• ಮಂಜು ಕೋಟೆ
ಎಚ್.ಡಿ.ಕೋಟೆ: ಪಟ್ಟಣದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಉನ್ನತೀಕರಿಸಿದ ಮಾದರಿ ಶಾಲೆಯಲ್ಲಿ ಜಿಪಿಟ ಶಿಕ್ಷಕರುಗಳಿಲ್ಲದೆ ಸರಿಯಾಗಿ ಪಾಠ ನಡೆಯದೆ ಅನೇಕ ವಿದ್ಯಾರ್ಥಿಗಳು ಬೇರೆ ಶಾಲೆಗಳಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ.
156 ವರ್ಷಗಳ ಹಿಂದೆ ಬ್ರಿಟಿಷರ ಕಾಲ ದಲ್ಲಿ ಪಟ್ಟಣದ ಒಂದನೇ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಬಾಲಕರ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಕೆಲವು ವರ್ಷಗಳ ಹಿಂದೆ 300ರಿಂದ 400 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅನೇಕ ಖಾಸಗಿ ಶಾಲೆಗಳು ಮತ್ತು ಸರ್ಕಾರಿ ಶಾಲೆಗಳು ಹೆಚ್ಚಾಗಿ ಆರಂಭಗೊಂಡ ಹಿನ್ನೆಲೆಯಲ್ಲಿ ಪ್ರಸ್ತುತ ಈ ಶಾಲೆಯಲ್ಲಿ 70 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ
2012ರಲ್ಲಿ 7ನೇ ತರಗತಿಯವರೆಗಿದ್ದ ಈ ಶಾಲೆಯನ್ನು ಉನ್ನತೀಕರಿಸಿದ ಶಾಲೆಯಾಗಿ ಮಾರ್ಪಡಿಸಿ, 8ನೇ ತರಗತಿಯನ್ನು ಪ್ರಾರಂಭಿಸಲಾಯಿತು. ಅಂದಿನಿಂದ ಈ ಸಾಲಿನವರೆಗೂ 40 ರಿಂದ 50 ವಿದ್ಯಾರ್ಥಿ ಗಳು 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.
ಆದರೆ, ಜನಪ್ರತಿನಿಧಿಗಳ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಶಾಲೆಯಲ್ಲಿ ಮೂಲಸೌಕರ್ಯಗಳು ಮತ್ತು ಸಮರ್ಪಕವಾಗಿ ಶಿಕ್ಷಕರುಗಳು ಇಲ್ಲ ದಿರುವುದರಿಂದ ವಿದ್ಯಾರ್ಥಿಗಳಿಗೆ ಅನೇಕ ವಿಷಯಗಳ ಬೋಧನೆಗೆ ಅಡ್ಡಿಯಾಗಿದೆ. ಹೀಗಾಗಿ ಈ ಸಾಲಿನಲ್ಲಿ 22 ವಿದ್ಯಾರ್ಥಿಗಳ ಪೈಕಿ ಈಗ 15 ವಿದ್ಯಾರ್ಥಿಗಳು ಮಾತ್ರ ಶಾಲೆಯಲ್ಲಿ ಉಳಿದುಕೊಂಡಿದ್ದಾರೆ. ಉಳಿದ 7 ಮಕ್ಕಳು ಟಿಸಿ ಪಡೆದುಕೊಂಡು ಬೇರೆ ಶಾಲೆಗೆ ಸೇರ್ಪಡೆಗೊಂಡಿದ್ದಾರೆ
ಈ ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕರು ಸೇರಿ ಕೇವಲ ಮೂವರು ಶಿಕಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿ ಗಳ ಸಂಖ್ಯೆಗೆ ಅನುಗುಣವಾಗಿ 7 ಶಿಕ್ಷಕರು ಇರಬೇಕಾಗಿದೆ
ಎಂಟನೇ ತರಗತಿಗೆ ಪಾಠ ಮಾಡಬೇ ಕಾದರೆ ಜಿಪಿಟಿ ಶಿಕ್ಷಕರು ಆಗತ್ಯ. ಆದರೆ ಪಿಎಸ್‌ಟಿ ಶಿಕ್ಷಕರು ಮಾತ್ರ ಈ ಶಾಲೆಯ ಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಶಿಕ್ಷಣ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ
ಇರುವ ಶಿಕ್ಷಕರನೂ ಬೇರೆ ಕಡೆಗೆ ವರ್ಗಾವಣೆ ಮಾಡಿರುವುದು ಹಾಗೂ ಮೂಲಸೌಕರ್ಯಗಳನ್ನು ನೀಡದೆ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ ಎನ್ನುವುದು ಹಲವರ ಆರೋಪ. ಇದೇ ರೀತಿ ಮುಂದುವರಿದರೆ ಶಾಲೆ ಮುಚ್ಚುವ ಸ್ಥಿತಿ ಬರಬಹುದು ಎಂಬ ಆತಂಕ ಎದುರಾಗಿದೆ.
