ಎಡೆಬಿಡದೆ ಸುರಿಯುತ್ತಿರುವ ಮಳೆ, ನದಿ ಪಾತ್ರದ ಜನರಿಗೆ ಕಾಳಜಿ ಕೇಂದ್ರ
ಮಂಜು ಕೋಟೆ
ಎಚ್.ಡಿ.ಕೋಟೆ: ಕೇರಳದ ಗಡಿಯಲ್ಲಿ ಮತ್ತು ತಾಲ್ಲೂಕಿನಲ್ಲಿ ಭಾರಿ ಮಳೆಯ ಆರ್ಭಟ ದಿಂದ ಕಬಿನಿ ಜಲಾಶಯದ ಹಿನ್ನೀರಿನ ಮತ್ತು ನದಿಯಿಂದ ಮದ್ದೂರು ವ್ಯಾಪ್ತಿಯ ಅನೇಕ ಮನೆಗಳು, ಸೇತುವೆಗಳು, ಮುಳುಗಡೆ ಗೊಂಡು ಜನಸಾಮಾನ್ಯರು ಕಂಗಲಾಗಿದ್ದಾರೆ.
ಒಂದು ವಾರದಿಂದ ಸುರಿಯುತ್ತಿದ್ದ ಮಳೆಗಿಂತ ಬುಧವಾರ ಮತ್ತು ಗುರುವಾರ ಸುರಿದ ಭಾರಿ ಮಳೆ ಹಿನ್ನೆಲೆಯಲ್ಲಿ ಕಬಿನಿ ಜಲಾ ಶಯಕ್ಕೆ ಒಳಹರಿವಿನ ಪ್ರಮಾಣ ಕ್ಷಣ ಕ್ಷಣಕ್ಕೂ ಹೆಚ್ಚಳವಾಗುತ್ತಿರುವುದರಿಂದ ಕಬಿನಿ ಜಲಾಶಯದ ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ರುವ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿಯ ಮತ್ತೂರು, ಆನೆಮಾಳ, ತಿಮ್ಮನಹೊಸಳ್ಳಿ ಸೇರಿದಂತೆ ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಸುಮಾರು 15ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ಹಿನ್ನೀರು ವ್ಯಾಪ್ತಿಯಲ್ಲಿ ನದಿಯಿಂದ 70,000 ಕ್ಯೂಸೆಕ್ಸ್ ನೀರು ಹೊರ ಹೋಗು ತಿರುವುದರಿಂದ ಜಲಾಶಯದ ಮುಂಭಾ ಗದ ವ್ಯಾಪ್ತಿಯಲ್ಲಿರುವ ಮಾದಾ ಪುರ ಮತ್ತು ಹೊಂಬರಗಳಿ ಸಮೀಪದ ಕಬಿನಿ ಸೇತುವೆಗಳು ಮುಳುಗಡೆಗೊಂಡಿವೆ.
ಡಿ.ಬಿ.ಕುಪ್ಪೆ ಗ್ರಾಪಂ ವ್ಯಾಪ್ತಿ ಯಲ್ಲಿ ಜಲಾ ವೃತಗೊಂಡಿರುವ ಗ್ರಾಮಗಳಿಗೆ ತಹಸಿಲ್ದಾ ಶ್ರೀನಿವಾಸ್ ಅವರ ಜೊತೆಗೂಡಿ ಅಧಿಕಾರಿ ಗಳ ತಂಡ ಗುರುವಾರ ಭೇಟಿ ನೀಡಿ ಜನರು ಸುರಕ್ಷಿತವಾದ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ. ಈ ಭಾಗದಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವ ಜನಿಕರು ಇದನ್ನು ಸದುಪಯೋಗಪಡಿಸಿ ಕೊಳ್ಳಬೇಕು, ಯಾರು ನದಿಯ ಬಳಿ ಹೋಗ ಬಾರದೆಂದು ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ಕಲ್ಯಾಣ ಅಧಿಕಾರಿ ಮಹೇಶ್, ಕಂದಾಯ ಅಧಿಕಾರಿ ಗಳಾದ ಯೋಗೇಂದ್ರಕುಮಾ ಮುಳಗಾವಿ, ಗೌಸ್ ಮಹಮದ್ ಉಪಸ್ಥಿತರಿದ್ದರು.
ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದ್ದು, ಆದಷ್ಟು ನೀರನ್ನು ಹೊರ ಬಿಡಲಾಗುತ್ತಿದೆ. ನದಿ ಭಾಗದ ಅನೇಕ ಸೇತುವೆಗಳು ಮುಳುಗಡೆಗೊಂಡಿವೆ. ಹಿನ್ನೀರಿನ ವ್ಯಾಪ್ತಿಯಲ್ಲಿ ಅನೇಕ ಮನೆಗಳು ಮುಳುಗಡೆಗೊಂಡಿದ್ದು, ಸಾರ್ವಜನಿಕರು ನದಿಯ ಬಳಿ ಹೋಗಬಾರದು, ಸುರಕ್ಷಿತವಾದ ಸ್ಥಳಕ್ಕೆ ತೆರಳಬೇಕು. ಯಾವ ಕ್ಷಣದಲ್ಲಾದರೂ ಮತ್ತಷ್ಟು ನೀರು ಬರುವ ಸಾಧ್ಯತೆಗಳಿದೆ.
-ಚಂದ್ರಶೇಖರ್, ಇಇ, ಕಬಿನಿ ಜಲಾಶಯ
ಎಚ್.ಡಿ.ಕೋಟೆ ತಾಲ್ಲೂಕಿನ ಗಡಿಭಾಗದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಜಲಾಶಯದ ಹಿನ್ನೀರಿನ ಭಾಗದಲ್ಲಿ ಅನೇಕ ಮನೆಗಳು ಜಲಾವೃತಗೊಂಡಿವೆ. ಅಲ್ಲಿಗೆ ಈಗಾಗಲೇ ಭೇಟಿ ನೀಡಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಜನರನ್ನು ಸುರಕ್ಷಿತವಾದ ಸ್ಥಳಕ್ಕೆ ಹೋಗುವಂತೆ ತಿಳಿಸಲಾಗಿದೆ. ಅಧಿಕಾರಿಗಳ ತಂಡ ವಾಸ್ತವ್ಯ ಹೂಡಿದೆ.
-ಶ್ರೀನಿವಾಸ್, ತಹಸಿಲ್ದಾರ್





