Mysore
25
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗೂ ಸಮಾಜ ಕಲ್ಯಾಣ ಇಲಾಖೆ ಕಟಿಬದ್ಧ

ಪರಿಶಿಷ್ಟ ಸಮುದಾಯದ ಅಭಿವೃದ್ಧಿ ಯೋಜನೆ ಕಾರ್ಯಗತಗೊಳಿಸಲು ಅಧಿಕಾರಿಗಳ ಶತಪ್ರಯತ್ನ 

ಜನಸಮುದಾಯದ ಏಳಿಗೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸ್ವಾಭಿಮಾನದ ಬದುಕಿಗೆ ಸಾಂವಿಧಾನಿಕ ಹಕ್ಕನ್ನು ನೀಡುವ ಮೂಲಕ ಒತ್ತಾಸೆಯಾಗಿ ನಿಂತಿದೆ. ಇಂದಿನ ಮಕ್ಕಳೇ ಅಭಿವೃದ್ಧಿ ಭಾರತದ ಆಧಾರ ಸ್ತಂಭ ಎಂಬಂತೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕಟ್ಟಿಬದ್ಧವಾಗಿ ಸಾಕಷ್ಟು ಅನುದಾನಗಳನ್ನು ನೀಡುತ್ತಿದೆ. ಆ ಮೂಲಕ ಭವಿಷ್ಯದ ಪ್ರಜೆಗಳ ಹಕ್ಕುಗಳನ್ನು ಸಂಪೂರ್ಣವಾಗಿ ನೀಡಲು ಬದ್ಧವಾಗಿದೆ. ಆದರೆ, ಸರ್ಕಾರ ಏನೆಲ್ಲಾ ಯೋಜನೆಗಳನ್ನು ಜಾರಿಗೆ ತಂದರೂ ಅದನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ಹೊತ್ತಿರುವ ಆಡಳಿತ ವರ್ಗಕ್ಕೆ ಇಚ್ಛಾಶಕ್ತಿಯಿದ್ದರೆ ಫಲಾನುಭವಿಗಳ ಬದುಕು ಹಸನಾಗುವುದಲ್ಲದೆ, ಸರ್ಕಾರದ ಆಶಯ ಈಡೇರಿದಂತಾಗುತ್ತದೆ.

ಅಂತಹದೊಂದು ಇಚ್ಛಾಶಕ್ತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಮೈಸೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯು ಸರ್ಕಾರದ ಆಶಯವನ್ನು ಸಂಪೂರ್ಣವಾಗಿ ಈಡೇರಿಸುವ ಸಲುವಾಗಿ ಇಲಾಖೆಯ ಎಲ್ಲ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಅದನ್ನು ಸಂಪೂರ್ಣ ಕಾರ್ಯಗತಗೊಳಿಸಲು ಶತಪ್ರಯತ್ನ ನಡೆಸುತ್ತಿದೆ. ಇಲ್ಲಿನ ಅಧಿಕಾರಿಗಳೂ ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಅವಿರತ ಶ್ರಮಿಸುತ್ತಿದ್ದಾರೆ.

ಸಮಾಜದ ಕಟ್ಟಕಡೆಯ ಸಮುದಾಯದ ಮಕ್ಕಳೂ ತಮ್ಮ ಸಂವಿಧಾನಬದ್ಧ ಹಕ್ಕನ್ನು ನ್ಯಾಯಯುತವಾಗಿ ಪಡೆಯ ಬೇಕು ಎಂಬ ಉದ್ದೇಶದಿಂದ ಸರ್ಕಾರ ಪರಿಶಿಷ್ಟ ಜನಾಂಗದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಗುರಿಯೊಂದಿಗೆ ಹಲವಾರು ಶೈಕ್ಷಣಿಕ ಸೌಲಭ್ಯಗಳನ್ನು ನೀಡುತ್ತಿದೆ. ಈ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ  ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವರ್ಗ  ಕಾರ್ಯೋನ್ಮುಖವಾಗಿದೆ.

