ಗಿರೀಶ್ ಹುಣಸೂರು
ಮೈಸೂರು: ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಮೊದಲ ದಿನವೇ ಅಥವಾ ಒಂದೆರಡು ದಿನಗಳಲ್ಲಿ ಹೊಸ ಸಮವಸ ಧರಿಸಿ ತರಗತಿಗೆ ಹಾಜರಾಗಬಹುದು. ಅದಕ್ಕೆ ಪೂರಕವಾದ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ.
ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳುಗಳೇ ಕಳೆದರೂ ಸಮವಸ್ತ್ರ ನೀಡಿಲ್ಲ ಎಂಬ ಪೋಷಕರು ಮತ್ತು ಮಕ್ಕಳ ಕೊರಗನ್ನು ಮುಂಬರುವ ೨೦೨೬-೨೭ನೇ ಶೈಕ್ಷಣಿಕ ಸಾಲಿನಲ್ಲಿ ನಿವಾರಿಸಲು ರಾಜ್ಯ ಸರ್ಕಾರ ಮುಂದಾಗಿದೆ.
೨೦೨೬-೨೭ನೇ ಶೈಕ್ಷಣಿಕ ಸಾಲಿಗೆ ವಿದ್ಯಾವಿಕಾಸ ಯೋಜನೆಯಡಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡಲಿರುವ ಸುಮಾರು ೩೮.೨೨ ಲಕ್ಷ ವಿದ್ಯಾರ್ಥಿಗಳಿಗೆ ಎರಡು ಜೊತೆ ಉಚಿತ ಸಮವಸ್ತ್ರ ಗಳನ್ನು ವಿತರಿಸಲು ಶಾಲಾ ಶಿಕ್ಷಣ ಇಲಾಖೆ ಈಗಾಗಲೇ ಪ್ರಕ್ರಿಯೆ ಆರಂಭಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶಾಲೆ ಆರಂಭದಲ್ಲೇ ವಿದ್ಯಾರ್ಥಿಗಳಿಗೆ ಸಮವಸ ಕೈ ಸೇರುವ ಸಾಧ್ಯತೆ ಇದೆ.
ಸಮವಸಗಳನ್ನು ಶಾಲೆ ಆರಂಭದಲ್ಲೇ ಒದಗಿಸುವ ನಿಟ್ಟಿನಲ್ಲಿ ಇಲಾಖೆ ಆಯುಕ್ತರು ೨೦೨೫ರ ನವೆಂಬರ್ – ಡಿಸೆಂಬರ್‌ನಲ್ಲೇ ಸರ್ಕಾರದ ಜೊತೆಗೆ ಪತ್ರ ವ್ಯವಹಾರ ನಡೆಸಿದ್ದಾರೆ. ಮೊದಲ ಜೊತೆ ಸಮವಸ ಸರಬರಾಜಿಗೆ ಬೆಂಗಳೂರಿನ ಮೆ.ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳ ೧ರಿಂದ ೭ನೇ ತರಗತಿವರೆಗಿನ ಗಂಡು ಮಕ್ಕಳು ಹಾಗೂ ೧ ರಿಂದ ೫ನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಒಟ್ಟು ೧೯.೮೪ ಲಕ್ಷ ಮೀಟರ್ ಸಮವಸದ ಬಟ್ಟೆ ಸರಬರಾಜಿಗೆ ೧೪.೬೮ ಕೋಟಿ ರೂ. ಮತ್ತು ಇ-ಟೆಂಡರ್ ಮೂಲಕ ಧಾರವಾಡ ಮತ್ತು ಕಲಬುರಗಿ ವಿಭಾಗದ ಜಿಲ್ಲೆಗಳ ೧ರಿಂದ ಹತ್ತನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳ ೮ ರಿಂದ ಹತ್ತನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಚೂಡಿದಾರ್ ಒಳಗೊಂಡಂತೆ ಒಟ್ಟು ೪೮.೪೦ ಲಕ್ಷ ಮೀಟರ್ ಬಟ್ಟೆ ಸರಬರಾಜಿಗೆ ೬೪.೬೩ ಕೋಟಿ ರೂ. ಅನುದಾನದ ಅವಶ್ಯಕತೆ ಇರುತ್ತದೆ.
೨೦೨೬-೨೭ನೇ ಸಾಲಿಗೆ ಎರಡನೇ ಜೊತೆ ಸಮವಸ್ತ್ರ ಸರಬರಾಜು ಸಂಬಂಧ ಪಿಎಬಿ ಯಿಂದ ೨೦೨೬-೨೭ನೇ ಸಾಲಿಗೆ ಮಂಜೂರಾಗುವ ಅನುದಾನದಿಂದ ಅಗತ್ಯವಿರುವ ಒಟ್ಟು ೬೮.೨೪ ಲಕ್ಷ ಮೀಟರ್ ಸಮವಸ ಬಟ್ಟೆಯನ್ನು ಇ-ಟೆಂಡರ್ ಮೂಲಕ ಅಂದಾಜು ಶೇ.೫ರಷ್ಟು ಹೆಚ್ಚುವರಿ ಮೊತ್ತ ಒಳಗೊಂಡಂತೆ ೮೦.೨೦ ಕೋಟಿ ರೂ. ಅನುದಾನದ ಅವಶ್ಯಕತೆ ಇರುತ್ತದೆ.
