಯಾಗದೆ ಈವರೆಗೆ ನಾಲ್ವರು ಮೃತಪಟ್ಟಿದ್ದಾರೆ.
ಟೇಕಾಫ್- ಆದ ವಿಮಾನದಲ್ಲಿ ತಾಂತ್ರಿಕ ದೋಷ: ಅ.೧೧- ತಮಿಳುನಾಡಿನ ತಿರುಚಿನಾಪಳ್ಳಿ ವಿಮಾನ ನಿಲ್ದಾಣದಿಂದ ಅ.೧೧ರಂದು ಶಾರ್ಜಾಕ್ಕೆ ೧೪೧ ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆ- ಆದ ಕೆಲವೇ ಸಮಯದಲ್ಲಿ ಹೈಡ್ರಾಲಿಕ್ ವೈ-ಲ್ಯದ ಸಮಸ್ಯೆಯಿಂದಾಗಿ ತುರ್ತು ಪರಿಸ್ಥಿತಿಗೆ ಒಳಗಾಗಿತ್ತು. ಅದೃಷ್ಟವಶಾತ್ -ಲಟ್ ಯಾವುದೇ ಅಪಾಯವಿಲ್ಲದೇ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಸಂಜೆ ೫.೪೦ಕ್ಕೆ ಟೇಕಾ- ಆದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮರಳಿ ಲ್ಯಾಂಡ್ ಮಾಡುವಂತೆ -ಲಟ್‌ಗೆ ಸೂಚನೆ ನೀಡಲಾಗಿತ್ತು. ಇಂಧನ ಉರಿಯುವ ಸಲುವಾಗಿ ತಿರುಚಿನಾಪಳ್ಳಿಯಿಂದ ಸ್ವಲ್ಪ ದೂರದಲ್ಲಿನ ವಾಯು ಮಾರ್ಗದಲ್ಲಿ ಮೂರ‍್ನಾಲ್ಕು ಗಂಟೆಗಳ ಕಾಲ ಸುತ್ತಾಡಿಸಲಾಗಿತ್ತು