ಸಮಾಜ ಕಲ್ಯಾಣ ಇಲಾಖೆಯಿಂದ ಮೂಲಭೂತ ಸೌಕರ್ಯ ಕಾರ್ಯಕ್ರಮಗಳು

* ವಿದ್ಯಾರ್ಥಿನಿಲಯ, ವಸತಿ ಶಾಲೆಗಳ ಕಟ್ಟಡ ನಿರ್ಮಾಣ

*  ಪ್ರಗತಿ ಕಾಲೋನಿಗಳ ಯೋಜನೆ, ಸಮುದಾಯ ಭವನಗಳ ನಿರ್ಮಾಣ

*  ಪರಿಶಿಷ್ಟ ಜಾತಿಯವರ ಸಂಘ ಸಂಸ್ಥೆಗಳ ಕಟ್ಟಡ ನಿರ್ಮಾಣಕ್ಕೆ ಸಹಾಯಧನ

*  ಪರಿಶಿಷ್ಟ ಜಾತಿಯವರಿಗೆ ಸ್ಮಶಾನ ಭೂಮಿ ಖರೀದಿ

*  ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ

ವಸತಿ ಶಾಲೆ, ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ನಿಲಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳು: 

೧) ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ : ೧ರಿಂದ ೫ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಸತಿ ಶಾಲೆ ವ್ಯವಸ್ಥೆ, ಭೋಜನಾ ವ್ಯವಸ್ಥೆ, ಶುಚಿ ಸಂಭ್ರಮ ಕಿಟ್,  ಸಮವಸ್ತ್ರ, ಶೂ ಮತ್ತು ಸಾಕ್ಸ್, ಪಠ್ಯಪುಸ್ತಕ, ಲೇಖನ ಸಾಮಗ್ರಿ, ಕ್ರೀಡಾ ಸಾಮಗ್ರಿ ಗಳನ್ನು ನೀಡಲಾಗುತ್ತದೆ.  ಬಾಲಕರಿಗೆ ತಲೆ ಕ್ಷೌರ ಮಾಡಿಸು ವುದು ಹಾಗೂ ಹಾಸಿಗೆ- ಹೊದಿಕೆ ನೀಡಲಾಗುತ್ತದೆ. ಬಾಲಕಿಯರಿಗೆ ಸ್ಯಾನಿಟರಿ  ನ್ಯಾಪ್‌ಕಿನ್‌ಗಳನ್ನು ನೀಡಲಾಗುತ್ತದೆ.

೨) ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳು: 

ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ವಸತಿ ಶಾಲೆ ವ್ಯವಸ್ಥೆ, ಭೋಜನಾ ವ್ಯವಸ್ಥೆ, ಶುಚಿ ಸಂಭ್ರಮ ಕಿಟ್, ಹಾಸಿಗೆ-ಹೊದಿಕೆ, ಕ್ರೀಡಾ ಸಾಮಗ್ರಿಗಳನ್ನು ನೀಡಲಾಗುತ್ತದೆ. ಬಾಲಕಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಗಳು ಕರಾಟೆ/ಜುಡೊ /ಟೆಕ್ವಾಂಡೋ ಸಮವಸ್ತ್ರ ನೀಡುವ ಜೊತೆಗೆ ಯೋಗ ತರಬೇತಿಯನ್ನೂ ನೀಡಲಾಗುತ್ತದೆ.

೩) ಖಾಸಗಿ ಅನುದಾನಿತ ವಿದ್ಯಾರ್ಥಿನಿಲಗಳಿಗೆ ಪ್ರವೇಶ ಮತ್ತು ನಿರ್ವಹಣೆ: 

ಪರಿಶಿಷ್ಟ ಜಾತಿಯ ಸಂಘ ಸಂಸ್ಥೆಗಳು ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಇವರು ನಡೆಸುವ ವಿದ್ಯಾರ್ಥಿನಿಲಯಗಳಿಗೆ ಮಾನ್ಯತೆ ನೀಡಿ ಸಹಾಯಧನವನ್ನು ಇಲಾಖೆಯ ವತಿಯಿಂದ ನೀಡಲಾಗುತ್ತಿದೆ.

