Mysore
20
broken clouds

Social Media

ಭಾನುವಾರ, 05 ಜನವರಿ 2025
Light
Dark

ʻಆಂದೋಲನ ಭವನʼ ಉದ್ಘಾಟಿಸಿದ್ದ ಎಸ್‌ಎಂ ಕೃಷ್ಣ

ಮೈಸೂರು: ನಗರದ ವಿಶ್ವೇಶ್ವರ ನಗರದಲ್ಲಿ ನೂತನ ವಾಗಿ ನಿರ್ಮಿಸಿದ್ದ ‘ಆಂದೋಲನ ಭವನ’ ಹಾಗೂ ಮುದ್ರಣ ಯಂತ್ರದ ಉದ್ಘಾಟನೆಯನ್ನು ಮುಖ್ಯಮಂತ್ರಿ ಎಸ್. ಎಂ ಕೃಷ್ಣ ಅವರು ೨೦೦೧ರ ಡಿಸೆಂಬರ್ ೧೮ರಂದು ನೆರವೇರಿಸಿದ್ದರು.

ಅಂದು ಅವರು ಆಡಿದ ಮಾತುಗಳ ಆಯ್ದ ಭಾಗ ಇಲ್ಲಿದೆ. ಒಂದು ಪತ್ರಿಕೆ ಜನ ಸಾಮಾನ್ಯರ ಮನಸ್ಸಿನಲ್ಲಿ ಶಾಶ್ವತವಾದಂಥ ಛಾಪನ್ನು ಮೂಡಿಸಬೇಕಾಗಿದ್ದರೆ ಆ ಪತ್ರಿಕೆಯ ದೃಷ್ಟಿ ಮತ್ತು ಅದನ್ನು ನಡೆಸುವ ಜನಗಳ ಮನೋದೃಷ್ಟಿ ಬಹಳ ಸೂಕ್ಷ್ಮವಾಗಿರುತ್ತದೆ. ‘ಆಂದೋಲನ’ ಸಣ್ಣ ಪತ್ರಿಕೆಯಾಗಿ ಪ್ರಾರಂಭವಾಗಿ ಇದು ಅಂತರ ಜಿಲ್ಲಾ ಮಟ್ಟಕ್ಕೆ ಬೆಳೆದು ಸಣ್ಣ ಅಥವಾ ಪ್ರಾದೇಶಿಕ ಪತ್ರಿಕೆಗಳು ಸಮಾಜಕ್ಕೆ ಬಹುದೊಡ್ಡ ಕೆಲಸವನ್ನು ಮಾಡಬಹುದೆಂದು ತೋರಿಸಿದೆ, ಇಂದು ನಮ್ಮ ನಿಮ್ಮೆಲ್ಲರನ್ನೂ ಒಂದೆಡೆ ತಂದಿರುವ ರಾಜಶೇಖರ ಕೋಟಿ ಮತ್ತು ಆಂದೋಲನ ಬಳಗ.

ಭೂ ಸುಧಾರಣೆ, ಬ್ಯಾಂಕುಗಳ ರಾಷ್ಟ್ರೀಕರಣ ಹಾಗೂ ರಾಜಮಹಾರಾಜರಿಗೆ ನೀಡುತ್ತಿದ್ದ ರಾಜಧನವನ್ನು ರದ್ದುಪಡಿಸುವುದರ ಬಗ್ಗೆ ಅಂದಿನ ಬಹುಪಾಲು ಸಮಾಜವಾದಿಗಳು ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ಅಂದಿನ ಸಮಾಜವಾದಿಯ ಪ್ರಮುಖ ರೂವಾರಿಗಳಾದ ಡಾ. ಲೋಹಿಯಾ, ಜೆಪಿ, ಅಶೋಕ್ ಮೆಹ್ರಾ ಇಂಥವರು ಇದಕ್ಕೆ ಬಹು ಗಂಭೀರವಾದ ಚಾಲನೆ ನೀಡಿದರು.

ಸಣ್ಣ ಪತ್ರಿಕೆಯನ್ನು ನಡೆಸಿಕೊಂಡು ಬರುವುದು ಕಷ್ಟ. ಆದರೆ ಅದರಲ್ಲಿ ಯಶಸ್ವಿಯಾಗುವವರು ಜನಾದರಣೆಗೆ ಒಳಗಾಗಲೇಬೇಕು ಎನ್ನುವಾಗ ಪ್ರತ್ಯಕ್ಷ ನಿದರ್ಶನವಾಗಿ ರಾಜಶೇಖರ ಕೋಟಿ ಅವರು ನಮ್ಮ ಮುಂದೆ ಇದ್ದಾರೆ.

ಇಂತಹ ಪತ್ರಿಕೆಗಳು ಸಮರ್ಥವಾದ ರೀತಿಯಲ್ಲಿ ಆ ಪ್ರದೇಶದ ಜನರ ನಿರೀಕ್ಷೆ- ಆಶೋತ್ತರಗಳನ್ನು ಅತ್ಯಂತ ಪ್ರಭಾವಶಾಲಿಯಾಗಿ ಪತ್ರಿಕೋದ್ಯಮ ಜಿಲ್ಲಾ ಮಟ್ಟದಲ್ಲಿ ಒಂದು ಉದ್ಯಮ ಮಾತ್ರವಾಗಿಯಲ್ಲದೆ ಜನಾಭಿಮಾನದ ಸಂಕೇತವೂ ಆಗಿದೆ. ಸಾಹಿತಿ ದೇವನೂರ ಮಹಾದೇವ, ವಿ. ಶ್ರೀನಿವಾಸ ಪ್ರಸಾದ್, ‘ಆಂದೋಲನ’ ದಿನಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿ, ನಿರ್ಮಲಾ ಕೋಟಿ ಹಾಜರಿದ್ದರು.

 

Tags: