Mysore
25
clear sky

Social Media

ಭಾನುವಾರ, 18 ಜನವರಿ 2026
Light
Dark

ಕಪಿಲೆಯಲ್ಲಿ ತೇಲುವ ತೆಪ್ಪ ಅತ್ಯಾಕರ್ಷಕ ವಿನೂತನ

ಎಸ್.ಎಸ್.ಭಟ್

ನಂಜನಗೂಡು: ಪ್ರತಿ ವರ್ಷ ಸುತ್ತೂರು ಜಾತ್ರೆಯಲ್ಲಿ ಹೊಸದನ್ನು ಪರಿಚಯಿಸುವ ಸುತ್ತೂರು ಶ್ರೀ ಗಳು ಈ ಬಾರಿ ಶಿವರಾತ್ರೀಶ್ವರ ಜಯಂತಿ ಮಹೋತ್ಸವದ ತೆಪ್ಪೋತ್ಸವಕ್ಕೆಂದು ಅತ್ಯಾಕರ್ಷಕವಾದ ವಿನೂತನ ತೆಪ್ಪವನ್ನು ಸಿದ್ಧಪಡಿಸಿದ್ದು, ಸೋಮವಾರ ಜನಸಾಗರದ ಮಧ್ಯೆ ಈ ವಿನೂತನ ತೆಪ್ಪ ಕಪಿಲಾ ನದಿಯಲ್ಲಿ ಸಂಚರಿಸಲಿದೆ.

ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸೂಚನೆಯ ಮೇರೆಗೆ ಈ ತೆಪ್ಪವನ್ನು ಉತ್ತರ ಕನ್ನಡದ ಮುರುಡೇಶ್ವರದ ಶಿಲ್ಪಿ ಗಂಗಾಧರ ಸಿದ್ಧಪಡಿಸಿದ್ದು ಅದು ಸೋಮವಾರ ಕಪಿಲೆಯಲ್ಲಿ ತೇಲುವ ಮೂಲಕ ಪ್ರೇಕ್ಷಕರ ಕಣ್ತುಂಬಲಿದೆ.

೨೫ ಎಚ್‌ಪಿ ಮೋಟಾರ್‌ನಿಂದ ಚಾಲನೆಗೊಳ್ಳುವ ಈ ತೆಪ್ಪದ ನಾಲ್ಕು ದಿಕ್ಕುಗಳಲ್ಲಿನ ಶಿಲ್ಪಕಲಾ ಕೆತ್ತನೆಗಳಿಂದ ಅತ್ಯಾಕರ್ಷಕ ವಾಗಿದೆ. ಈ ಸುಂದರವಾದ ಈ ತೆಪ್ಪದಲ್ಲಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳಿಗೆ ತಲಾ ನಾಲ್ಕರಂತೆ ಹದಿನಾರು ನಂದಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಶಿವರಾತ್ರೀಶ್ವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ತೆಪ್ಪೋತ್ಸವ ನಡೆಸುವ ಈ ತೇಲುವ ದೇವಾಲಯದಲ್ಲಿ ಸುಮಾರು ೨೦ ಜನರು ನಿಂತುಕೊಳ್ಳಲು ಸ್ಥಳಾವಕಾಶವಿದೆ.

” ೧೭ ಅಡಿ ಎತ್ತರದ ೨೦+೧೮ ಅಡಿ ಅಗಲದ ಈ ತೆಪ್ಪವನ್ನು ೨೫ಕ್ಕೂ ಹೆಚ್ಚು ಅಶ್ವಶಕ್ತಿಯ ಮೋಟಾರ್ ನಿರ್ವಹಿಸುತ್ತಿದ್ದು, ಸುತ್ತೂರು  ಜಾತ್ರೆಯ ಅತ್ಯಂತ ಜನಾಕರ್ಷಣೆಯ ತೆಪ್ಪವಾಗಿ ಕಂಗೊಳಿಸಲಿದೆ.”

Tags:
error: Content is protected !!