೨೦೨೫ ನೇ ಸಾಲಿನಲ್ಲಿ ಹಲವಾರು ಸಾಧಕರು ಹೊರಹೊಮ್ಮಿದ್ದು, ಸಾಹಿತ್ಯ, ಕಲೆ, ವಿಜ್ಞಾನ, ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ, ಪರಿಶ್ರಮ, ಸೇವೆ ಮತ್ತು ಸಾಮರ್ಥ್ಯ ತೋರಿ ಸಾಧನೆಯ ಶಿಖರವನ್ನೇರಿದ್ದಾರೆ. ಆ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ. ಅಂತಹ ಕೆಲ ಸಾಧಕರ ಸಂಕ್ಷಿಪ್ತ ವಿವರ ಇಲ್ಲಿದೆ.
ಗೀತಾಂಜಲಿ ಶ್ರೀಗೆ ಪೆನ್ ಪ್ರಶಸ್ತಿ: ಹಿಂದಿ ಭಾಷಾ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಹಾಗೂ ಬುಕರ್ ಪ್ರಶಸ್ತಿ ಪುರಸ್ಕೃತರೂ ಆಗಿರುವ ಲೇಖಕಿ ಗೀತಾಂಜಲಿ ಶ್ರೀ ಅವರ ಹಿಂದಿ ಭಾಷೆಯ ಸಣ್ಣ ಕಥೆಗಳ ಸಂಗ್ರಹವಾದ ‘ಒನ್ಸ್ ಎಲಿ ಫೆಂಟ್ಸ್ ಲಿವ್ಡ್ ಹಿರಿಯರ್’ ಕೃತಿಗೆ ಪ್ರತಿಷ್ಠಿತ ‘ಪೆನ್’ ಅನುವಾದ ಪ್ರಶಸ್ತಿ ಒಲಿದಿದೆ.
ಮೋಹನ್ ಲಾಲ್‌ಗೆ ಫಾಲ್ಕೆ ಪ್ರಶಸ್ತಿ: ಮಲಯಾಳಂ ಚಿತ್ರರಂಗದ ಹಿರಿಯ ನಟ ಮೋಹನ್ ಲಾಲ್ ದಶಕಗಳಿಂದ ಚಲ ನಚಿತ್ರ ನಟನೆಯಿಂದ ಅಪಾರ ಜನಮನ್ನಣೆ ಪಡೆದಿದ್ದಾರೆ. ೪೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮೋಹನ್‌ಲಾಲ್ ಚಿತ್ರರಂಗಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಚಿತ್ರರಂಗಕ್ಕೆ ಅವರು ಸಲ್ಲಿಸಿರುವ ಮಹತ್ವದ ಸೇವೆಗಾಗಿ ೨೦೨೫ರ ‘ದಾದಾಸಾಹೇಬ್ -ಲ್ಕೆ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಬಹುಭಾಷಾ ನಟ ಪ್ರಕಾಶ್ ರಾಜ್‌ಗೆ ರಾಜ್ಯೋತ್ಸವ ಗರಿ:
ಬಹುಭಾಷಾ ನಟ ಪ್ರಕಾಶ್ ರೈ ಅವರಿಗೆ ಕಲೆ, ಸಾಹಿತ್ಯ, ಹೋರಾಟ ಕೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದು, ಅವರ ಚಿತ್ರರಂಗದ ಸೇವೆಯ ಸಾಧನೆಯನ್ನು ಪರಿಗಣಿಸಿ ೭೦ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶೀಲಾ ಗೌಡ ಅವರಿಗೆ ಸ್ಯಾಮ್ ಗಿಲ್ಲಿಯಾಮ್ ಪ್ರಶಸ್ತಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಾ ಸಾಧಕರಿಗೆ ನೀಡುವ ಅತ್ಯುನ್ನತ ಪ್ರಶಸ್ತಿ ಯಾದ ‘ಸ್ಯಾಮ್ ಗಿಲ್ಲಿಯಾಮ್ ಪ್ರಶಸ್ತಿ‘ಗೆ ಕನ್ನಡದ ಕಲಾವಿದರಾದ ಶೀಲಾ ಗೌಡ ಅವರು ಭಾಜನರಾಗಿದ್ದಾರೆ. ದಿಯಾ ಫೌಂಡೇಷನ್ ಮತ್ತು ಸ್ಯಾಮ್ ಗಿಲ್ಲಿಯಾಮ್ ಫೌಂಡೇಷನ್ ಸೇರಿ ಏಪ್ರಿಲ್‌ನಲ್ಲಿ ಈ ಪ್ರಶಸ್ತಿಯನ್ನು ನೀಡಿದ್ದು, ಪ್ರಶಸ್ತಿಯ ಮೊತ್ತ ೭೫ ಸಾವಿರ ಡಾಲರ್(೬೩.೪೯ ಲಕ್ಷ ರೂ.) ಆಗಿದೆ.
