Mysore
23
clear sky

Social Media

ಸೋಮವಾರ, 02 ಮಾರ್ಚ್ 2026
Light
Dark

ಭಾರತದ ಎದುರಿಗಿರುವ ಮೂರು ಸಂಕಟಗಳು

ಮಾಧ್ಯಮ ತಜ್ಞ ಶೇಷಾದ್ರಿ ಗಂಜೂರು ವಿಶ್ಲೇಷಣೆ

ಇತ್ತೀಚೆಗೆ ನ್ಯೂಸ್ ಚಾನಲ್‌ಗಳನ್ನು ನೋಡುತ್ತಿದ್ದರೆ ಮಿಡ್ಲ್ ಈಸ್ಟ್ ಅಂದರೆ ಮಧ್ಯ ಪ್ರಾಚ್ಯದ ಗಲಾಟೆಗಳೇ ಕಾಣ್ತಿವೆ. ಇಸ್ರೇಲ್ -ಇರಾನ್-ಅಮೆರಿಕಗಳ ನಡುವೆ ನಡೆಯುತ್ತಿರುವ ಈ ಡೈರೆಕ್ಟ್ ವಾರ್ ಪರಿಸ್ಥಿತಿಯನ್ನು ನೋಡಿದರೆ ನಮಗೇನಪ್ಪ ಸಂಬಂಧ ಅನ್ನಿಸಬಹುದು. ಆದರೆ, ನೆನಪಿಡಿ ಅಲ್ಲಿ ಒಂದು ಸಣ್ಣ ಕಿಡಿ ಹೊತ್ತಿದ್ರೂ ಅದರ ಬಿಸಿ ನೇರವಾಗಿ ನಮ್ಮ ಜೇಬಿಗೆ ತಟ್ಟುತ್ತದೆ.

ಮೊದಲನೆಯದಾಗಿ ನಮ್ಮ ದೇಶಕ್ಕೆ ಬೇಕಾಗಿರುವ ಶೇ.೯೦ ಕಚ್ಚಾತೈಲ ಹೊರಗಿನಿಂದಲೇ ಬರಬೇಕು. ಅದರಲ್ಲೂ ಹಡಗುಗಳ ಮೂಲಕ ಬರು ವುದು ಸ್ಟ್ರೇಟ್ ಆಫ್ ಹಾರ್ಮಸ್ ಅನ್ನೋ ಚಿಕ್ಕ ಜಲ ಮಾರ್ಗದ ಮೂಲಕ. ಈಗ ಆ ಭಾಗದಲ್ಲಿ ಯುದ್ಧದ ಕಾರ್ಮೋಡ ಇರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಜಾಸ್ತಿ ಆಗ್ತಿದೆ. ಪೆಟ್ರೋಲ್ ಬೆಲೆ ಏರಿದರೆ ದಿನಸಿಯಿಂದ ಹಿಡಿದು ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆಯೂ ಏರುತ್ತದೆ. ಅಂದರೆ ಅಲ್ಲಿ ಸಿಡಿಯುವ ಬಾಂಬುಗಳು ಇಲ್ಲಿನ ಹಣದುಬ್ಬರಕ್ಕೆ ಕಾರಣ ಆಗುತ್ತವೆ.

ಎರಡನೇ ವಿಷಯ ಲಕ್ಷಾಂತರ ಭಾರತೀಯರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸುರಕ್ಷತೆ ನಮಗೆ ಬಹಳ ಮುಖ್ಯ ಅಷ್ಟೇ ಅಲ್ಲ. ನಾವು ಬೇರೆ ದೇಶಗಳಿಗೆ ರಫ್ತು ಮಾಡುವ ಸಂಬಾರ ಪದಾರ್ಥ ಗಳು, ರಾಸಾಯನಿಕಗಳು ಅಥವಾ ಬಟ್ಟೆಗಳು ಸರಬ ರಾಜಾಗುವ ಹಾದಿ ಇವತ್ತು ಸಂಕಷ್ಟದಲ್ಲಿದೆ. ಹಡಗುಗಳು ದಾರಿ ಬದಲಿಸಿ ಬರಬೇಕಾದ್ರೆ ಸರಕು ಸಾಗಣೆ ವೆಚ್ಚ ಹೆಚ್ಚಾಗುತ್ತದೆ. ಅದರಿಂದ ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ. ಹಾಗಾಗಿ ಇದು ಒಂದು ಪ್ರದೇಶದ ಯುದ್ಧ ಅಲ್ಲ. ಇಡೀ ವಿಶ್ವದ ಆರ್ಥಿಕತೆಯ ಪ್ರಶ್ನೆ ಯಾಗಿದೆ.

