Mysore
27
broken clouds

Social Media

ಗುರುವಾರ, 08 ಜನವರಿ 2026
Light
Dark

ಈ ವರ್ಷ ಅಧಿಕ ಬಿಸಿಲು, ಮಳೆ, ಚಳಿ

ಗಿರೀಶ್ ಹುಣಸೂರು

ಕಳೆದ ಬಾರಿಗಿಂತಲೂ ಅಽಕ ಮಳೆ ಸಾಧ್ಯತೆ; ಫೆಬ್ರವರಿಯ ಶೇ.೨.೫ ಡಿಗ್ರಿ ಸೆಲ್ಸಿಯಸ್ ಅಽಕ ಉಷ್ಣಾಂಶ

ಮೈಸೂರು: ಕರ್ನಾಟಕದಲ್ಲಿ ವಾಡಿಕೆಗೂ ಮುನ್ನವೇ ಬಿಸಿಲ ಬೇಗೆ ಜನರನ್ನು ಕಂಗೆಡಿಸಿದೆ. ಫೆಬ್ರವರಿ ಮಧ್ಯಭಾಗದಿಂದಲೇ ಬೀರು ಬೇಸಿಗೆ ಅನುಭವ ಜನರಿಗೆ ಆಗುತ್ತಿದೆ. ಈಗಲೇ ಇಷ್ಟೊಂದು ಬಿಸಿಲು ಅಂದ್ರೆ ಈ ವರ್ಷ ಸರಿಯಾಗಿ ಮಳೆ ಬರುತ್ತೋ ಇಲ್ಲವೋ ಎಂಬ ಆತಂಕ ಜನರನ್ನು ಕಾಡುತ್ತಿದೆ. ಈ ಫೆಬ್ರವರಿಯ ವಾಡಿಕೆಗಿಂತ ಶೇ.೨.೫ ಡಿಗ್ರಿ ಸೆಲ್ಸಿಯಸ್ ಅಧಿಕ ಉಷ್ಣಾಂಶ ರಾಜ್ಯದಲ್ಲಿ ದಾಖಲಾಗಿದೆ. ಇದರ ನಡುವೆಯೇ ಕಳೆದ ವರ್ಷಕ್ಕಿಂತಲೂ ಈ ವರ್ಷ ಅಧಿಕ ಬಿಸಿಲು, ಮಳೆ, ಚಳಿ ಇರುತ್ತದೆ ಎಂಬ ಮಾಹಿತಿ ಇದೆ.

ಭಾರತಕ್ಕೆ ಈ ವರ್ಷ ಲಾ ನೀನಾ ಎಂಟ್ರಿಯಾಗಲಿದ್ದು, ಈ ಕಾರಣಕ್ಕೆ ಮುಂಗಾರು ಕೂಡ ಕಳೆದ ಬಾರಿಗಿಂತ ಉತ್ತಮವಾಗಿರಲಿದೆ ಎಂದು ಅಂದಾಜಿಸಲಾಗಿದೆ. ವರ್ಷದ ಎರಡನೇ ತಿಂಗಳಾರ್ಧದಿಂದಲೇ ಬಿಸಿಲಿನ ಝಳ ಜನರನ್ನು ತಟ್ಟುತ್ತಿದೆ. ಈ ವರ್ಷ ಕಳೆದ ವರ್ಷಕ್ಕಿಂತ ಬಿಸಿಲು ಹೆಚ್ಚು ಇರಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಭೂಮಿಯನ್ನು ಸಹಜವಾಗಿ ತಣ್ಣಗಿಡುವ ಲಾ ನೀನಾ ಎಫೆಕ್ಟ್ ಇದ್ದರೂ ಕೂಡ ಜನವರಿಯಲ್ಲಿ ಉಷ್ಣಾಂಶ ಅಧಿಕವಾಗಿತ್ತು. ಇದೇ ಕಾರಣಕ್ಕೆ ಇದುವರೆಗಿನ ಹಾಟೆ ಜನವರಿ ಎಂದು ಜಾಗತಿಕ ಮಟ್ಟದಲ್ಲಿ ದಾಖಲಾಗಿದೆ. ಅದೇ ಹಾದಿಯಲ್ಲಿ -ಬ್ರವರಿ ಕೂಡ ಇತ್ತು. ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬಿಸಿಲು ಭಾರೀ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ.

