Columbus
3
broken clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಸದ್ಯಕ್ಕೆ ಶಿಕ್ಷಕರೇ ವಾರ್ಡನ್

ವಾರ್ಡನ್ನೇ ಇಲ್ಲದ ವಸತಿ ಶಾಲೆ: ವರದಿ ಹಿನ್ನೆಲೆ

ಅಧಿಕಾರಿಗಳ ಪರಿಶೀಲನೆ: ೧೨ರವರೆಗೆ ಶಿಕ್ಷಕರಿಗೆ ರಾತ್ರಿ ಪಾಳಿ ನಿಯೋಜನೆ

ನಂಜನಗೂಡು: ನಗರದಲ್ಲಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ವಾರ್ಡನ್ ಇಲ್ಲದಿರುವ ಸಮಸ್ಯೆಗೆ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಂಡಿರುವ ಶಿಕ್ಷಣ ಇಲಾಖೆ, ಸದ್ಯಕ್ಕೆ ಶಿಕ್ಷಕರಿಗೇ ವಾರ್ಡನ್ ಜವಾಬ್ದಾರಿಯನ್ನೂ ವಹಿಸಿದ್ದು, ಪ್ರತಿದಿನ ಒಬ್ಬ ಶಿಕ್ಷಕರನ್ನು ರಾತ್ರಿ ಪಾಳಿ ಯಲ್ಲಿ ವಾರ್ಡನ್ ಆಗಿ ಕಾರ್ಯ ನಿರ್ವಹಿಸಲು ಸೂಚನೆ ನೀಡಿದೆ.

‘ವಾರ್ಡನ್ನೇ ಇಲ್ಲದ ವಸತಿ ಶಾಲೆ!’ ಎಂಬ ಶೀರ್ಷಿಕೆಯಡಿ ‘ಆಂದೋಲನ’ ದಿನಪತ್ರಿಕೆ ಶುಕ್ರ ವಾರದ ಸಂಚಿಕೆಯ ಮುಖಪುಟದಲ್ಲಿ ವರದಿ ಪ್ರಕಟವಾಗಿದ್ದನ್ನು ಗಮನಿಸಿದ ಡಿಡಿಪಿಐ ಜವರೇಗೌಡ, ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ವೆಂಕಟಾ ಚಲಯ್ಯನವರ ನೇತೃತ್ವದಲ್ಲಿ ಅಧಿಕಾರಿಗಳನ್ನು ವಸತಿ ಶಾಲೆಗೆ ಕಳುಹಿಸಿ ವರದಿ ತರಿಸಿಕೊಂಡರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ ಹಾಗೂ ಬಿಆರ್‌ಪಿ ಪ್ರಭಾವತಿ ಅವರ ಸಮ್ಮುಖದಲ್ಲಿ ವಸತಿ ಶಾಲೆಯಲ್ಲಿ ಸಭೆ ನಡೆಯಿತು.

ಅಧಿಕಾರಿಗಳು, ಶಾಸಕರು ಈ ಸಮಸ್ಯೆಗೆ ಪರಿಹಾರ ರೂಪಿಸುವವರೆಗೆ ಬಿಇಒ ಹೇಳಿದ ಅಡುಗೆ ಸಿಬ್ಬಂದಿಗಳ ಬದಲಿಗೆ ದಿನಕ್ಕೊಬ್ಬ ಶಿಕ್ಷಕರು ಸರದಿಯಂತೆ ವಾರ್ಡನ್ ಕೆಲಸ ನಿರ್ವಸಬೇಕು ಎಂದು ಸೂಚಿಸಿದರು. ಇದನ್ನು ಕೇಳಿದ ಶಿಕ್ಷಕರು ಕಂಗಾಲಾಗಿ, ನಾವೇನು ಶಿಕ್ಷಕರೋ ವಾರ್ಡನ್ನುಗಳೋ ಎಂದು ಉದ್ಗರಿಸಿದರು. ಇದಕ್ಕೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋದರು.

Tags:
error: Content is protected !!