ಫೆ.೨೮ರಂದು ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ಒಂದು ಬೃಹತ್ ಮಿಲಿಟರಿ ದಾಳಿ ನಡೆಸಿವೆ. ಟೆಹರಾನ್, ಇಸ್ಪಹಾನ್, ತಬ್ರೀಜ್ ಎಲ್ಲೆಲ್ಲೂ ಸೋಟಗಳು. ಇರಾನಿನ ಸುಪ್ರೀಂ ಲೀಡರ್ ಖಮೇನಿ ಈ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಮಾಧ್ಯಮಗಳು ಹೇಳುತ್ತಿವೆ. ಇರಾನ್ ಕೂಡ ಸುಮ್ಮನಿಲ್ಲ. ಗಲ್ ದೇಶಗಳಲ್ಲಿರೋ ಅಮೆರಿಕದ ಸೇನಾ ನೆಲೆಗಳ ಮೇಲೆ ಮಿಸೈಲ್ ದಾಳಿ ನಡೆಸಿದೆ.

ಈಗ ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಈ ದಾಳಿಗಳ ಹಿಂದೆ ಬರೀ ಸೈನ್ಯ ಅಷ್ಟೇ ಅಲ್ಲ, ದೊಡ್ಡಮಟ್ಟದ ಪವರ್ ಗೇಮ್ ಕೂಡ ಇದೆ. ಇರಾನಿನ ಸರ್ವೋಚ್ಚ ನಾಯಕ ಅಯತುಲ್ಲಾ ಖಮೇನಿ ಅವರ ಸಾವಿನ ನಂತರ ಇಡೀ ಪ್ರಪಂಚದ ಪಾಲಿಟಿಕ್ಸ್ ಒಮ್ಮೆಲೇ ಬದಲಾಗುತ್ತಿದೆಯೇನೋ ಅನ್ನಿಸುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ಈ ದಾಳಿಯನ್ನು ಏಕೆ ಮಾಡಿದವು? ಇದರ ಅಸಲಿ ಉದ್ದೇಶ ಏನು ಅನ್ನೋದನ್ನ ನೋಡೋಣ ಬನ್ನಿ. ಅಮೆರಿಕ ದಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಇರಾನ್ ಬಗ್ಗೆ ಅವರ ಪಾಲಿಸಿ ತುಂಬಾ ಸ್ಟ್ರಿಕ್ಟ್ ಆಗಿದೆ.

ಇರಾನ್‌ನ ಪರಮಾಣು ಶಕ್ತಿ ಬೆಳೆಯಬಾರದು ಅನ್ನುವುದು ಒಂದು ಕಾರಣವಾದರೆ, ಅಲ್ಲಿನ ಸರ್ಕಾರವನ್ನೇ ಬದಲಿಸಬೇಕು ಅನ್ನುವುದು ಅಮೆರಿಕ ಮತ್ತು ಇಸ್ರೇಲ್‌ನ ಮತ್ತೊಂದು ಪ್ಲಾನ್ ಅಂತ ಹಲವಾರು ವಿಶ್ಲೇಷಕರು ಹೇಳುತ್ತಿದ್ದಾರೆ. ಇಸ್ರೇಲ್‌ನ ದೃಷ್ಟಿಯಲ್ಲಿ ಇರಾನ್ ತನ್ನ ಅಸ್ತಿತ್ವಕ್ಕೇ ಕಂಟಕವಾಗಿದ್ದು, ಅದಕ್ಕಾಗಿಯೇ ಇರಾನ್‌ನ ಮಿಲಿಟರಿ ಶಕ್ತಿಯನ್ನು ಕುಗ್ಗಿಸಲು ಇದು ಸಕಾಲ ಎಂದು ಅಮೆರಿಕ- ಇಸ್ರೇಲ್ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ ಎನ್ನಲಾಗಿದೆ. ಇರಾನ್ ತನ್ನ ಆಕ್ಸಿಸ್ ಆಫ್ ರೆಸಿಸ್ಟೆನ್ಸ್ಅಂ ದ್ರೆಹಿಜ್ಬುಲ್ಲಾ ಮತ್ತು ಯಹೂದಿಗಳ ಮೂಲಕ ಇಷ್ಟು ದಿನ ಇಸ್ರೇಲ್ ಮೇಲೆ ಒತ್ತಡ ಹಾಕುತ್ತಿತ್ತು. ಈಗ ಇರಾನ್‌ನ ಲೀಡರ್‌ಗಳನ್ನೇ ಟಾರ್ಗೆಟ್ ಮಾಡಿ ರೋದ್ರಿಂದ ಆ ಇಡೀ ನೆಟ್‌ವರ್ಕ್ ಅನ್ನೇ ವೀಕ್ ಮಾಡಬಹುದು ಎನ್ನುವುದು ಇಸ್ರೇಲಿನ ಲೆಕ್ಕಾಚಾರ. ಇದರಿಂದ ಸೌದಿ ಅರೇಬಿಯಾ, ಯುಎಇ ಮೊದಲಾದ ದೇಶಗಳು ಕೂಡ ಈಗ ಅಳೆದು ತೂಗಿ ಹೆಜ್ಜೆಯಿಡುತ್ತಿವೆ.

Tags:
error: Content is protected !!