Mysore
29
scattered clouds

Social Media

ಶನಿವಾರ, 24 ಜನವರಿ 2026
Light
Dark

‘ಸಾಂಪ್ರದಾಯಿಕ ಮಾಧ್ಯಮಕ್ಕೆ ಸಡ್ಡು ಹೊಡೆಯುತ್ತಿರುವ ಸಾಮಾಜಿಕ ಮಾಧ್ಯಮ’

‘ಸಿದ್ಧಾಂತದ ಮಾಧ್ಯಮದ ಎದುರು ನವ ಮಾಧ್ಯಮ ಸಡ್ಡು ಹೇಗೆ?’ ವಿಚಾರ ಕುರಿತ ಸಂವಾದದಲ್ಲಿ ಪ್ರೀತಿ ನಾಗರಾಜ್ʼ 

ಮೈಸೂರು: ಸಾಮಾಜಿಕ ಮಾಧ್ಯಮವು ಸಾಂಪ್ರದಾಯಿಕ ಮಾಧ್ಯಮಕ್ಕೆ ಸಡ್ಡು ಹೊಡೆಯುತ್ತಿದೆ ಎಂದು ಹಿರಿಯ ಪತ್ರಕರ್ತೆ ಪ್ರೀತಿ ನಾಗರಾಜ್ ಅಭಿಪ್ರಾಯಪಟ್ಟರು.

‘ಆಂದೋಲನ’ದ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ‘ಆಂದೋಲನ’ ಕಚೇರಿಯಲ್ಲಿ ‘ಸಿದ್ಧಾಂತದ ಮಾಧ್ಯಮದ ಎದುರು ನವ ಮಾಧ್ಯಮ ಸಡ್ಡು ಹೇಗೆ?’ ಎಂಬ ವಿಚಾರ ಕುರಿತು ನಡೆದ ಆನ್‌ಲೈನ್ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜನಬಳಕೆಗೆ ಅನುಕೂಲವಾಗುವಷ್ಟು ತಂತ್ರಜ್ಞಾನ ಬೆಳೆದ ನಂತರ ಸಾರ್ವಜನಿಕರ ಸೈಕಾಲಜಿ ಅರಿತ ಮಾಧ್ಯಮಗಳು ಹೊಸ ಹೊಸ ಪ್ಲಾಟ್‌ಫಾರ್ಮ್‌ಗಳನ್ನು ಪರಿಚಯಿಸಿದವು. ಅಂದರೆ ಯೂಟ್ಯೂಬ್, ಇನ್ ಸ್ಟಾಗ್ರಾಮ್, ಫೇಸ್‌ಬುಕ್ ಬಂದ ನಂತರ ಮಾಧ್ಯಮಗಳು ೬೦ ಸೆಕೆಂಡ್‌ಗಳ ಸುದ್ದಿ ಕೊಡಲು ಶುರುಮಾಡಿದವು ಎಂದರು.

ಕ್ಲಿಕ್ ಬೈಟ್ ಹೆಡ್‌ಲೈನ್‌ಗಳು: ಎರಡು ಮಾಧ್ಯಮಗಳು ಒಂದನೊಂದು ಪ್ರಭಾವಿಸೊ ರೀತಿ ಆಶ್ಚರ್ಯ ಆಗುತ್ತೆ. ವೆಬ್‌ಸೈಟ್‌ಗೆ ಹೆಚ್ಚು ಟ್ರಾಫಿಕ್ (ಸಂದರ್ಶಕರನ್ನು) ತರುವುದು ಮತ್ತು ಜಾಹೀರಾತು ವೀಕ್ಷಣೆಗಳನ್ನು ಹೆಚ್ಚಿಸುವುದು. ಕ್ಲಿಕ್ ಬೈಟ್ ಹೆಡ್‌ಲೈನ್ಗಳ ಆದ್ಯತೆ. ಇಲ್ಲಿ ವಿಷಯದ ಗುಣಮಟ್ಟಕ್ಕಿಂತ ಹೆಚ್ಚಾಗಿ ವೀಕ್ಷಕರ ಸಂಖ್ಯೆಗೆ ಆದ್ಯತೆ ನೀಡಲಾಗುತ್ತದೆ. ಇದರಿಂದ ಅಂತರ್ಜಾಲ ಮಾಧ್ಯಮಕ್ಕೆ ಜನರು ಹೇಗೆ ಬಳಸುತ್ತಿದ್ದಾರೆ ಎನ್ನುವ ಡೇಟ್ ಸಿಗುತ್ತದೆ ಎಂದರು.

ಮುಖ್ಯವಾಗಿ ಇಂದಿನ ಮಾಧ್ಯಮಗಳು ಪುಸ್ತಕ ವಿಮರ್ಶೆ, ರಂಗಭೂಮಿ ವಿಮರ್ಶೆ ಇಂತಹದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿಲ್ಲ. ಈ ಸಮಯದಲ್ಲಿ ಯುವ ಪೀಳಿಗೆ ಪುಸ್ತಕ ವಿಮರ್ಶೆ, ರಂಗಭೂಮಿ ವಿಮರ್ಶೆಗಳೆಲ್ಲಾ ಸಾಮಾಜಿಕ ಜಾಲತಾಣಕ್ಕೆ ಸೇರಿಸಿಕೊಂಡಿದೆ. ತುಂಬಾ ಜನ ಹುಡುಗ ಹುಡುಗಿಯರು ಇದನ್ನು ಫಾಲೊ ಮಾಡ್ತಿದ್ದಾರೆ. ಇದನ್ನೆಲ್ಲಾ ನೋಡಿದಾಗ, ಇಂದಿನ ಮಾಧ್ಯಮಗಳಲ್ಲಿ ಜಾಹೀರಾತುಗಳೇ ತುಂಬಿರುತ್ತದೆ ಎಂದು ಹೇಳಿದರು.