ಕಳೆದ ವರ್ಷವನ್ನೇ ಅತ್ಯಂತ ತಾಪಮಾನ ಹೆಚ್ಚಳವಾದ ವರ್ಷ ಎಂದು ಕರೆಯಲಾಗಿತ್ತು. ಈ ವರ್ಷ ಅದಕ್ಕಿಂತಲೂ ಹೆಚ್ಚು ತಾಪಮಾನ ಇರಲಿದೆ ಎನ್ನುವುದು ಜನರನ್ನು ಕಂಗೆಡಿಸಿದೆ.

ಕಳೆದ ಬಾರಿಗಿಂತಲೂ ಅಧಿಕ ಮಳೆ ಸಾಧ್ಯತೆ ಈ ವರ್ಷ ಸಮಾಧಾನಪಟ್ಟುಕೊಳ್ಳಬೇಕಾದ ಸಂಗತಿಯೆಂದರೆ ಬಿಸಿಲು ಹೆಚ್ಚಿದ್ದಷ್ಟೂ ಮಳೆ ಕೂಡ ಭಾರೀ ಪ್ರಮಾಣದಲ್ಲಿ ಸುರಿಯಲಿದೆ

ಎನ್ನಲಾಗಿದೆ. ಅದರಲ್ಲೂ ಬೇಸಿಗೆ ಫೀಕ್ ಮುಟ್ಟುವ ಏಪ್ರಿಲ್ – ಮೇನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಹಿಂಗಾರಿನಲ್ಲಿ ಪ್ರಸ್ತುತ ವರ್ಷ ವಾಡಿಕೆಗಿಂತ ಕಡಿಮೆ ಮಳೆ ಬೀಳುವ ಸಾಧ್ಯತೆ ಇದೆ. ಅಕ್ಟೋಬರ್, ನವೆಂಬರ್, ಡಿಸೆಂಬರ್ ನಲ್ಲಿ ಮಳೆಯ ಪ್ರಮಾಣ ಇಳಿಮುಖವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಹಿಂಗಾರು ಮಳೆ ಕಡಿಮೆಯಾಗುವ ಕಾರಣ ಹಿಂಗಾರು ಕೃಷಿ ಮಾಡುವ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾದ ಸ್ಥಿತಿ ಬರಬಹುದು ಎಂದು ಹೇಳಲಾಗಿದೆ.

ರಾಜ್ಯದ ಜಲಾಶಯಗಳಲ್ಲಿ ಉಳಿದಿದೆ ಭಾರೀ ನೀರು!

ಮೈಸೂರು: ಸದ್ಯ ಕರ್ನಾಟಕದ ಪ್ರಮುಖ ೧೪ ಜಲಾಶಯಗಳಲ್ಲಿ ಪ್ರಸ್ತುತ ಒಟ್ಟು ೫೩೫.೨೧ ಟಿಎಂಸಿ ನೀರು ಸಂಗ್ರಹವಿದೆ. ಸರಾಸರಿ ನೀರಿನ ಸಂಗ್ರಹದ ಶೇ.೬೦ರಷ್ಟು ನೀರು ಜಲಾಶಯಗಳಲ್ಲಿರುವುದು ರೈತರಿಗೆ ಖುಷಿ ಸುದ್ದಿ. ಅದರಲ್ಲೂ ಕಳೆದ ವರ್ಷ ಇದೇ ಸಮಯದಲ್ಲಿ ಕೇವಲ ೩೩೨.೫೨ ಟಿಎಂಸಿ ನೀರಿನ ಸಂಗ್ರಹ ಇತ್ತು. ಈ ವರ್ಷ ಕಳೆದ ಬಾರಿಗಿಂತಲೂ ೨೦೦ ಟಿಎಂಸಿ ನೀರು ಹೆಚ್ಚಿರುವುದು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಅದಲ್ಲದೇ ಜಲಾಶಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಉಳಿದಿರುವುದು ಮತ್ತು ಉತ್ತಮ ಮುಂಗಾರಿನ ಕಾರಣಕ್ಕೆ ಈ ಸಲ ರಾಜ್ಯದ ಜಲಾಶಯಗಳು ಕೂಡ ಬೇಗ ತುಂಬಲಿದ್ದು, ಮುಂಗಾರು ಕೃಷಿ ಚಟುವಟಿಕೆಗಳಿಗೆ ಈ ಬಾರಿ ವೇಗ ಸಿಗುವುದು ಖಂಡಿತ. ಇದರ ಜೊತೆಗೆ ಈ ವರ್ಷ ಚಳಿ ಕೂಡ ಹೆಚ್ಚಿರಲಿದೆ ಎಂಬುದನ್ನು ತಜ್ಞರು ಅಂದಾಜಿಸಿದ್ದು, ಅಕ್ಟೋಬರ್, ನವೆಂಬರ್, ಡಿಸೆಂಬರ್‌ನಲ್ಲಿ ಮೈಕೊರೆವ ಚಳಿ ಜನರನ್ನು ಕಂಗೆಡಿಸುವುದು ಖಂಡಿತ ಎನ್ನುತ್ತಾರೆ ಹವಾಮಾನ ತಜ್ಞರು

