Mysore
20
few clouds

Social Media

ಸೋಮವಾರ, 05 ಜನವರಿ 2026
Light
Dark

ಜಿಲ್ಲೆಯಲ್ಲಿ ಹಕ್ಕಿಜ್ವರ ತಡೆಗೆ ಕಟ್ಟೆಚ್ಚರ

ಕರ್ನಾಟಕ-ಕೇರಳ ಗಡಿ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ

ಕೆ. ಬಿ. ರಮೇಶನಾಯಕ
ಮೈಸೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಕ್ಕಿಜ್ವರದ ಭೀತಿ ಕಾಣಿಸಿಕೊಂಡಿರು ವುದರಿಂದ ಮೈಸೂರು ಜಿಲ್ಲೆಯಲ್ಲೂ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕೇರಳ ಭಾಗದಿಂದ ಬರುವ ಕೋಳಿಗಳ ವಾಹನವನ್ನು ಗಡಿಯಲ್ಲೇ ತಡೆದು ತಪಾಸಣೆ ಮಾಡಿ ಜಿಲ್ಲೆಯಲ್ಲಿ ಹಕ್ಕಿಜ್ವರದ ಸೋಂಕು ಕಾಣಿಸಿಕೊಳ್ಳ ದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ಜಿಲ್ಲಾಡಳಿತ ಮುಂದಾಗಿದೆ.

ಜಿಲ್ಲೆಯ ಎಲ್ಲಾ ಕೋಳಿ -ರಂಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಕರ್ನಾಟಕ, ತಮಿಳುನಾಡು, ಕೇರಳಕ್ಕ ಹೊಂದಿಕೊಂಡಂತೆ ಇರುವ ಮೈಸೂರು ಜಿಲ್ಲೆಯು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ನಿತ್ಯ ಹೊರ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಯಾವುದಾದರೂ ರೋಗ ಕಾಣಿಸಿಕೊಂಡರೆ ಪ್ರವಾಸೋದ್ಯಮದ ಮೇಲೆ ಹೊಡೆತ ಬೀಳುವುದರಿಂದ ಹಕ್ಕಿಜ್ವರ ಕಾಣಿಸಿಕೊಳ್ಳದಂತೆ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬೇಕಾದ ಎಲ್ಲಾ ನಿಯಂತ್ರಣ ಕ್ರಮಗಳನ್ನು ಅನುಸರಿಸಿದೆ.

ಮೈಸೂರು ಜಿಲ್ಲೆಯಲ್ಲಿ ೬೫ ಮೊಟ್ಟೆ ಕೋಳಿ -ರಂಗಳು, ೨೩೫ ಮಾಂಸದ ಕೋಳಿ -ರಂಗಳು ಸೇರಿ ಒಟ್ಟು ೩೦೦ -ರಂಗಳಿವೆ. ಇಲಾಖೆಯು ಅಂದಾಜಿಸಿರುವ ಪ್ರಕಾರ ೫೦ ಲಕ್ಷ ಕೋಳಿಗಳು ಇವೆ.

೪೮ ರ‍್ಯಾಪಿಡ್ ರೆಸ್ಪಾನ್ಸ್ ಟೀಮ್: ಹಕ್ಕಿಜ್ವರ ತಡೆಗೆ ಎಲ್ಲೆಡೆ ಹದ್ದಿನ ಕಣ್ಣಿಡಲು ಮತ್ತು ತಪಾಸಣೆಗಾಗಿ ೪೮ ರ‍್ಯಾಪಿಡ್ ರೆಸ್ಪಾನ್ಸ್ ಟೀಮ್‌ಗಳನ್ನು ರಚನೆ ಮಾಡಿದ್ದು, ಪ್ರತಿಯೊಂದು ತಂಡವೂ ತಮಗೆ ವಹಿಸಿದ ಮೊಟ್ಟೆ ಕೋಳಿ -ರಂ ಹಾಗೂ ಮಾಂಸದ ಕೋಳಿ -ರಂಗಳನ್ನು ತಪಾಸಣೆ ಮಾಡಬೇಕು. ಒಂದು ಟೀಮ್ ಪರಿಶೀಲಿಸಿದ ಮೇಲೆ ಮತ್ತೊಂದು ಟೀಮ್‌ನಲ್ಲಿರುವ ಸದಸ್ಯರನ್ನು ಸಂಪರ್ಕಿಸಬಾರದು. ಅದೇ ರೀತಿ -ರಂ ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಅಂತರ ಕಾಯ್ದುಕೊಳ್ಳುವಂತೆ ಹೇಳಲಾಗಿದೆ.