ಇನ್ನೂ ಮಹಿಳಾ ಮತ್ತು ಮಾಧ್ಯಮ ರಾಜಕೀಯ ಕುರಿತು ಮಾತನಾಡಿದ ಅವರು, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ೫೦ಕ್ಕೂ ಹೆಚ್ಚು ಮೀರಿದ ಮಹಿಳೆಯರಿದ್ದಾರೆ. ಅದರೆ ಅವರೆಲ್ಲಾ ಮುಂದಿನ ರಾಜಕೀಯವಾದ ವಿಧಾನಸಭೆ, ಪರಿಷತ್, ಸಂಸತ್ತುಗಳಲ್ಲಿಕಣ್ಮರೆಯಾಗುತ್ತಿದ್ದಾರೆ. ಅದರಲ್ಲಿ ಮಾಧ್ಯಮ ಪ್ರತಿನಿತ್ಯದಪಾತ್ರವೇನು. ಮಾಧ್ಯಮ ಆ ಮಹಿಳೆಯರನ್ನು ಹೇಗೆ ತೋರಿಸುತ್ತಿದೆ. ಮಹಿಳೆಯರು ಮಾಧ್ಯಮವನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ಅಧ್ಯಯನ ಮಾಡುತ್ತಿದ್ದೇನೆ ಎಂದು ತಿಳಿಸಿದರು.

” ಇಂದಿನ ಯುವ ಪೀಳಿಗೆ ಮೇಲೆ ನನಗೆ ಭರವಸೆ ಇದೆ. ಅವರಿಗೆ ಯಾವುದೇ ಅವಲಂಬನೆ ಇಲ್ಲ. ಅದು ಪ್ಲಸ್ ಪಾಯಿಂಟ್ ಕೂಡ ಆಗಬಹುದು. ನಂಬಿಕೆಯ ಕೊರತೆ ಸಹ ಆಗಬಹುದು.”

 -ಪ್ರೀತಿ ನಾಗರಾಜ್

” ‘ಆಂದೋಲನ’ ಕಚೇರಿಯಲ್ಲಿ ಒಂದು ರೀತಿಯ ಸಮ್ಮಿಶ್ರ ಭಾವ. ಒಂದು ಕಡೆ ಎಂಟು ವರ್ಷಗಳ ಹಿಂದೆ (೨೦೧೭ರ ನ.೨೩) ಅಗಲಿದ ‘ಆಂದೋಲನ’ದ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿಯವರು ಬಿಟ್ಟು ಹೋದನಿರ್ವಾತದ ನೋವು. ಇನ್ನೊಂದು ಕಡೆ ಅವರ ಸ್ಮರಣೆಯ ಸಲುವಾಗಿ ನಡೆದ ಆನ್ ಲೈನ್ ಚರ್ಚೆ ಹುಟ್ಟುಹಾಕಿದ ಹಲವು ಪ್ರಶ್ನೆಗಳು ಮತ್ತು ಕೆಲವು ಉತ್ತರಗಳ ಮೆಲುಕು. ‘ಮಾಧ್ಯಮ ಎನ್ನುವುದು ಮಾರಾಟದ ಸರಕಲ್ಲ’ ಎಂಬ ವಿಚಾರ ಕುರಿತು ಶನಿವಾರ ನಡೆದ ಸಂವಾದದಲ್ಲಿ ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ, ಡಾ.ಜಗದೀಶ್ ಕೊಪ್ಪ ಮತ್ತು ಪ್ರೀತಿ ನಾಗರಾಜ್ ಭಾಗವಹಿಸಿದ್ದರು. ಸಾಹಿತಿ ಅಬ್ದುಲ್ ರಶೀದ್ ಸಂವಾದ ನಡೆಸಿಕೊಟ್ಟರು. ಒಂದು ಕಾಲದಲ್ಲಿ ಸತ್ಯ, ಆದರ್ಶ ಮತ್ತು ಸಾಮಾಜಿಕ ಬದ್ಧತೆಗೆ ಜೀವಂತ ಪ್ರತೀಕದಂತಿದ್ದ ಪತ್ರಿಕೋದ್ಯಮ ಈಗ ಏಕೆ ಮಾರಾಟದ ಸರಕಾಗುತ್ತಿದೆ ಎಂಬ ಕಾಳಜಿಯ ಹಿನ್ನೆಲೆಯಲ್ಲಿ ಮೂಡಿಬಂದ ಈ ಸಂವಾದ ಒಂದು ಕಡೆ ಈವತ್ತಿನ ಪತ್ರಿಕೋದ್ಯಮದ ಕುರಿತ ಒಂದು ಆರೋಗ್ಯಕರ ಸಂವಾದವಾಗಿದ್ದರೆ, ಇನ್ನೊಂದು ಕಡೆ ನಿಮ್ಮ ‘ಆಂದೋಲನ’ ದಿನಪತ್ರಿಕೆ ಡಿಜಿಟಲ್ ಲೋಕದೊಳಕ್ಕೆ ತನ್ನ ಹೆಜ್ಜೆಗಳನ್ನು ದೃಢವಾಗಿ ಇರಿಸುತ್ತಿರುವ ಕುರುಹೂ ಆಗಿದೆ.”

 -ಸಂಪಾದಕರು 

Tags:
error: Content is protected !!