Mysore
34
few clouds

Social Media

ಶುಕ್ರವಾರ, 17 ಏಪ್ರಿಲ 2026
Light
Dark

ರಸ್ತೆಗಳು ಗುಂಡಿಮಯ….ಜನರಿಗೆ ಜೀವ ಭಯ!

ಪ್ರಶಾಂತ್‌ ಎಸ್.

ಮೈಸೂರು : ನಗರ ಹೊರವಲಯದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಹಾಗೂ ನಗರಪಾಲಿಕೆ ವ್ಯಾಪ್ತಿಯ ಕಂದಾಯ ಇಲಾಖೆ ನೌಕರರ ಬಡಾವಣೆ, ಎಂಸಿಡಿಸಿಸಿ ಬ್ಯಾಂಕ್ ನೌಕರರ ಬಡಾವಣೆ, ಬೆಮೆಲ್ ನಗರ, ಎಂ. ಜಿ. ಮಾರುಕಟ್ಟೆ(ಮಹಾತ್ಮ ಗಾಂಧಿರಸ್ತೆ) ಸಮೀಪದ ರಸ್ತೆಗಳ ದುಸ್ಥಿತಿಯಿಂದಾಗಿ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ವಾಹನ ಚಲಾ ಯಿಸುತ್ತಿದ್ದರೆ, ಮತ್ತೊಂದೆಡೆ ರಸ್ತೆಗಳನ್ನು ಅಗೆಯುತ್ತಿರುವುದರಿಂದ ನಿವಾಸಿಗಳಿಗೂ ಸಮಸ್ಯೆ ಎದುರಾಗಿದೆ.

ಬೃಹತ್ ಗುಂಡಿ ನಿರ್ಮಾಣ
ಪೈಪ್‌ಲೇನ್ ಅಳವಡಿಕೆಗಾಗಿ ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ. ಎಲ್ಲೆಂದರಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿದ್ದು, ಯಾವುದೇ ಸುರಕ್ಷತಾ ಕ್ರಮದ ಫಲಕವೂ ಇಲ್ಲ. ಕಾಮಗಾರಿಯ ಬಗ್ಗೆ ಮಾಹಿತಿ ನೀಡುವ ಒಂದೇ ಒಂದು ಸೂಚನಾ ಫಲಕವನ್ನೂ ಇಲ್ಲಿ ಅಳವಡಿಸಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಣ್ಣು ಹಾಕಿ ಅವಾಂತರ
ರಸ್ತೆ ಗುಂಡಿಗಳನ್ನು ಮಣ್ಣಿನಿಂದ ಮುಚ್ಚುವ ಪಂಚಾಯಿತಿ ಕಾರ್ಯ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ವಾರಕ್ಕೊಮ್ಮೆ ಗುಂಡಿಯನ್ನು ಮಣ್ಣಿನಿಂದ ಮುಚ್ಚಲು ಜೆಸಿಬಿಗಳಿಗೆ ಭಾರೀ ಹಣ ವ್ಯಯಿಸಲಾಗುತ್ತಿದೆ. ಟ್ರಾಕ್ಟರ್ ಮೂಲಕ ರಾಶಿ ರಾಶಿ ಮಣ್ಣನ್ನು ತಂದು ರಸ್ತೆಗೆ ಸುರಿಯಲಾಗುತ್ತಿದೆ. ಇದರಿಂದ ಕೇವಲ ಮಣ್ಣು ಮಾತ್ರವಲ್ಲದೆ ಅದರೊಂದಿಗೆ ಕಲ್ಲುಗಳೂ ಸೇರಿ ದ್ವಿಚಕ್ರ ವಾಹನ ಸವಾರರು ಬೀಳುವ ಅಪಾಯವನ್ನು ತಂದೊಡ್ಡಿದೆ. ಈ ಮಧ್ಯೆ ಕೆಲವು ಕಾಮಗಾರಿಗೆ ತೋಡಿದ್ದ ಗುಂಡಿಗಳನ್ನು ಸರಿಯಾಗಿ ಮುಚ್ಚದಿರುವುದರಿಂದ ಅಲ್ಲಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ. ಮಳೆ ಬಂದರೆ ಈ ರಸ್ತೆಯಲ್ಲಿನ ಭಾರೀ ಗುಂಡಿಗಳಲ್ಲಿ ನೀರು ತುಂಬಿ ಕೊಳ್ಳುವುದರಿಂದ ವಾಹನ ಸವಾರರು, ಸಾರ್ವಜನಿಕರು, ಹಿರಿಯ ನಾಗರಿಕರ ಓಡಾಟಕ್ಕೆ ತೊಂದರೆಯಾಗುತ್ತದೆ ಎಂಬ ದೂರುಗಳು ಕೇಳಿಬಂದಿವೆ.

Tags:
error: Content is protected !!