೪) ಖಾಸಗಿ ಅನುದಾನಿತ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ ಪ್ರವೇಶಾವಕಾಶ: 

೫ರಿಂದ ೧೦ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಖಾಸಗಿ ಅನುದಾನಿತ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗುತ್ತಿದೆ ಹಾಗೂ ಇಲಾಖೆಯ ವತಿಯಿಂದ ಸಹಾಯಧನ ವನ್ನು ನೀಡಲಾಗುತ್ತಿದೆ.

೫)  ಕ್ರೈಸ್ ವಸತಿ ಶಾಲೆಗಳಿಗೆ ಉಚಿತ ಪ್ರವೇಶಾವಕಾಶ: 

ಮ್ಯಾನ್ಯುವೆಲ್ ಸ್ಕಾ ವೆಂಜರ್/ಪೌರ ಕಾರ್ಮಿಕರು/ ಅಲೆಮಾರಿ-ಅರೆ ಅಲೆಮಾರಿ ಪೋಷಕರ ಮಕ್ಕಳು/ತಂದೆ ತಾಯಿ ಇಲ್ಲದ ಮಕ್ಕಳಿಗೆ ಪ್ರವೇಶ ಪರೀಕ್ಷೆ ಇಲ್ಲದೆ ನೇರವಾಗಿ ಕ್ರೈಸ್ ವಸತಿ ಶಾಲೆಗಳಿಗೆ ಪ್ರವೇಶ ನೀಡಲಾಗುತ್ತಿದೆ.

೬) ಖಾಸಗಿ ಅನುದಾನಿತ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶಾವಕಾಶ

ಪರಿಶಿಷ್ಟ ಜಾತಿಯ ಸಂಘ ಸಂಸ್ಥೆಗಳು ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಇವರು ನಡೆಸುವ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ನೀಡಿ ಆ ಸಂಘ ಸಂಸ್ಥೆಗಳಿಗೆ ಸಹಾಯಧನವನ್ನು ಇಲಾಖೆಯ ವತಿಯಿಂದ ನೀಡಲಾಗುತ್ತಿದೆ.

೭) ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ: 

೧ರಿಂದ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸದರಿ ಕಾರ್ಯಕ್ರಮದ ಕುಟುಂಬದ ವಾರ್ಷಿಕ ಆದಾಯ ೬.೦೦ ಲಕ್ಷ ರೂ. ಮಿತಿಯನ್ನು ಹೊಂದಿರುವವರು ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿರುತ್ತಾರೆ.

■ ವಾರ್ಷಿಕ ೨.೫೦ ಲಕ್ಷ ರೂ. ಆದಾಯ ಮಿತಿ ಇರುವ ಎಲ್ಲ ವಿದ್ಯಾರ್ಥಿಗಳಿಗೂ ಶುಲ್ಕ ಮರು ಪಾವತಿ ಮತ್ತು ವಿದ್ಯಾರ್ಥಿ ವೇತನವನ್ನು ಇಲಾಖೆಯಿಂದ ಭರಿಸಲಾಗುತ್ತದೆ.

■ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೋಷಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

■ ಪರಿಶಿಷ್ಟ ಜಾತಿಯ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ಆಯಾ ಜಿಲ್ಲೆಗಳಲ್ಲಿರುವ ಪ್ರತಿಷ್ಠಿತ ವಸತಿ ಮತ್ತು ವಸತಿಯೇತರ ಶಾಲೆಗಳಲ್ಲಿ ೬ನೇ ತರಗತಿಯಿಂದ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ.