” ಸಾಮಾನ್ಯವಾಗಿ ಜನವರಿ, -ಬ್ರವರಿ ತಿಂಗಳಲ್ಲಿ ಒಂದು ಮಳೆಯಾದರೂ ಬೀಳುತ್ತಿತ್ತು. ಆದರೆ, ಈ ವರ್ಷ ಕಳೆದ ಎರಡು ತಿಂಗಳಲ್ಲಿ ಒಂದೂ ಮಳೆ ಆಗದಿರುವುದರಿಂದ ವಾತಾವರಣದಲ್ಲಿನ ತೇವಾಂಶ ಆವಿಯಾಗಿ ಹೋಗಿದೆ. ಹೀಗಾಗಿ ದಿನೇ ದಿನೆ ತಾಪಮಾನ ಹೆಚ್ಚಳವಾಗುತ್ತಿದೆ. ಮಾರ್ಚ್ ಕೊನೆಯ ವಾರದಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ.”

-ಡಾ.ಜಿ.ವಿ.ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗ

ಲಾ ನೀನಾ ಎಫೆಕ್ಟ್‌ನಿಂದ ಉತ್ತಮ ಮುಂಗಾರು!

ಮೈಸೂರು: ಲಾ ನೀನಾ ಎಫೆಕ್ಟ್‌ನ ಕಾರಣಕ್ಕೆ ಭಾರತದಲ್ಲಿ ಈ ಬಾರಿ ಮುಂಗಾರು ಮಳೆ ಕಳೆದ ಬಾರಿಗಿಂತ ಉತ್ತಮವಾಗಿ ಸುರಿಯಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ನಿರೀಕ್ಷಿಸಿದ್ದಕ್ಕಿಂತ ನಾಲ್ಕು ದಿನಗಳ ಮುಂಚೆಯೇ ಅಂದರೆ ಜೂನ್ ೪ಕ್ಕೆ ಭಾರತಕ್ಕೆ ಎಂಟ್ರಿ ಕೊಟ್ಟಿದ್ದ ಮಾನ್ಸೂನ್ ಮಾರುತ, ಈ ವರ್ಷ ಮೇ ೩೧ಕ್ಕೆ ಕೇರಳಕ್ಕೆ ಎಂಟ್ರಿಯಾಗಲಿದೆ ಎಂದು ಹೇಳಲಾಗಿದೆ. ಕರ್ನಾಟಕಕ್ಕೆ ಜೂನ್ ಮೊದಲ ವಾರದ ಹೊತ್ತಿಗೆ ಮುಂಗಾರು ಮಾರುತ ಪ್ರವೇಶಿಸಲಿದ್ದು, ಜೂನ್, ಜುಲೈ, ಆಗ, ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯನ್ನು ತಜ್ಞರು ಹೊಂದಿzರೆ. ಈ ವರ್ಷ ಉತ್ತಮ ಮುಂಗಾರು ಮಳೆಯ ಮುನ್ಸೂಚನೆ ಇರುವುದರಿಂದ ರೈತರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಭಾರೀ ಅನುಕೂಲ ಆಗಲಿದೆ. ಇತ್ತೀಚಿನ ಸಿಎ- ಎಸ್‌ವಿ ೨ ಫಾರ್ಕಾಸ್ಟ್ ಜೂನ್‌ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಭಾರತದಲ್ಲಿ ಸುರಿಯಲಿದೆ ಎಂದು ಅಂದಾಜಿಸಿದೆ.

Tags:
error: Content is protected !!