Mysore
21
mist

Social Media

ಬುಧವಾರ, 31 ಡಿಸೆಂಬರ್ 2025
Light
Dark

ತಿ.ನರಸೀಪುರ ಪುರಸಭೆ ಅಧ್ಯಕ್ಷರಾಗಿ ವಸಂತ ಆಯ್ಕೆ

ಉಪಾಧ್ಯಕ್ಷರಾಗಿ ರಾಜೇಶ್ವರಿ ರಾಘವೇಂದ್ರ ಆಯ್ಕೆ; ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮ

ತಿ.ನರಸೀಪುರ: ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷೆಯಾಗಿ ಬಿ.ವಸಂತ ಶ್ರೀಕಂಠ, ಉಪಾಧ್ಯಕ್ಷೆಯಾಗಿ ಎಂ.ರಾಜೇಶ್ವರಿ ರಾಘವೇಂದ್ರ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಹಿಂದುಳಿದ ವರ್ಗಗಳ ಎ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 12ನೇ ವಾರ್ಡಿನ ಸದಸ್ಯೆ ಬಿ.ವಸಂತ ಶ್ರೀಕಂಠ ಹಾಗೂ ಪ.ಪಂಗಡ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 17ನೇ ವಾರ್ಡಿನ ಸದಸ್ಯೆ ಎಂ. ರಾಜೇಶ್ವರಿ ರಾಘವೇಂದ್ರ ಅವರಿಬ್ಬರೇ ನಾಮಪತ್ರವನ್ನು ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.

ಪುರಸಭೆಯ 23 ಸದಸ್ಯರಲ್ಲಿ 20 ಮಂದಿ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಎಸ್‌. ಮದನ್‌ರಾಜ್, ರೂಪ ಕರಿಯಪ್ಪ ಹಾಗೂ ಮಾದೇವಿ ಗೈರು ಹಾಜರಾಗಿದ್ದರು.

ಚುನಾವಣಾಧಿಕಾರಿಯಾಗಿ ತಹಸಿಲ್ದಾರ್ ಟಿ.ಜಿ.ಸುರೇಶಾಚಾರ್ ಕಾರ್ಯನಿರ್ವಹಿಸಿದರು. ಅವಿರೋಧ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಪುರಸಭೆ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನೂತನ ಅಧ್ಯಕ್ಷೆ ಬಿ.ವಸಂತ ಶ್ರೀಕಂಠ ಮಾತನಾಡಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಸಂಸದ ಸುನಿಲ್ ಬೋಸ್ ಹಾಗೂ ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಪುರಸಭೆ ಸದಸ್ಯರೆಲ್ಲರೂ ತಮ್ಮ ಮೇಲೆ ನಂಬಿಕೆಯಿಟ್ಟು, ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಕುಡಿಯುವ ನೀರು ಮತ್ತು ನೈರ್ಮಲ್ಯವನ್ನು ಕಾಪಾಡಲು ಆದ್ಯತೆ ನೀಡುತ್ತೇನೆ. ಅಭಿವೃದ್ಧಿಗೆ ಆದ್ಯತೆ ಕೊಟ್ಟು ದುಡಿಯುತ್ತೇನೆ ಎಂದು ತಿಳಿಸಿದರು.

ಉಪಾಧ್ಯಕ್ಷೆ ಎಂ.ರಾಜೇಶ್ವರಿ ರಾಘವೇಂದ್ರ ಮಾತನಾಡಿ, ತಮ್ಮ ಅವಿರೋಧ ಆಯ್ಕೆಗೆ ಸಹಕರಿಸಿದ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಕೃತಜ್ಞತೆ ಸಲ್ಲಿಸಿ, ಅಧ್ಯಕ್ಷರ ಜೊತೆ ಸಹಕಾರ ನೀಡುವ ಮೂಲಕ ರಸ್ತೆ ವಿದ್ಯುತ್ ಹಾಗೂ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದರು.

