ಚಾ. ಬೆಟ್ಟದ ಮಹಿಷಾಸುರನ ಪ್ರತಿಮೆಗೆ ಪುಷ್ಪಾರ್ಚನೆ: ಪುರುಷೋತ್ತಮ್ ಮಾಹಿತಿ
ಮೈಸೂರು: ಮಹಿಷ ದಸರಾ ಆಚರಣಾ ಸಮಿತಿಯ ವತಿಯಿಂದ ಸೆ. ೨೯ರಂದು ಬೆಳಿಗ್ಗೆ ೧೦. ೩೦ಕ್ಕೆ ನಗರದ ಪುರಭವನದಲ್ಲಿ ಮಹಿಷಾ ದಸರಾ ‘ಮಹಿಷ ಮಂಡಲೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಎಂ. ಪುರುಷೋತ್ತಮ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ೮. ೩೦ಕ್ಕೆ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆಗೆ ಗಣ್ಯರಿಂದ ಪುಷ್ಪಾರ್ಚಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಗಾಂಧಿನಗರದ ಉರಿಲಿಂಗ ಪೆದ್ದೀಶ್ವರ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಚಾಮರಾಜನಗರದ ನಳಂದ ಬುದ್ಧವಿಹಾರದ ಬೋಽದತ್ತ ಬಂತೇಜಿ ಉಪಸ್ಥಿತಿಯಲ್ಲಿ ಚಿಂತಕ ಯೋಗೀಶ್ ಮಾಸ್ಟರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪ್ರಗತಿಪರ ಚಿಂತಕ ಶಿವಸುಂದರ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಾಹಿತಿ ಪ್ರೊ. ಕೆ. ಎಸ್. ಭಗವಾನ್, ಇತಿಹಾಸ ತಜ್ಞ ಪ್ರೊ. ಪಿ. ವಿ. ನಂಜರಾಜ ಅರಸ್, ಸಿದ್ದಸ್ವಾಮಿ, ಡಾ. ಕೃಷ್ಣಮೂರ್ತಿ ಚಮರಂ ಪಾಲ್ಗೊಳ್ಳಲಿದ್ದಾರೆ. ದಲಿತ ಮತ್ತು ಪ್ರಗತಿಪರ ಸಂಘಟನೆಗಳು, ದಲಿತ ವಿದ್ಯಾರ್ಥಿ ಒಕ್ಕೂಟ, ಸಂಶೋಧಕರ ಸಂಘ ಹಾಗೂ ಅಂಬೇಡ್ಕರ್ ಸಂಘಟನೆ ಗಳ ಅಧ್ಯಕ್ಷರು, ಮುಖಂಡರು, ಪದಾಽಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಸಾಹಿತಿ ಕೆ. ಎಸ್. ಭಗವಾನ್ ಮಾತನಾಡಿ, ಪಟ್ಟಭದ್ರ ಹಿತಾಸಕ್ತಿಗಳು ಪುರಾಣ ಮತ್ತು ಇತಿಹಾಸದ ಕುರಿತು ಜನರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ದೇಶದಲ್ಲಿ ಬ್ರಾಹ್ಮಣರೇ ಚರಿತ್ರಕಾರರಾಗಿದ್ದರಿಂದ ತಮಗೆ ಅನುಕೂಲವಾಗು ವಂತೆ ಚರಿತ್ರೆಯನ್ನು ತಿರುಚಿದ್ದಾರೆ. ಬ್ರಾಹ್ಮಣೇತರರೂ ಅಕ್ಷರವಂತರಾಗಿರುವುದರಿಂದ ಸರಿಯಾದ ಇತಿಹಾಸ ವನ್ನು ಓದಿಕೊಳ್ಳಬೇಕು ಎಂದು ತಿಳಿ ಹೇಳಿದರು.
ಇತಿಹಾಸ ತಜ್ಞ ಪ್ರೊ. ಪಿ. ವಿ. ನಂಜರಾಜ ಅರಸ್ ಮಾತನಾಡಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪ್ರತಿಯೊಬ್ಬರೂ ಅವರವರ ನಂಬಿಕೆಯ ಅನುಸಾರವಾಗಿ ಧಾರ್ಮಿಕ ಆಚರಣೆಗಳನ್ನು ನಡೆಸಲು ಸಂವಿಧಾನವೇ ಅವಕಾಶ ಕಲ್ಪಿಸಿದೆ. ಮಹಿಷ ಮಂಡಲೋತ್ಸವ ಆಚರಣೆಗೂ ಅವಕಾಶವಿದೆ. ಆದರೆ, ಚಾಮುಂಡಿಯ ಪಾವಿತ್ರ್ಯತೆಗೆ ಧಕ್ಕೆ ಬಾರದ ರೀತಿಯಲ್ಲಿ ಆಚರಣೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಆದರೆ, ಮಾಜಿ ಸಂಸದರೊಬ್ಬರು ಯದುವೀರ್ ಅವರ ಹೇಳಿಕೆಯನ್ನು ವಿರೋಽಸುವ ಏಕೈಕ ದುರುದ್ದೇಶದಿಂದ ಮಹಿಷ ಮಂಡಲೋತ್ಸವ ವನ್ನು ತಡೆಯುವುದಾಗಿ ಹೇಳುತ್ತಿದ್ದಾರೆ. ಯದುವೀರ್ ಹೇಳಿಕೆಯ ನಂತರ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಇದು ಮಾಜಿ ಸಂಸದರಿಗೆ ಯದುವೀರ್ ಅವರ ಮೇಲೆ ಇರುವ ಹೊಟ್ಟೆಕಿಚ್ಚನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಸಾಹಿತಿಗಳಾದ ಸಿದ್ದಸ್ವಾಮಿ, ಡಾ. ಕೃಷ್ಣಮೂರ್ತಿ ಚಮರಂ, ಸೋಮಯ್ಯ ಮಲೆಯೂರು, ದಲಿತ ವೆಲ್ -ರ್ ಟ್ರಸ್ಟ್‌ನ ಅಧ್ಯಕ್ಷ ಪ್ರೊ. ಟಿ. ಎಂ. ಮಹೇಶ್ ಮತ್ತಿತರರು ಹಾಜರಿದ್ದರು.