೨೦೨೬-೨೭ನೇ ಸಾಲಿಗೆ ಒಂದರಿಂದ ಹತ್ತನೇ ತರಗತಿವರೆಗಿನ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಮೊದಲನೇ ಜೊತೆಗೆ ಒಟ್ಟು ಅಂದಾಜು ೮೩ ಕೋಟಿ ರೂ. ಹಾಗೂ ಎರಡನೇ ಜೊತೆಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಮಂಜೂರಾಗುವ ೮೦.೨೦ ಕೋಟಿ ರೂ. ಸೇರಿದಂತೆ ಒಟ್ಟು ೧೬೩.೨೦ ಕೋಟಿ ರೂ. ಅನುದಾನದಲ್ಲಿ ಸರಬರಾಜು ಮಾಡಲು ಅನುಮೋದನೆ ಕೋರಲಾಗಿದೆ.
ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಪತ್ರಕ್ಕೆ ಹಲವು ಷರತ್ತುಗಳೊಂದಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವ ಸರ್ಕಾರ, ಸಮವಸ ಸರಬರಾಜಿಗೆ ಒದಗಿಸಲಾಗಿರುವ ೧೬೩.೨೦ ಕೋಟಿ ರೂ. ಅನುದಾನದ ಮಿತಿಯೊಳಗೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಂತೆ ಹೇಳಿದೆ.
ಸರಬರಾಜು ಸಂಸ್ಥೆಗಳೊಂದಿಗೆ ಸಮವಸದ ಬಟ್ಟೆಯ ಪ್ರಮಾಣ ಮತ್ತು ದರಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಿ ಒಡಂಬಡಿಕೆ ಮಾಡಿಕೊಳ್ಳಬೇಕು. ಸಮವಸ್ತ್ರ ಸರಬರಾಜಾದ ಒಂದು ತಿಂಗಳ ಅವಧಿಯೊಳಗೆ ಅದರ ಗುಣಮಟ್ಟದ ವರದಿಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಪಡೆಯಬೇಕು. ಸಮವಸದ ಗುಣಮಟ್ಟ ಖಾತರಿಪಡಿಸಿಕೊಂಡ ನಂತರ ಸರ್ಕಾರದ ಅನುಮತಿ ಪಡೆದು ಸರಬರಾಜು ಸಂಸ್ಥೆಗಳಿಗೆ ಬಾಕಿ ಮೊತ್ತವನ್ನು ಪಾವತಿಸಬೇಕು ಎಂದು ನಿರ್ದೇಶಿಸಲಾಗಿದೆ.
ʼ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಶಾಲಾವಾರು ವಿತರಣೆಯಾಗದೆ ಉಳಿದಿರುವ ಸಮವಸ್ತ್ರ ಗಳ ಸಂಖ್ಯೆಯನ್ನು ಹೊರತುಪಡಿಸಿ, ಬೇಡಿಕೆಯ ಪಟ್ಟಿಯನ್ನು ಪಡೆಯಬೇಕು. ಈ ಸಂಬಂಧ ಯಾವುದೇ ನಿರ್ಲಕ್ಷ್ಯತೆ ಮತ್ತು ಬೇಜವಾಬ್ದಾರಿತನ ತೋರದೆ ಕ್ರಮವಹಿಸಲು ಶಿಕ್ಷಣ ಇಲಾಖೆಗೆ ರಾಜ್ಯ ಸರ್ಕಾರ ಸೂಚಿಸಿದೆ.”
” ಸರ್ಕಾರಿ ಶಾಲೆಗಳ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ಎರಡು ಜೊತೆ ಸಮವಸಗಳನ್ನು ಅಂದಾಜು ೧೬೩.೨೦ ಕೋಟಿ ರೂ. ಅನುದಾನ ದಲ್ಲಿ ಮೆ.ಕೆಎಚ್‌ಡಿಸಿ ಹಾಗೂ ಇ- ಟೆಂಡರ್ ಮೂಲಕ ಖರೀದಿಸಿ ಸರಬರಾಜು ಮಾಡಲು ಹಲವು ಷರತ್ತುಗಳಿಗೆ ಒಳಪಟ್ಟು ಖರೀದಿಸಿ ವಿತರಿಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.”
-ಆರ್.ವಿ.ಶುಭಮಂಗಳ, ಸರ್ಕಾರದ ಅಧಿನ ಕಾರ್ಯದರ್ಶಿ (ಯೋಜನೆ), ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ





