ಸುತ್ತೂರು ನಂಜುಂಡನಾಯಕ
ಸುತ್ತೂರು: ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮದ ತಾಯಮ್ಮನವರು ರಾಜ್ಯ ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ಬಂದ ೩-೪ ತಿಂಗಳ ಹಣವನ್ನು ಕೂಡಿಟ್ಟುಕೊಂಡು ಮೊದಲಿಗೆ ಎರಡು ಮೇಕೆಗಳನ್ನು ಖರೀದಿಸಿ, ನಂತರ ಅದರಿಂದ ಬಂದ ಲಾಭದಲ್ಲಿ ಮತ್ತೆ ೨ ಮೇಕೆ ಗಳನ್ನು ಖರೀದಿಸಿದೆ. ಅವುಗಳು ಮರಿ ಹಾಕಿ ೬ರಿಂದ ೮ ಮೇಕೆಗಳಾದ ಬಳಿಕ ಕೆಲವನ್ನು ಬೇರೆಯವರಿಗೆ ಮಾರಾಟ ಮಾಡಿ ಲಾಭ ಗಳಿಸಿದೆ.
ಹೀಗೆ ಬಂದ ಹಣವನ್ನು ನಾನು ಜೀವನೋಪಾಯಕ್ಕೆ ಬಳಸಿದ್ದೇನೆ. ಮೊದಲು ಬಂದ ೨ ಸಾವಿರ ರೂ. ಗಳನ್ನು ಕೂಡಿಟ್ಟುಕೊಂಡು ಮತ್ತೆ ೩ ತಿಂಗಳ ಹಣವನ್ನು ಸೇರಿಸಿ ಮೇಕೆಗಳನ್ನು ಖರೀದಿಸಿ ಅವುಗಳ ಮೂಲಕ ಜೀವನ ಕಟ್ಟಿಕೊಂಡಿದ್ದೇನೆ. ನನ್ನ ಮೊಮ್ಮಕ್ಕಳನ್ನು ಓದಿಸಲು ಈ ಹಣವನ್ನೇ ಬಳಸಿ ಕೊಂಡಿದ್ದೇನೆ.
ನನ್ನಂತಹ ಅನೇಕ ಬಡವರು ಬದುಕಲು ಸಿದ್ದರಾಮಯ್ಯ ಅವರು ಜಾರಿಗೊಳಿಸಿರುವ ಗೃಹ ಲಕ್ಷ್ಮಿ ಯೋಜನೆ ನೆರವಾಗುತ್ತಿದೆ ಎಂದು ಸುತ್ತೂರು ತಾಯಮ್ಮ ತಿಳಿಸಿದರು.





