Mysore
18
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ವಸ್ತುಪ್ರದರ್ಶನದಲ್ಲಿ ‘ಮೋಜಿನ ಮೇಳ’ ಸಂಪನ್ನ

ಎಚ್.ಎಸ್.ದಿನೇಶ್ ಕುಮಾರ್

ಫಾಲ್ಸ್ ಮಾದರಿಯ ಝರಿಯಲ್ಲಿ ಸೆಲಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ಜನರು

ಮೈಸೂರು: ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಕಳೆದ ೪೦ ದಿನಗಳಿಂದ ನಡೆದ ‘ಮೋಜಿನ ಮೇಳ’ ಪ್ರದರ್ಶನ ಭಾನುವಾರ ಮುಕ್ತಾಯವಾಗಿದೆ. ಮೇಳದಲ್ಲಿ ಸ್ಥಳೀಯರು ಸೇರಿದಂತೆ ದೇಶದ ವಿವಿಧೆಡೆ ಗಳಿಂದ ಆಗಮಿಸಿದ್ದ ಪ್ರವಾಸಿಗರು ಭೇಟಿ ನೀಡಿ ಸಂಭ್ರಮಿಸಿದ್ದಾರೆ.

ನಗದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿರುವ ದಸರಾ ವಸ್ತುಪ್ರದರ್ಶನ ಮೈದಾನವನ್ನು ವರ್ಷ ಪೂರ್ತಿ ಪ್ರವಾಸಿ ಸ್ಥಳವನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ‘ಮೋಜಿನ ಮೇಳ ಪ್ರದರ್ಶನ’ವನ್ನು ಪ್ರಾರಂಭಿಸಿತ್ತು. ಒಂದೇ ಸೂರಿನಡಿಯಲ್ಲಿ ಶಾಪಿಂಗ್, ಆಹಾರ ಮಳಿಗೆಗಳು, ಅಮ್ಯೂಸ್‌ಮೆಂಟ್, ಮಕ್ಕಳ ಆಟೋಟ ವಿಭಾಗ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಸೆಲ್ಛಿ ಪಾಯಿಂಟ್: ಇದೇ ಪ್ರಥಮ ಬಾರಿಗೆ ವಸ್ತು ಪ್ರದರ್ಶನ ಆವರಣದಲ್ಲಿ ನಯಾಗರ ಫಾಲ್ಸ್ ಮಾದರಿಯಲ್ಲಿ ಝರಿ ನೀರು ಹರಿಯುವ ವ್ಯವಸ್ಥೆ ಮಾಡಲಾಗಿತ್ತು. ಇದು ಅಕ್ಷರಶಃ ಸೆಲ್ಛಿ ಪಾಯಿಂಟ್ ಆಗಿ ಪರಿವ ರ್ತನೆಯಾಗಿತ್ತು. ಪ್ರವಾಸಿಗರು ಸೆಲಿ ತೆಗೆದುಕೊಂಡು ಖುಷಿಪಟ್ಟರು.

ಚುರುಮುರಿ, ಡೆಲ್ಲಿ ಹಪ್ಪಳ: ಮೋಜಿನ ಮೇಳಕ್ಕೆ ಆಗಮಿಸಿದ್ದವರಿಗೆ ಕುರುಕಲು ತಿಂಡಿಗೇನು ಬರವಿರಲಿಲ್ಲ. ಮಲ್ಲಿಗೆ ಇಡ್ಲಿ, ಚುರುಮುರಿ, ಗೋಬಿ, ನೂಡಲ್ಸ್, ಮಸಾಲೆ ಪುರಿ ಹಾಗೂ ಇನ್ನಿತರೆ ತಿನಿಸುಗಳು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು.

ಕೈ ಕೊಟ್ಟ ಮಳೆ: ಆರಂಭದಲ್ಲಿ ಲಾಭದಾಯಕವಾಗಿ ನಡೆದ ಮೇಳ ಅಂತ್ಯದಲ್ಲಿ ಮಳೆಯ ಕಾರಣದಿಂದ ಜನರನ್ನು ಸೆಳೆಯುವಲ್ಲಿ ವಿಫಲವಾಯಿತು. ಕೊನೆಯ ಒಂದು ವಾರವಂತೂ ವಸ್ತುಪ್ರದರ್ಶನ ಆವರಣ ಬಿಕೋ ಎನ್ನುತ್ತಿತ್ತು ಎಂದು ಜನರು ಹೇಳುತ್ತಾರೆ.

ಮಿಶ್ರ ಪ್ರತಿಕ್ರಿಯೆ: ವ್ಯಾಪಾರಸ್ಥರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಮೊದಲು ಜನರು ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡಿದರು. ಕೊನೆ ದಿನಗಳಲ್ಲಿ ಜನವೂ ಇಲ್ಲದೇ, ವ್ಯಾಪಾರವೂ ಇಲ್ಲದೇ ಕೈ ಸುಟ್ಟುಕೊಳ್ಳುವಂತಾಯಿತು ಎನ್ನುತ್ತಾರೆ ವ್ಯಾಪಾರಿಗಳು.

” ಆರಂಭದಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಕೊನೆಯ ದಿನಗಳಲ್ಲಿ ನಾವು ಮಳೆಯಿಂದ ನಷ್ಟ ಅನುಭವಿಸುವಂತಾಗಿದೆ. ಮಳೆ ಬಾರದಿದ್ದಲ್ಲಿ ಹೆಚ್ಚಿನ ಜನರು ಬರುತ್ತಿದ್ದರು. ಮಳೆಯ ಕಾರಣ ಜನರು ಇಲ್ಲಿಗೆ ಭೇಟಿ ನೀಡಲಿಲ್ಲ. ದಸರಾ ವೇಳೆ ನಡೆಯುವ ವಸ್ತುಪ್ರದರ್ಶನಕ್ಕೂ ಈಗ ನಡೆಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.”

-ಚಂದ್ರು, ವ್ಯಾಪಾರಿ

” ಬೇಸಿಗೆ ವೇಳೆ ಜನರನ್ನು ವಿಶೇಷವಾಗಿ ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ಬೇಸಿಗೆ ವಸ್ತುಪ್ರದರ್ಶನ ನಡೆಸಲಾಯಿತು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿದೆ. ಮಳೆಯ ಕಾರಣದಿಂದ ಕೊನೆಯಲ್ಲಿ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ ಅಷ್ಟೇ. ಮಳೆ ಮುಂದುವರಿದಿರುವ ಕಾರಣ ಮೇಳ ವನ್ನು ವಿಸ್ತರಿಸಲಿಲ್ಲ.”

-ಅಯೂಬ್‌ಖಾನ್, ಅಧ್ಯಕ್ಷರು, ವಸ್ತುಪ್ರದರ್ಶನ ಪ್ರಾಧಿಕಾರ 

Tags:
error: Content is protected !!