ರಾಜಸ್ತಾನ ಸರ್ಕಾರವು ಅಲ್ಲಿನ ಸರ್ಕಾರಿ ಶಾಲೆಗಳ 9ನೇ ತರಗತಿಯ ವಿದ್ಯಾರ್ಥಿನಿಯರಿಗೆ ಉಚಿತವಾಗಿ ನೀಡುವ ಬೈಸಿಕಲ್‌ಗಳ ಬಣ್ಣವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿದ್ದು, ಇದಕ್ಕಾಗಿ 11 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಹಿಂದೆ ವಸುಂಧರಾ ರಾಜೆ ಸಿಂದಿಯಾ ಮುಖ್ಯಮಂತ್ರಿ ಯಾಗಿದ ಸಂದರ್ಭದಲ್ಲಿ ಈ ಬೈಸಿಕಲ್‌ಗಳು ಕೇಸರಿ ಬಣ್ಣದಲ್ಲಿ ದ್ದವು. ತದನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆ ಸೈಕಲ್‌ಗಳ ಬಣ್ಣವನ್ನು ಕಪ್ಪು ಬಣ್ಣಕ್ಕೆ ಬದಲಾಯಿಸಿತ್ತು. ಈಗ ಮತ್ತೊಮ್ಮೆ ರಾಜಸ್ತಾನದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಬೈಸಿಕಲ್‌ಗಳ ಬಣ್ಣವನ್ನು ಮತ್ತೇ ಕೇಸರಿ ಬಣ್ಣಕ್ಕೆ ಬದಲಾಯಿಸುತ್ತಿದೆ. ಸದ್ಯ ರಾಜಕೀಯ ಪಕ್ಷಗಳು ಹೀಗೆ ಮಕ್ಕಳಿಗೆ ಕೊಡುವ ಬೈಸಿಕಲ್ ಗಳಲ್ಲಿಯೂ ರಾಜಕೀಯ ಮಾಡುತ್ತಿರುವುದನ್ನು ನೋಡಿದರೆ ಈ ಕುತ್ತಿತ ರಾಜಕೀಯಕ್ಕೆ ಕೊನೆ ಎಂದು? ಎಂಬ ಪ್ರಶ್ನೆ ಮೂಡುತ್ತದೆ. ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ನೆರವು ನೀಡಿದರೆ ದೇಶ ದಿವಾಳಿಯಾಗುತ್ತದೆ ಎನ್ನುವವರು ರಾಜಸ್ತಾನ ಸರ್ಕಾರದ ಈ ದುಂದು ವೆಚ್ಚವನ್ನು ಏಕೆ ಪ್ರಶ್ನಿಸುತ್ತಿಲ್ಲ?
-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು,