ಫಾರಂಗಳಲ್ಲಿ ೨೦ಕ್ಕಿಂತ ಹೆಚ್ಚು ಕೋಳಿಗಳು ಅಸ್ವಾಭಾವಿಕವಾಗಿ ಸಾವನ್ನಪ್ಪುವುದು ಕಂಡು ಬಂದ ತಕ್ಷಣವೇ ಅದನ್ನು ಸಂಗ್ರಹಿಸಿ ಭೂಪಾಲ್ ನಲ್ಲಿರುವ ವಿಽವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಹಕ್ಕಿಜ್ವರ ದೃಢವಾದರೆ ತಕ್ಷಣವೇ -ರಂನಲ್ಲಿರುವ ಕೋಳಿಗಳನ್ನು ಸಾಯಿಸುವುದಕ್ಕೆ ತಂಡ ಸಿದ್ಧವಾಗಿದೆ. ಯಾವುದೇ ಕೋಳಿ-ರಂನಲ್ಲಿ ಕೋಳಿಗಳು ಸಾವನ್ನಪ್ಪಿ ದರೆ ಸುತ್ತ ೨೦೦ ಮೀಟರ್ ಪ್ರದೇಶವನ್ನು ನಿರ್ಬಂಽಸಿ ತಾತ್ಕಾಲಿಕವಾಗಿ -ರಂನ್ನು ಸೀಜ್ ಮಾಡುವುದಕ್ಕೂ ತಂಡದ ಮುಖ್ಯಸ್ಥರಿಗೆ ಹೊಣೆಗಾರಿಕೆ ನೀಡಲಾಗಿದೆ.

ವಲಸೆ ಹಕ್ಕಿಗಳ ಹಿಕ್ಕೆ ಪರೀಕ್ಷೆಗೆ ರವಾನೆ: ಬೇಸಿಗೆ ಕಾಲದಲ್ಲಿ ವಲಸೆ ಹಕ್ಕಿಗಳು ಬರುವ ಕಾರಣ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಪ್ರಮುಖ ಕೆರೆಗಳಲ್ಲಿ ಇರುವ ಹಕ್ಕಿಗಳ ಹಿಕ್ಕೆಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಕುಕ್ಕರಹಳ್ಳಿ ಕೆರೆ, ಹೆಬ್ಬಾಳ್ ಕೆರೆ, ಲಿಂಗಾಂಬುಧಿಕೆರೆ, ದಳವಾಯಿ ಕೆರೆ, ಹದಿನಾರು ಕೆರೆ, ತಿಪ್ಪಯ್ಯನಕೆರೆಯಲ್ಲಿ ನೆಲೆಸಿರುವ ಪಕ್ಷಿಗಳಲ್ಲಿ ಹಿಕ್ಕೆಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವರದಿಯಲ್ಲಿ ಏನಾದರೂ ಪಾಸಿಟಿವ್ ಅಂಶಗಳು ಕಂಡುಬಂದರೆ ಅಗತ್ಯ ಕ್ರಮಜರುಗಿಸಲು ಇಲಾಖೆ ಅಧಿಕಾರಿಗಳು ಸಜ್ಜಾಗಿದ್ದಾರೆ.