■ ಕಾನೂನು ಪದವೀಧರರಿಗೆ ನ್ಯಾಯವಾದಿ ವೃತ್ತಿಯ ಪ್ರಾಯೋಗಿಕ ತರಬೇತಿ ಕಾರ್ಯಕ್ರಮದಡಿ ೨ ವರ್ಷಗಳಿಗೆ ಮಾಸಿಕ ಭತ್ಯೆ ೧೦,೦೦೦ ರೂ.ಗಳನ್ನು ನೀಡಲಾಗುತ್ತದೆ.  ಕಾನೂನು ಪದವೀಧರರಿಗೆ ಕಚೇರಿ ಸ್ಥಾಪಿಸಲು ಮತ್ತು ಕಾನೂನು ಪುಸ್ತಕಗಳನ್ನು ಖರೀದಿಸಲು, ಪೀಠೋಪಕರಣ/  ಕಂಪ್ಯೂಟರ್ ಇತ್ಯಾದಿ ಖರೀದಿಸಲು ತಾಲ್ಲೂಕು ಟಿಎಂಸಿ ಕೇಂದ್ರ ಸ್ಥಾನಗಳಲ್ಲಿ ೫೦,೦೦೦ ರೂ. ಮತ್ತು ನಗರಸಭೆ/ ಮಹಾನಗರ ಪಾಲಿಕೆಗಳಲ್ಲಿ ಒಮ್ಮೆ ೧,೦೦,೦೦೦ ರೂ.ಗಳನ್ನು ನೀಡಲಾಗುತ್ತದೆ

ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳು: 

೧) ದೌರ್ಜನ್ಯಕ್ಕೀಡಾದ ಸಂತ್ರಸ್ತರಿಗೆ ಪರಿಹಾರ ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ಪರಿಷ್ಕ ತ ದರದಲ್ಲಿ ಪರಿಹಾರ ಧನ ಮಂಜೂರು ಮಾಡಲಾಗುತ್ತಿದೆ.

೨) ಅಂತರ್ಜಾತಿ ವಿವಾಹವಾದ ದಂಪತಿಗೆ ಪ್ರೋತ್ಸಾಹ ಧನ ಪರಿಶಿಷ್ಟ ಜಾತಿಯ ಯುವಕರು ಇತರೆ ಜಾತಿಯ ಯುವತಿಯರನ್ನು ವಿವಾಹವಾದರೆ ಅಂತಹ ದಂಪತಿಗೆ ೨.೫೦ ಲಕ್ಷ ರೂ., ಪರಿಶಿಷ್ಟ ಜಾತಿಯ   ಯುವತಿಯರು ಇತರೆ ಜಾತಿಯ ಯುವಕರನ್ನು ವಿವಾಹವಾದಲ್ಲಿ, ಅಂತಹ ದಂಪತಿಗೆ ೩ ಲಕ್ಷ ರೂ.ಗಳ ಪ್ರೋತಾಹ ಧನವನ್ನು ನೀಡಲಾಗುತ್ತದೆ.

೩) ಸರಳ ವಿವಾಹ ಸಹಾಯಧನ ಯೋಜನೆ ಈ ಯೋಜನೆಯನ್ವಯ ನೋಂದಾಯಿತ ಸಂಘ-ಸಂಸ್ಥೆಗಳು ವ್ಯವಸ್ಥೆ ಮಾಡುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿಯ ದಂಪತಿಗೆ ೫೦,೦೦೦ ರೂ. ಪ್ರೋತ್ಸಾಹಧನ ನೀಡಲಾಗುತ ದೆ.

೪) ವಿಧವಾ ಮರು ವಿವಾಹಕ್ಕೆ ಪ್ರೋತ್ಸಾಹಧನ ಪರಿಶಿಷ್ಟ ಜಾತಿಯ ವಿಧವೆಯರು ಹೊಸ ಬದುಕನ್ನು ರೂಪಿಸಿಕೊಳ್ಳಲು ಅನುಕೂಲವಾಗುವಂತೆ ಮರು ಮದುವೆಯಾದಲ್ಲಿ ಅಂತಹ ದಂಪತಿಗೆ ೩ ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ.

