Mysore
25
clear sky

Social Media

ಬುಧವಾರ, 28 ಜನವರಿ 2026
Light
Dark

ಕಣ್ಣಾಯಿಸಿದಷ್ಟೂ ವಿಸ್ತಾರ ತೊಣ್ಣೂರು ಕೆರೆ

• ಎಸ್.ನಾಗಸುಂದ‌

ಪಾಂಡವಪುರ ತಾಲ್ಲೂಕಿನ ತೊಂಡನೂರಿನಲ್ಲಿರುವ ಸುಂದರ ಪ್ರವಾಸಿ ತಾಣ ತೊಣ್ಣೂರು ಕೆರೆ. ಈ ಕೆರೆಯು ಯದುಗಿರಿ ಬೆಟ್ಟದ ಬುಡದಲ್ಲಿದೆ. ತೊಣ್ಣೂರು ಕೆರೆಯು ಸುಮಾರು 1000 ವರ್ಷಗಳ ಹಿಂದೆ ಶ್ರೀ ರಾಮಾನುಜಾಚಾರ್ಯ ಅವರ ಆಶಯದಂತೆ 2150 ಎಕರೆ ವಿಶಾಲ ಜಾಗದಲ್ಲಿ ನಿರ್ಮಾಣವಾಗಿದೆ.

ಇದು ಒಂದು ವಾರಾಂತ್ಯದ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗವಾದ್ದರಿಂದ ಸಂಜೆಯ ಸೂರ್ಯಾಸ್ಥದ ರಮಣೀಯ ದೃಶ್ಯ ನೋಡಲು, ಮೇಲುಕೋಟೆ, ತೆಂಗಿನಕಲ್ಲು ಬೆಟ್ಟ, ಕುಂತಿಬೆಟ್ಟ ಸುತ್ತಾಡಲು ಸಾಕಷ್ಟು ಜನ ಬರುತ್ತಾರೆ.


ಕೆರೆಯ ಸುತ್ತ ಮುತ್ತ ವೆಂಕಟರಮಣ, ನಂಬಿ ನಾರಾಯಣ, ಪಾರ್ಥಸಾರಥಿ, ವೇಣುಗೋಪಾಲ, ಯೋಗನರಸಿಂಹ ಮತ್ತು ರಾಮಾನುಜಾಚಾರ್ಯರ ದೇವಾಲಯಗಳಿವೆ. ಈ ಕೆರೆಯು ಪಾಂಡವಪುರದಿಂದ 8 ಕಿ.ಮೀ. ದೂರ, ಬೆಂಗಳೂರಿನಿಂದ 130 ಕಿ.
ಮೀ., ಮೇಲುಕೋಟೆಯಿಂದ 25 ಕಿ.ಮೀ. ಹಾಗೂ ಮೈಸೂರಿನಿಂದ 30 ಕಿ.ಮೀ. ದೂರವಿದ್ದು, ಸಾರಿಗೆ ಬಸ್ ಸೌಲಭ್ಯವಿದೆ.

ನೀಲಿ ಜಲದ ಸೌಂದರ್ಯ, ತೊಣ್ಣೂರು ಸರೋವರದ ಸುಂದರವಾದ ಪರಿಸರ ಖುಷಿ ಕೊಡುತ್ತದೆ. ಜೊತೆಗೆ ಇಲ್ಲಿರುವ ಕ್ಷಣಾಂಭಿಕಾ ದೇವಾಲಯದ ಮುಂದೆ ಕಣ್ಣು ಹಾಯಿಸಿದಷ್ಟು ದೂರದ ವರೆಗೆ ಕಾಣುವ ಗದ್ದೆಗಳ ಹಸಿರ ತಂಪು ಇಲ್ಲಿನ ವಿಶೇಷ. ಸರೋವರದ ಪ್ರದೇಶವು ಟಿಪ್ಪು ಗುಹೆಗಳನ್ನು ಒಳಗೊಂಡಿದೆ, ಪದ್ಮಗಿರಿ ಬೆಟ್ಟವು ಆಮೆ ಮಾದರಿಯ ಬಂಡೆಯನ್ನು ಹೊಂದಿದೆ, ರಾಮಾನುಜ ಗಂಗೆ, ಒಂದು ಸಣ್ಣ ಜಲಪಾತ ನೋಡುಗರಿಗೆ ಆಹ್ಲಾದ ನೀಡುತ್ತದೆ.

Tags:
error: Content is protected !!