ಕೋಟ್ಸ್))
ಒಂದರಿಂದ ಏಳನೇ ತರಗತಿವರೆಗೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದೆ. 8ನೇ ತರಗತಿಯಲ್ಲಿ ಶಿಕ್ಷಕರಿಲ್ಲದೆ ಅನೇಕ ವಿಷಯಗಳಲ್ಲಿ ಪಾಠ ನಡೆಯದೆ ಇರುವುದರಿಂದ ಆತಂಕಗೊಂಡು ಟಿಸಿ ತೆಗೆದುಕೊಂಡು ಬೇರೆ ಶಾಲೆಗೆ ಸೇರ್ಪಡೆಗೊಂಡಿದ್ದೇನೆ.
-ಮಹಾದೇವಸ್ವಾಮಿ ಕಿಟ್ಟಿ, ವಿದ್ಯಾರ್ಥಿ
8ನೇ ತರಗತಿಯಲ್ಲಿ ಜಿಪಿಟಿ ಹುದ್ದೆಯ ಶಿಕ್ಷಕರು ಯಾರೂ ಇಲ್ಲದೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ತೊಂದರೆಯಾಗುತ್ತಿದೆ. ಇರುವ ಶಿಕ್ಷಕರೇ ಆದಷ್ಟು ಪಾಠ ಮಾಡುತ್ತಿದ್ದಾರೆ. ಶಿಕ್ಷಕರ ಕೊರತೆ ಇದ್ದರೂ ಇಲ್ಲಿರುವ ಶಿಕ್ಷಕರನ್ನೇ ಬೇರೆ ಶಾಲೆಗೆ ವರ್ಗಾವಣೆ ಮಾಡಿರುವ ಬಗ್ಗೆ ಬಿಇಒ ಮಾರಯ್ಯ ಮತ್ತು ಸಿಆರ್‌ಪಿ ಕೃಷ್ಣಯ್ಯ ಅವರಿಗೆ ಮಾಹಿತಿ ನೀಡಲಾಗಿದೆ. ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೆಲ ವಿದ್ಯಾರ್ಥಿಗಳು ಟಿಸಿ ಪಡೆದುಕೊಂಡು ಬೇರೆ ಶಾಲೆಗಳಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ.
-ರಾಮಚಂದ್ರ, ಮುಖ್ಯಶಿಕ್ಷಕರು
ಶಿಕ್ಷಕರ ಕೊರತೆಯಿಂದಾಗಿ ವಿದ್ಯಾರ್ಥಿಗಳು ಟಿಸಿ ಪಡೆದು ಬೇರೆ ಶಾಲೆಗೆ ಹೋಗುತ್ತಿರುವ ಕುರಿತು ಮಾಹಿತಿ ಇರಲಿಲ್ಲ. ಈ ಬಗ್ಗೆ ಬಿಇಒ ಅವರಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದ.
-ಜವರೇಗೌಡ, ಡಿಡಿಪಿಐ