೫)  ಒಳಪಂಗಡಗಳ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಧನ ಪರಿಶಿಷ್ಟ ಜಾತಿಯ ಯುವಕ/ಯುವತಿಯರು ಪರಿಶಿಷ್ಟ ಜಾತಿಯ ಇತರೆ ಉಪಜಾತಿಗಳ ಯುವತಿ/ ಯುವಕರನ್ನು ವಿವಾಹವಾದಲ್ಲಿ ಅಂತಹ ದಂಪತಿಗೆ ೨ ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ.

೬) ದೇವದಾಸಿ ಮಕ್ಕಳ ವಿವಾಹಕ್ಕೆ ಪ್ರೋತ್ಸಾಹಧನ ದೇವದಾಸಿಯರ ಹೆಣ್ಣು ಮಕ್ಕಳು ಸ್ವಜಾತಿ/ ಇತರೆ ಜಾತಿ ಹುಡುಗರನ್ನು ವಿವಾಹವಾದಲ್ಲಿ ೫ ಲಕ್ಷ ರೂ.ಗಳ ಪ್ರೋತ್ಸಾಹ ಧನ, ಗಂಡು ಮಕ್ಕಳು  ಸ್ವಜಾತಿ/ ಇತರೆ ಜಾತಿ ಹೆಣ್ಣುಮಕ್ಕಳನ್ನು ವಿವಾಹವಾದಲ್ಲಿ ಅಂತಹ ದಂಪತಿಗೆ ೩ ಲಕ್ಷ ರೂ.  ಪ್ರೋತ್ಸಾಹಧನ ನೀಡಲಾಗುತ್ತದೆ.

೭) ಅಸ್ಪೃಶ್ಯತೆ ನಿವಾರಣೆಗಾಗಿ ಅರಿವು ಮೂಡಿಸುವ ಕಾರ್ಯಕ್ರಮ   ಅಸ್ಪೃಶ್ಯತೆ ನಿವಾರಣೆ, ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಹಾಗೂ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಗ್ರಾಮ ಪಂಚಾಯಿತಿ, ಹೋಬಳಿ,   ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ವಿಚಾರಸಂಕಿರಣ ಹಾಗೂ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ

” ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರ ತವರು ಜಿಲ್ಲೆಯಾಗಿರುವುದರಿಂದ ಅವರ ಮಾಗದರ್ಶನದಂತೆ ಈಗಾಗಲೇ ಮೂಲಭೂತ ಸೌಕರ್ಯ,  ಕಟ್ಟಡ ಸಮಸ್ಯೆಗಿಳಿರುವ ವಿದ್ಯಾರ್ಥಿ ನಿಲಯಗಳ ಅಂದಾಜು ಪಟ್ಟಿ ಮಾಡಿ ನವೀಕರಣ ಕೆಲಸ ಮಾಡಿಸಲಾಗುತ್ತಿದೆ.  ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಅನುದಾನ ದೊರೆತಿದ್ದು,  ಕಾಲೋನಿಗಳ ಅಭಿವೃದ್ಧಿ ಕೆಲಸಕ್ಕೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ನಮ್ಮ ಹೆಮ್ಮೆ ಎನ್ನುವಂತಹ ಸಂವಿಧಾನದ ಆಶಯ ಹಾಗೂ ಸಂವಿಧಾನ ಓದು ಎಂಬ ವಿಶೇಷ  ಕಾರ್ಯಕ್ರಮದ ಮಹತ್ವವನ್ನು ಎಲ್ಲ ಇಲಾಖೆಗೆ ನಿರಂತರವಾಗಿ ತಿಳಿಸಲಾಗಿದೆ.”

 -ರಂಗೇಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ

 

 

 

Tags:
error: Content is protected !!