ಪಟ್ಟಣದಲ್ಲಿ ಬಾಕಿ ಉಳಿದಿರುವ ಕಾಮಗಾರಿಗೆ ಕ್ಷೇತ್ರದ ಶಾಸಕರೂ ಆದ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಸಂಸದ ಸುನಿಲ್ ಬೋಸ್, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನ ಪಡುವುದಾಗಿ ತಿಳಿಸಿದರು.

ಮಾಜಿ ಅಧ್ಯಕ್ಷರಾದ ಟಿ.ಎಂ.ನಂಜುಂಡಸ್ವಾಮಿ, ಎನ್. ಸೋಮಣ್ಣ, ಸದಸ್ಯರಾದ ಎಂ.ಸಿದ್ದು, ಪ್ರೇಮ, ಎಲ್.ಮಂಜುನಾಥ್, ಅಹಮ್ಮದ್ ಸಯೀದ್, ಬಿ.ಬೇಬಿ, ಸಿ.ಪ್ರಕಾಶ್, ಜಿ.ರೂಪಶ್ರೀ, ನಾಗರಾಜು, ಮಹದೇವಮ್ಮ, ಆರ್.ಅರ್ಜುನ್, ಪಿ.ಶೋಭರಾಣಿ, ಆರ್.ತೇಜಸ್ವಿನಿ, ವಿ.ಮೋಹನ್, ಬಾದಾಮಿ ಮಂಜು, ನಾಗರತ್ನ ಮಾದೇಶ, ಕೆ.ಕಿರಣ್, ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ತಾಪಂ ಮಾಜಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಸ್ವಾಮಿ, ಮಾಜಿಸದಸ್ಯ ಎಂ ರಮೇಶ್, ಬಿ. ಮರಯ್ಯ, ಕುರುಬರ ಸಂಘದ ಅಧ್ಯಕ್ಷ ಎಂ.ಎಸ್. ಮಹದೇವಸ್ವಾಮಿ,
ನಿರ್ದೇಶಕ ಹೆಚ್.ಸಿ. ಅರುಣ್ ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕುಷ್ಯ ಭಾಗ್ಯಮ್ಮ, ವಾಟಾಳು ನಾಗೇಶ್, ಮುಖಂಡರಾದ ತಿರುಮಕೂಡಲು ಪುಟ್ಟು, ಆರ್.ಮಹದೇವು, ಕೆ.ಗಣೇಶ್, ಎಂ.ಮಿಥುನ್, ಪಿಎಸಿಸಿಎಸ್ ನಿರ್ದೇಶಕ ಚಿಕ್ಕನಂಜಯ್ಯ, ಸಂತೃಪ್ತಿ ಕುಮಾರ್, ಕನಕ ಪಾಪು ಎಲ್‌ಐಸಿ ಲಿಂಗರಾಜು, ಗಾರೆ ಹುಚ್ಚಯ್ಯ, ಅಶ್ವಥ್, ಅಮಾವಾಸ್ಯೆ ಲಿಂಗರಾಜು, ಆರ್.ರಮೇಶ್, ದೊಡ್ಡಮಾದಯ್ಯ, ಬಾಗಳಿ ಯೋಗೇಶ್, ಏಳುಮಲೈ ಮಂಜು, ಅಕ್ಕೂರು ರಾಜೇಗೌಡ, ಸಂದೇಶ್, ಮುರಳಿ, ವೆಂಕು, ಇನ್ನಿತರರು ಹಾಜರಿದ್ದರು.

ಚಿತ್ರನಟ ಹಾಗೂ ಸದಸ್ಯ ಅರ್ಜುನ್ ರಮೇಶ್ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಶುಭಕೋರಿ ಪಟ್ಟಣದ ಅಭಿವೃದ್ಧಿಗೆ ಉಪಯುಕ್ತ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ ಆಡಳಿತ ನಡೆಸುವಂತೆ ಸಲಹೆ ನೀಡಿದರು.

Tags:
error: Content is protected !!