ಚೆಕ್‌ಪೋಸ್ಟ್ ಸ್ಥಾಪನೆ: ಕೇರಳ ಭಾಗದಿಂದ ಎಚ್. ಡಿ. ಕೋಟೆ ಮಾರ್ಗವಾಗಿ ಬರುವ ಕೋಳಿಗಳ ಮೇಲೆ ಕಣ್ಣಿಡಲು ಬಾವಲಿಯಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಪಶುವೈದ್ಯರು, ಪರೀಕ್ಷಕರು, ಡಿ ಗ್ರೂಪ್ ಸಿಬ್ಬಂದಿ ಇರುವ ತಂಡ ಕಾರ್ಯ ನಿರ್ವಹಿಸಲಿದೆ. ಕೇರಳದಿಂದ ಬರುವ ಕೋಳಿ, ಮೊಟ್ಟೆವಾಹನಗಳಿಗೆ ಸ್ಯಾನಿಟೈಸ್ ಮಾಡಿ, ರೋಗಗ್ರಸ್ತ ಕೋಳಿಗಳು ಕಂಡು ಬಂದರೆ ಪರಿಶೀಲಿಸುವುದು. ಸಾಮಾನ್ಯವಾಗಿದ್ದರೆ ಸೆಂಟರ್‌ಗಳಿಗೆ ಕಳುಹಿಸಲಾಗುತ್ತದೆ. ಕೇರಳದಲ್ಲಿ ಹಕ್ಕಿಜ್ವರ ಪತ್ತೆಯಾಗದೆ ಇದ್ದರೂ ಬೇರೆ ಕಡೆಯಿಂದ ತಂದು ಅಲ್ಲಿಂದ ಕರ್ನಾಟಕದ ಭಾಗಕ್ಕೆ ಪೂರೈಸುವ ಸಾಧ್ಯತೆ ಇರುವುದರಿಂದ ತಪಾಸಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಭಯಪಡುವ ಆತಂಕವಿಲ್ಲ: ಕೋಳಿಗಳು ಮತ್ತು ಮೊಟ್ಟೆಗಳನ್ನು ಸೇವಿಸುವುದರಿಂದ ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಅಧಿಕ ಉಷ್ಣಾಂಶದ ವಾತಾವರಣದಲ್ಲಿ ವೈರಸ್ ಉಳಿ ಯುವುದಿಲ್ಲ. ಇದು ಆಹಾರದಿಂದ ಉಂಟಾಗುವ ರೋಗವಲ್ಲ. ಖಾದ್ಯ ಮಾಂಸ ಹಾಗೂ ಮೊಟ್ಟೆಗಳನ್ನು ಬೇಯಿಸಿದಾಗ ವೈರಸ್ ನಾಶಗೊಳ್ಳುತ್ತದೆ. ಸಾರ್ಸ್‌ನಂತೆ ಇದರಲ್ಲಿ ಮನುಷ್ಯನಿಂದ ಮನುಷ್ಯನಿಗೆ ಸೋಂಕು ಹರಡುವುದಿಲ್ಲವಾದ ಕಾರಣ ಭಯಪಡಬೇಕಾಗಿಲ್ಲ.

ಹಕ್ಕಿಜ್ವರದ ಯಾವುದೇ ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ. ಮುಂಜಾಗ್ರತೆಯಾಗಿ ರ‍್ಯಾಪಿಡ್ ರೆಸ್ಪಾನ್ಸ್ ಟೀಮ್ ರಚನೆ ಮಾಡಿ ಎಲ್ಲಾ ಕೋಳಿ -ರಂಗಳನ್ನೂ ಪರಿಶೀಲಿ ಸಲಾಗುತ್ತಿದೆ. ಬಾವಲಿ ಯಲ್ಲಿ ಚೆಕ್‌ಪೋಸ್ಟ್ ತೆರೆದು ತಪಾಸಣೆ ಮಾಡ ಲಾಗುತ್ತಿದೆ. ವಲಸೆ ಬಂದಿ ರುವ ಹಕ್ಕಿಗಳ ಹಿಕ್ಕೆಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. -ಡಾ. ಸಿ. ನಾಗರಾಜು, ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ

Tags:
error: Content is protected !!