Mysore
29
scattered clouds

Social Media

ಶನಿವಾರ, 24 ಜನವರಿ 2026
Light
Dark

ಇಂದು ಹಾಸನದಲ್ಲಿ ಜಾ.ದಳ ಬೆಳ್ಳಿ ಮಹೋತ್ಸವ

ಭೇರ್ಯ ಮಹೇಶ್‌ 

ಸಮಾವೇಶಕ್ಕೆ ಬೃಹತ್ ವೇದಿಕೆ ನಿರ್ಮಾಣ; ೧ ಲಕ್ಷ ಆಸನಗಳ ವ್ಯವಸ್ಥೆ

ಹಾಸನ: ಜಾ.ದಳ ಪ್ರಾದೇಶಿಕ ಪಕ್ಷದ ಬೆಳ್ಳಿ ಮಹೋತ್ಸವದ ಅಂಗವಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ಉದ್ದೇಶದಿಂದ ಶನಿವಾರ ಹಮ್ಮಿಕೊಂಡಿರುವ ಜಾ.ದಳ ಬೃಹತ್ ಸಮಾವೇಶಕ ಸಿದ್ಧತೆ ಬಹುತೇಕ ಪೂರ್ಣ ಗೊಂಡಿದೆ.

ನಗರದ ಬೂವನಹಳ್ಳಿ ಹುಡಾ ಹೊಸ ಬಡಾವಣೆಯಲ್ಲಿ ಸಮಾವೇಶಕ್ಕೆ ಬೃಹತ್ ವೇದಿಕೆ ಸಜ್ಜುಗೊಳಿಸಲಾಗಿದೆ. ನಗರ ಹಾಗೂ ಜಿಲ್ಲೆಯ ಎಲ್ಲಾ ಕಡೆಗಳಿಂದ ಬರುವ ಜನರಿಗೆ ಈಗಾಗಲೇ ೧ ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚುವರಿಯಾಗಿ ೧೦ ಸಾವಿರ ಕುರ್ಚಿಗಳನ್ನು ಹೊಂದಿಸಿಕೊಳ್ಳಲಾಗಿದೆ.

ಆಯೋಜಕರ ಪ್ರಕಾರ, ಸುಮಾರು ೧ರಿಂದ ಒಂದೂವರೆ ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಈ ಮೂಲಕ ಶಕ್ತಿ ಪ್ರದರ್ಶನ ಮಾಡಲು ದಳ ಪತಿಗಳು ಅಣಿಯಾಗಿದ್ದಾರೆ. ಸ್ಥಳೀಯ ನಾಯಕರ ಜೊತೆಗೆ ರಾಜ್ಯದ ವಿವಿಧೆಡೆಗಳಿಂದಲೂ ಜಾ.ದಳ ನಾಯಕರು ಆಗಮಿಸುವ ನಿರೀಕ್ಷೆ ಇದೆ.

ಊಟದ ವ್ಯವಸ್ಥೆ: ಸಮಾವೇಶದಲ್ಲಿ ಭಾಗಿ ಯಾಗುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ನಾಲ್ಕು ಬೃಹತ್ ಊಟದ ಕೌಂಟರ್‌ಗಳನ್ನು ತೆರೆಯಲಾಗಿದೆ. ಸುಮಾರು ೨ ಸಾವಿರದಷ್ಟು ಅಡುಗೆ ಭಟ್ಟರು ಹಾಗೂ ಸಹಾಯಕರನ್ನು ನಿಯೋಜನೆ ಮಾಡಲಾಗಿದ್ದು, ಒಂದೊಂದು ಕೌಂಟರ್‌ನಲ್ಲಿಯೂ ತಲಾ ೨೦ ಸಾವಿರ ಮಂದಿ ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ.

೧,೩೦೦ ವಾಹನ: ಸಮಾವೇಶಕ್ಕೆ ಜಿಲ್ಲೆಯ ವಿವಿಧೆಡೆಗಳಿಂದ ಜನರನ್ನು ಕರೆತರಲು ಸುಮಾರು ೧,೩೦೦ಕ್ಕೂ ಹೆಚ್ಚು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಇವುಗಳಲ್ಲಿ ೯೫೦ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ೩೦೦ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಫ್ಲೆಕ್ಸ್-ಬಾವುಟ: ಕಳೆದ ವಿಧಾನಸಭೆ ಚುನಾವಣೆ ನಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ಜಾ.ದಳ ಬೃಹತ್ ಸಮಾವೇಶ ಹಿನ್ನೆಲೆಯಲ್ಲಿ ನಗರದ ತುಂಬೆಲ್ಲ ಹಾಗೂ ಸುತ್ತಮುತ್ತ ಬೃಹತ್ ಅಗಲ, ಎತ್ತರದ ಫ್ಲೆಕ್ಸ್, ಕಟೌಟ್‌ಗಳು ರಾರಾಜಿಸುತ್ತಿವೆ. ಹಾಗೆಯೇ ಜಾ.ದಳ ಬಾವುಟಗಳು ಗಮನ ಸೆಳೆ ಯುತ್ತಿವೆ.

ಸಮಾವೇಶದ ಕೇಂದ್ರ ಬಿಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ಶನಿವಾರ ಬೆಳಿಗ್ಗೆ ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹುಟ್ಟೂರು ಹರದನಹಳ್ಳಿಗೆ ಆಗಮಿಸಿ, ಕುಲದೈವ ದೇವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ೧೧ ಗಂಟೆ ಸುಮಾರಿಗೆ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಸ್ಥಳೀಯ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಜಾ.ದಳ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಹಾಗೂ ಸ್ಥಳೀಯ ಮುಖಂಡರು ಅಲ್ಲೇ ಮೊಕ್ಕಾಂ ಹೂಡಿ ಪೂರ್ವ ಸಿದ್ಧತೆ ಮೇಲ್ವಿಚಾರಣೆ ಮಾಡಿದರು.

೧,೪೦೦ ಪೊಲೀಸರ ನಿಯೋಜನೆ:  ಸಮಾವೇಶ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿಕೊನೆಗೊಳ್ಳಲು ಮುನ್ನೆಚ್ಚರಿಕೆಯಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು ೧,೪೦೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಶುಕ್ರವಾರ ಸಮಾವೇಶ ಜಾಗದಲ್ಲೇ ಅಽಕಾರಿಗಳು-ಸಿಬ್ಬಂದಿ ಸಭೆ ನಡೆಸಿದ ಹಾಸನ ವಿಭಾಗದ ಡಿವೈಎಸ್‌ಪಿ ಗಂಗಾಧರಪ್ಪ ಅವರು, ಎಲ್ಲರಿಗೂ ಜವಾಬ್ದಾರಿ ವಹಿಸಿ, ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Tags:
error: Content is protected !!