ರಾಮ್ಸರ್ ಪ್ರಶಸ್ತಿಗೆ ಡಾ.ಜಯಶ್ರೀ ವೆಂಕಟೇಶನ್ ಭಾಜನ: ಭಾರತೀಯ ಪರಿಸರ ಕಾರ್ಯಕರ್ತರಾದ ಡಾ.ಜಯಶ್ರೀ ವೆಂಕಟೇಶನ್ ಅವರು ‘ವೆಟ್‌ಲ್ಯಾಂಡ್ ವೈಸ್ ಯೂಸ್’ ವಿಭಾಗದಲ್ಲಿ ೨೦೨೫ರ ವಾರ್ಷಿಕ (ಆರ್ದ್ರ ಭೂಮಿಗಳ ಸಂರಕ್ಷಣೆಗಾಗಿ) ರಾಮ್ಸರ್ ಪ್ರಶಸ್ತಿಗೆ ಭಾಜನರಾಗಿದ್ದು, ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ವರ್ಷಾ ದೇಶಪಾಂಡೆಗೆ ವಿಶ್ವಸಂಸ್ಥೆ ಜನಸಂಖ್ಯಾ ಪ್ರಶಸ್ತಿ: ೨೦೨೫ರ ವಿಶ್ವಸಂಸ್ಥೆಯ ಜನಸಂಖ್ಯಾ ಪ್ರಶಸ್ತಿಯನ್ನು ಭಾರತದ ಮಹಿಳಾ ಹಕ್ಕುಗಳ ಕಾರ್ಯಕರ್ತರು ಹಾಗೂ ವಕೀಲರೂ ಆಗಿ ರುವ ವರ್ಷಾ ದೇಶಪಾಂಡೆ ಭಾಜನರಾದರು.ಲಿಂಗ ಸಮಾನತೆ, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ಲಿಂಗ ಆಧಾರಿತ ಗರ್ಭಪಾತಗಳನ್ನು ತಡೆಗಟ್ಟುವಲ್ಲಿ ಅವರು ನಡೆಸಿದ ಹೋರಾಟಕ್ಕಾಗಿ ಕಳೆದ ಜು.೧೧ ರಂದು ವಿಶ್ವ ಜನಸಂಖ್ಯಾ ದಿನದಂದು ನ್ಯೂಯಾರ್ಕ್‌ನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಡಾ. ಲಕ್ಷ್ಮೀನಾರಾಯಣ ಸುಬ್ರಮಣಿಯಂಗೆ ಪದ್ಮವಿಭೂಷಣ ಗೌರವ: ೭೬ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿಯನ್ನು ಕಲಾ ಕ್ಷೇತ್ರದ ಸಾಧನೆಗಾಗಿ ಕನ್ನಡಿಗ ಹಾಗೂ ವಯೋಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಮಣಿಯಂ ಅವರಿಗೆ ಈ ಪ್ರಶಸ್ತಿ ನೀಡಿ ರಾಷ್ಟ್ರಪತಿ ಮುರ್ಮು ಅವರು ಗೌರವಿಸಿದ್ದಾರೆ.
ಗೌರವ ಡಾಕ್ಟರೇಟ್ ಪಡೆದ ಮೈಸೂರಿನ ೭ ವರ್ಷದ ಪುಟ್ಟ ಬಾಲಕ: ಮೈಸೂರಿನ ಪ್ರತಿಭೆ, ಜಿ.ಪುನೀತ್ ಮತ್ತು ಎನ್.ಪೂಜಾ ದಂಪತಿ ಪುತ್ರ, ೭ ವರ್ಷದ ಡಾ.ಪೃಥು ಪಿ.ಅದ್ವೈತ್ ಶ್ಲೋಕ ಪಠಣೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅವರ ಸಾಧನೆಗಾಗಿ ಜ.೧೮ರಂದು ದಿಲ್ಲಿಯ ಮ್ಯಾಜಿಕ್ ಅಂಡ್ ಆರ್ಟ್ ಯೂನಿವರ್ಸಿಟಿಯಿಂದ ಹಾಗೂ ಭಾರತ ಸರ್ಕಾರದಿಂದ ವಿಶ್ವ ಸಂಸ್ಕೃತಿ ಮತ್ತು ಪರಿಸರ ಸಂರಕ್ಷಣಾ ಆಯೋಗಕ್ಕೆ ಅನುಮೋದನೆಗೊಂಡ ಬಾಲ ಯುವ ಸೂರ್ತಿಯಲ್ಲಿ ಸೇರಿ ಎರಡು ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದಿದ್ದಾರೆ.
ಇಬ್ಬರು ಕನ್ನ ಡಿಗರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ: ೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರ ಸ್ಕಾರ ಚಾ.ನಗರದ ಆರ್. ದಿಲೀಪ್ ಕುಮಾರ್ ಅವರ ಪಚ್ಚೆಯ ಜಗುಲಿ’ ಕೃತಿಗೆ ಹಾಗೂ ಬಾಲ ಸಾಹಿತ್ಯ ಪುರಸ್ಕಾರವು ಕೆ. ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್ ಬುಕ್’ (ಸಣ್ಣ ಕಥೆಗಳ ಸಂಕಲನ) ಕೃತಿಗೆ ಈ ಲಭಿಸಿವೆ.
ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಅನಂತನಾಗ್, ಸೂರ್ಯ ಪ್ರಕಾಶ್: ಕನ್ನಡ ಚಲನಚಿತ್ರದಲ್ಲಿನ ದಶಕಗಳ ಸೇವೆಗಾಗಿ ಹಿರಿಯ ಚಲನಚಿತ್ರ ನಟ ಅನಂತ್‌ನಾಗ್ ಹಾಗೂ ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಡಾ. ಎ.ಸೂರ್ಯಪ್ರಕಾಶ್ ಅವರು ೨೦೨೫ರ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದರು.





